ಹಂತಕನಿಗೆ ಪ್ರಾಣಭೀತಿಯಂತೆ; ಕೂಲಿಕಾರ್ಮಿಕನ ಕೊಂದವನ ಅಳಲು

Team Udayavani, Feb 20, 2018, 3:30 PM IST

ಜೈಪುರ: ಕಳೆದ ವರ್ಷ ಡಿಸೆಂಬರ್‌ 6ರಂದು ರಾಜಸ್ಥಾನದಲ್ಲಿ “ಲವ್‌ ಜಿಹಾದ್‌’ ಆರೋಪದಡಿ, ಮೊಹಮ್ಮದ್‌ ಅಫ್ರಜುಲ್‌ ಎಂಬ ಕೂಲಿಕಾರ್ಮಿಕನೊಬ್ಬನನ್ನು ಕೊಂದು ಜೈಲುಪಾಲಾಗಿರುವ ಶಂಭುಲಾಲ್‌ ರೆಗರ್‌, ಭಾನುವಾರ ಜೈಲಿನಿಂದಲೇ ತಾನೇ ಚಿತ್ರಿಸಿರುವ ಸೆಲ್ಫಿ ವಿಡಿಯೋವೊಂದನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ. 

ಇದರಲ್ಲಿ ಮಾತನಾಡಿರುವ ಆತ, ಅಫ್ರಜುಲ್‌ ನನ್ನು ಕೊಂದಿದ್ದಕ್ಕೆ ತನಗೆ ಯಾವುದೇ ಪಶ್ಚಾತ್ತಾಪವಿಲ್ಲ ಎಂದಿದ್ದಾನೆ. ಆದರೆ, ಜೈಲಿನಲ್ಲಿ ತನಗೆ ಇತ್ತೀಚೆಗೆ ಪರಿಚಿತನಾಗಿರುವ ವ್ಯಕ್ತಿಯೊಬ್ಬ ತನ್ನ ಹತ್ಯೆಗೆ ಸಂಚು ಹೂಡಿರ ಬಹು ದೆಂಬ ಗುಮಾನಿ ಯನ್ನೂ ವ್ಯಕ್ತಪಡಿಸಿದ್ದಾನೆ.

ತನ್ನ ಇತ್ತೀಚೆಗಿನ ವಿಡಿಯೋದಲ್ಲಿ, ನನಗೆ ಈ ಜೈಲಿನಲ್ಲಿ ಬಿಗಿಭದ್ರತೆಯಿರುವ ಕೊಠಡಿ ನೀಡಿದ್ದಾರೆ. ಇಂಥ ಬಿಗಿಭದ್ರತೆಯ ನಡುವೆ  ಯೂ, ಇದೇ ಜೈಲಿನಲ್ಲಿರುವ ಪಶ್ಚಿಮ ಬಂಗಾಳ ಮೂಲದ ವಾಸುದೇವ ಬ್ರಾಹ್ಮಣ್‌ ಎಂಬ ಕೈದಿ, ನನ್ನ ಬಳಿ ಬಂದು ಅನವಶ್ಯಕ ಸಲುಗೆ ಬೆಳೆಸಿಕೊಳ್ಳಲು ಪ್ರಯತ್ನಿಸುತ್ತಿದ್ದಾನೆ.

ಇತ್ತೀಚೆಗೆ, ಶೌಚಕ್ಕೆ ತೆರಳಿದ್ದ ವೇಳೆ ಆತ ಇಸ್ಲಾಂ ಧರ್ಮೀಯ ಎಂಬುದು ನನ್ನ ಗಮನಕ್ಕೆ ಬಂದಿದೆ. ಎಂಥ ಬಿಗಿಭದ್ರತೆಯ ನಡುವೆ ಇರುವ ಕೈದಿಗಳನ್ನೂ ಹೋಗಿ ಮಾತನಾಡಿಸುವ ಛಾತಿ ಜಿಹಾದಿಗಳ ಶಕ್ತಿಯನ್ನು ತೋರಿಸುತ್ತದೆ. ಹಾಗಾಗಿ, ಆತನ ಸಲುಗೆಯ ಬಗ್ಗೆ ನಂಬಿಕೆ
ಬರುತ್ತಿಲ್ಲ” ಎಂದಿದ್ದಾನೆ.

ಆದರೆ, ಇದಕ್ಕೆ ಸ್ಪಷ್ಟನೆ ನೀಡಿರುವ ಜೈಲಿನ ಅಧಿಕಾರಿಗಳು, “ವಾಸುದೇವ ಪಶ್ಚಿಮ ಬಂಗಾಳದ ಬ್ರಾಹ್ಮಣನೇ ಹೊರತು ಮುಸ್ಲಿಮನಲ್ಲ. ಆತ ಮಾದಕ ದ್ರವ್ಯ ಕೇಸಿನಲ್ಲಿ ಜೈಲು ಸೇರಿದ್ದಾನೆ. ಶಂಭುಲಾಲ್‌ನ ಆರೋಪದಲ್ಲಿ ಹುರುಳಿಲ್ಲ’ ಎಂದಿದ್ದಾರೆ. ಜತೆಗೆ, ಅವನ  ಕೈಗೆ ಮೊಬೈಲ್‌ ಫೋನ್‌ ಹೇಗೆ ಸಿಕ್ಕಿತು ಎಂಬ ಬಗ್ಗೆ ತನಿಖೆ ನಡೆಸುವುದಾಗಿಯೂ ತಿಳಿಸಿದ್ದಾರೆ.

Disclaimer:The views expressed in comments section published on Udayavani.com are those of comment writers alone. They do not represent the views or opinions of Udayavani.com, its staff or The Manipal Group, or any entity associated with The Manipal Group. Udayavani.com reserves rights to remove a comment or all the comments any time.

To report any comment you can email us at udayavani.response@manipalgroup.info. We will review the request and delete the comments.


ಈ ವಿಭಾಗದಿಂದ ಇನ್ನಷ್ಟು

  • ಹೊಸದಿಲ್ಲಿ: ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ "ಚಂದ್ರಯಾನ-2' ಯೋಜನೆಯ ರಾಕೆಟ್‌ ಉಡಾವಣೆ ಇದೇ ತಿಂಗಳ 22ರಂದು ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ...

  • ವದೆಹಲಿ: ಬಿಎಸ್‌ಎನ್‌ಎಲ್ ಅನ್ನು ಪುನಶ್ಚೇತನಗೊಳಿಸಲಾಗುತ್ತದೆಯೇ, ಇಲ್ಲವೇ ಎಂಬ ಪ್ರಶ್ನೆಗಳು ಎದ್ದಿರುವಂತೆಯೇ ಸರ್ಕಾರದ ವತಿಯಿಂದಲೇ ಅದಕ್ಕೆ ಬಂಡವಾಳದ ಶಕ್ತಿ...

  • ನವದೆಹಲಿ: ಗುಜರಾತ್‌ ಮತ್ತು ಪಶ್ಚಿಮ ಬಂಗಾಳಗಳಲ್ಲಿ ರಾಜಕೀಯ ಮತ್ತು ಸಿನಿಮಾ ಕ್ಷೇತ್ರದ ಪ್ರಮುಖರು ಬಿಜೆಪಿ ಸೇರಿದ್ದಾರೆ. ಗಾಂಧಿನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ...

  • ಆಗ್ರಾ: ಹಿಂದೊಮ್ಮೆ ಪ್ರಧಾನಿ ನರೇಂದ್ರ ಮೋದಿ ಪಕೋಡಾ ಮಾರಿ ಕೂಡ ಬದುಕು ಸಾಗಿಸಬಹುದು ಎಂಬರ್ಥದ ಹೇಳಿಕೆ ನೀಡಿದ್ದನ್ನು ಜನರು ಕಟುವಾಗಿ ವಿರೋಧಿಸಿದ್ದರು. ಆದರೆ...

  • ನವದೆಹಲಿ: ಅಯೋಧ್ಯೆಯ ಜಮೀನು ಮಾಲೀಕತ್ವ ಯಾರಿಗೆ ಸೇರಬೇಕು ಎಂಬುದರ ಬಗ್ಗೆ ಮಧ್ಯಸ್ಥಿಕೆ ಪ್ರಕ್ರಿಯೆಯನ್ನು ಮಾಸಾಂತ್ಯದ ವರೆಗೆ ಮುಂದುವರಿಸಲು ಸುಪ್ರೀಂಕೋರ್ಟ್‌...

ಹೊಸ ಸೇರ್ಪಡೆ

  • ಹೊಸದಿಲ್ಲಿ: ತಾಂತ್ರಿಕ ಕಾರಣಗಳಿಂದ ಮುಂದೂಡಲ್ಪಟ್ಟಿದ್ದ "ಚಂದ್ರಯಾನ-2' ಯೋಜನೆಯ ರಾಕೆಟ್‌ ಉಡಾವಣೆ ಇದೇ ತಿಂಗಳ 22ರಂದು ನಡೆಯಲಿದೆ ಎಂದು ಭಾರತೀಯ ಬಾಹ್ಯಾಕಾಶ ಸಂಶೋಧನಾ...

  • ಕುಂಬಳೆ: ಜುಲೈ ಹದಿನಾರನ್ನು ವಿಶ್ವದಾದ್ಯಂತ ಹಾವುಗಳ ದಿನಾಚರಣೆಯನ್ನಾಗಿ ಆಚರಿಸಲಾಗುತ್ತದೆ. ಹಾವುಗಳನ್ನು ಸಂರಕ್ಷಿಸುವುದರೊಂದಿಗೆ ಅವುಗಳ ಬಗ್ಗೆ ಜನ ಸಾಮಾನ್ಯರಲ್ಲೂ...

  • ಮಡಿಕೇರಿ : ನಗರದ ಮಹದೇವಪೇಟೆ ಮತ್ತು ಮಾರುಕಟ್ಟೆ ರಸ್ತೆಯನ್ನು ಶೀಘ್ರ ದುರಸ್ತಿಪಡಿಸುವಂತೆ ಒತ್ತಾಯಿಸಿ ಮಡಿಕೇರಿಯ ವಿವಿಧ ಸಂಘಟನೆಗಳು ನಗರಸಭೆ ವಿರುದ್ಧ ಪ್ರತಿಭಟನೆ...

  • ಮಳೆ ಅಂದರೆ ನೆನಪಾಗುವುದು ನಮ್ಮ ಆಟಗಳು. ಮಳೆ ಅಂದರೆ ನೆನಪಾಗುವುದು ಅಮ್ಮನ ಬೈಗುಳ. ಮಳೆ ಅಂದರೆ ನೆನಪಾಗುವುದು ಸಂತ ಸ. ಮಳೆ ಅಂದರೆ ನೆನಪಾಗುವುದು ಒದ್ದೆ ಬಟ್ಟೆ. ಹಾ!...

  • ಬದುಕು ಸುವಿಸ್ತಾರ. ನಿನ್ನೆ ಎಂಬ ಸಾವಿರ ನೆನಪಿನ ಮಧ್ಯೆಯೂ ಕೆಲ ನೆನಪುಗಳು ಅಕ್ಷಿಪಟಲದ ಕದವನ್ನು ತಟ್ಟುತ್ತಿರುತ್ತದೆ. ಜೀವನದಲ್ಲಿ ಕೆಲವರ ಭೇಟಿ ಅನಿರೀಕ್ಷಿತ...

  • ಉಡುಪಿ: ಪರಿಸರ ರಕ್ಷಿಸುವ ಕಾಯಕಕ್ಕೆ ವಿದ್ಯಾರ್ಥಿಗಳೂ ಮುಂದಾಗುತ್ತಿದ್ದಾರೆ. ಇದಕ್ಕೆ ತಾಜಾ ಉದಾಹರಣೆ ಎಂಬಂತೆ ಎಂಜಿಎಂ ಕಾಲೇಜಿನ ಸಸ್ಯಶಾಸ್ತ್ರ ವಿಭಾಗದ ವಿದ್ಯಾರ್ಥಿಗಳು...