ರಾಮ್ ದೇವ್ ವಿರುದ್ಧ ವಿಡಿಯೋ: FBಗೆ ದಿಲ್ಲಿ ಹೈಕೋರ್ಟ್ ನಿರ್ದೇಶ
Team Udayavani, Mar 4, 2019, 11:46 AM IST
ಹೊಸದಿಲ್ಲಿ : ಯೋಗ ಗುರು ಬಾಬಾ ರಾಮ್ ದೇವ್ ವಿರುದ್ಧ ಆಕ್ಷೇಪಾರ್ಹ ಮತ್ತು ನಿರಾಧಾರ ಆರೋಪಗಳನ್ನು ಒಳಗೊಂಡ ವಿಡಿಯೋಗಳ ಲಿಂಕ್ ಕಿತ್ತು ಹಾಕುವಂತೆ ದಿಲ್ಲಿ ಹೈಕೋರ್ಟ್ ಇಂದು ಫೇಸ್ ಬುಕ್ ಗೆ ನಿರ್ದೇಶ ನೀಡಿದೆ.
ಗೂಗಲ್ ಮತ್ತು ಯೂ ಟ್ಯೂಬ್ ಗಳು ಈ ವಿಡಿಯೋಗಳ ಲಿಂಕ್ ಅನ್ನು ತಮ್ಮ ವೇದಿಕೆಯಿಂದ ಕಿತ್ತು ಹಾಕಿವೆ ಎಂದು ಕೋರ್ಟ್ ಹೇಳಿತು.
ಆಕ್ಷೇಪಾರ್ಹ ವಿಡಿಯೋವನ್ನು ವೀಕ್ಷಿಸಿದ ಬಳಿಕ ದಿಲ್ಲಿ ಹೈಕೋರ್ಟ್, ಪ್ರಗತಿಪರರೋರ್ವರು ಬಾಬಾ ರಾಮ್ ದೇವ್ ಮತ್ತು ಪತಂಜಲಿ ವಿರುದ್ಧ ವಿವಿಧ ಬಗೆಯ ಆಕ್ಷೇಪಾರ್ಹ ಆರೋಪಗಳನ್ನು ಮಾಡಿ ಬೆದರಿಕೆ ಒಡ್ಡಿರುವುದು ವಿಡಿಯೋದಲ್ಲಿ ಕಂಡು ಬಂದಿರುವುದಾಗಿ ಹೇಳಿತು.