ವಿಡಿಯೋ: ಕೂಡಿಟ್ಟ 50 ಸಾವಿರ ರೂ. ಕಾಯಿನ್ ಗಳನ್ನು ಶೋರೂಮ್ ಗೆ ಕೊಟ್ಟು ಬೈಕ್ ಖರೀದಿಸಿದ.!
ವಿ.ಭೂಪತಿ ಎನ್ನುವವರು 2.6 ಲಕ್ಷ ರೂ.ವನ್ನು ಕಾಯಿನ್ ಗಳಾಗಿ ಕೊಟ್ಟು ಬೈಕ್ ಖರೀದಿಸಿದ್ದರು.
Team Udayavani, Oct 31, 2022, 6:12 PM IST
ಗುವಾಹಟಿ: ವ್ಯಕ್ತಿಯೊಬ್ಬ ತನ್ನ ಕನಸಿನ ಬೈಕ್ ವೊಂದನ್ನು ಖರೀದಿಸಿದ್ದಾನೆ. ಈ ಬೈಕ್ ಖರೀದಿಸಲು ಶೋರೂಮ್ ಗೆ ಕೊಟ್ಟ ಹಣ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಕರೀಂಗಂಜ್ ಜಿಲ್ಲೆಯ ಸೂರಜನ್ ರಾಯ್ ಎನ್ನುವ ವ್ಯಕ್ತಿ ತನ್ನ ಕನಸಿನ ಬೈಕ್ ಖರೀದಿಸಲು 50 ಸಾವಿರ ರೂ. ಒಟ್ಟು ಮಾಡಿದ್ದಾನೆ. ವಿಶೇಷವೆಂದರೆ ಕಳೆದ ಕೆಲ ವರ್ಷಗಳಿಂದ ಒಂದೊಂದು ರೂ. ಒಟ್ಟು ಮಾಡಿದ್ದಾನೆ. ಇದರಲ್ಲಿ ಒಂದು ರೂಪಾಯಿ, ಎರಡು ರೂಪಾಯಿ, ಐದು, ಹತ್ತು ರೂಪಾಯಿ ಕಾಯಿನ್ ಗಳು ಸೇರಿವೆ. ಈ ಕಾಯಿನ್ ಗಳನ್ನು ಡಬ್ಬಿಗಳಲ್ಲಿ ಒಟ್ಟು ಮಾಡಿದ್ದಾರೆ.
ಇತ್ತೀಚೆಗೆ ಸೂರಜನ್ ರಾಯ್ ಶೋರೂಮ್ ಗೆ ತೆರಳಿ ತಾನು ಅಪಾಚೆ 460 ವಿ ಬೈಕ್ ಖರೀದಿಸಬೇಕೆಂದಿದ್ದೇನೆ. ಇದಕ್ಕಾಗಿ 50 ಸಾವಿ ರೂ. ಡೌನ್ ಪೇಮೆಂಟ್ ಆಗಿ ನೀಡುತ್ತೇನೆ. ಈ 50 ಸಾವಿರ ರೂ.ಗಳ ಕಾಯಿನ್ ನೀಡುತ್ತೇನೆ ಎಂದಿದ್ದಾರೆ. ಇದಕ್ಕೆ ಶೋರೂಮ್ ಸಿಬ್ಬಂದಿಗಳು ಸಮ್ಮತಿ ಸೂಚಿಸಿದ್ದರು.
ಸೂರಜನ್ ರಾಯ್ ಶೋರೂಮ್ ಗೆ ರಾಶಿಗಟ್ಟಲೇ ಕಾಯಿನ್ ನ್ನು ತಂದು ಸಿಬ್ಬಂದಿಗೆ ಕೊಟ್ಟಿದ್ದಾರೆ. ಶೋರೂಮ್ ಸಿಬ್ಬಂದಿಗಳು ಕಾಯಿನ್ ಎಣಿಸುತ್ತಿರುವ ವಿಡಿಯೋ ವೈರಲ್ ಆಗಿದೆ.
ಇದೇ ವರ್ಷದ ಮಾರ್ಚ್ ನಲ್ಲಿ ತಮಿಳುನಾಡಿನ ವಿ.ಭೂಪತಿ ಎನ್ನುವವರು 2.6 ಲಕ್ಷ ರೂ.ವನ್ನು ಕಾಯಿನ್ ಗಳಾಗಿ ಕೊಟ್ಟು ಬೈಕ್ ಖರೀದಿಸಿದ್ದರು. ಶೋ ರೂಮ್ ಸಿಬ್ಬಂದಿಗಳು ಕಾಯಿನ್ ಎಣಿಸಲು 10 ಗಂಟೆ ತೆಗೆದುಕೊಂಡಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ