ಕಾಲುವೆಗೆ ಬಿದ್ದ ವಾಹನ ;7 ಮಕ್ಕಳು ನಾಪತ್ತೆ, 22 ಮಂದಿ ರಕ್ಷಣೆ

Team Udayavani, Jun 20, 2019, 9:51 AM IST

ಲಕ್ನೋ: ಉತ್ತರ ಪ್ರದೇಶದ ರಾಜಧಾನಿ ಲಕ್ನೋದಲ್ಲಿ ಗುರುವಾರ ಬೆಳಗ್ಗೆ ಪಿಕಪ್‌ ವಾಹನವೊಂದು ಕಾಲುವೆಗೆ ಬಿದ್ದು 7 ಮಂದಿ ಮಕ್ಕಳು ಕಣ್ಮರೆಯಾಗಿದ್ದಾರೆ. ವಾಹನದಲ್ಲಿದ್ದ 22 ಮಂದಿಯನ್ನು ಸ್ಥಳೀಯರು ರಕ್ಷಿಸಿದ್ದಾರೆ.

ನಗ್ರಾಮ್‌ ಪೊಲೀಸ್‌ ಠಾಣೆಯ ವ್ಯಾಪ್ತಿಯಲ್ಲಿರುವ ಪಟ್ವಾಖೇಡಾ ಎಂಬಲ್ಲಿ ಈ ದುರಂತ ನಡೆದಿದೆ.

ವ್ಯಾನ್‌ನಲ್ಲಿ 29 ರಿಂದ 30 ಜನರಿದ್ದರು ಎಂದು ತಿಳಿದು ಬಂದಿದ್ದು , 22 ಮಂದಿಯನ್ನು ರಕ್ಷಿಸಲಾಗಿದೆ. 7ಮಂದಿ ಮಕ್ಕಳಿಗಾಗಿ ಎನ್‌ಡಿಆರ್‌ಎಫ್, ಅಗ್ನಿಶಾಮಕದಳ ಮತ್ತು ಪೊಲೀಸರೊಂದಿಗೆ ಸ್ಥಳೀಯರು ಹುಡುಕಾಟ ನಡೆಸುತ್ತಿದ್ದಾರೆ.

ಮದುವೆ ಸಮಾರಂಭವನ್ನು ಮುಗಿಸಿ ವಾಪಾಸು ಬರುತ್ತಿದ್ದ ವೇಳೆ ಅವಘಡ ಸಂಭವಿಸಿದೆ ಎಂದು ವಿವರಗಳು ಲಭ್ಯವಾಗಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ