ಬಿಹಾರ: ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ವಿಜಿಲೆನ್ಸ್ ದಳ ದಾಳಿ; 4 ಕೋಟಿಗೂ ಅಧಿಕ ನಗದು ವಶ
ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ್ ಕುಮಾರ್ ರಾಯ್ ನಿವಾಸದ ಮೇಲೆ ದಾಳಿ ಅಧಿಕಾರಿಗಳು ನಡೆಸಿದ್ದರು.
Team Udayavani, Aug 27, 2022, 3:43 PM IST
ಪಾಟ್ನಾ: ಬಿಹಾರದ ಸರ್ಕಾರಿ ಅಧಿಕಾರಿಗಳ ನಿವಾಸದ ಮೇಲೆ ವಿಜಿಲೆನ್ಸ್ ತನಿಖಾ ದಳ ಶನಿವಾರ (ಆಗಸ್ಟ್ 27) ದಾಳಿ ನಡೆಸಿದ್ದು, ನಾಲ್ಕು ಕೋಟಿ ರೂಪಾಯಿಗಿಂತ ಅಧಿಕ ನಗದನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇದನ್ನೂ ಓದಿ:ಅಂದು ಪೇಂಟರ್ -ಪಾರ್ಥ ಸಂಬಂಧಿ ರಾಯ್ ಇಂದು ಹಲವು ಹೋಟೆಲ್ ಗಳ ಒಡೆಯ; ಸಿಬಿಐ ದಾಳಿ
ಪಾಟ್ನಾ, ಕಿಶನ್ ಗಂಜ್ ಸೇರಿದಂತೆ ಬಿಹಾರದ ಹಲವು ಕಡೆಗಳಲ್ಲಿ ಏಕಕಾಲದಲ್ಲಿ ವಿಜಿಲೆನ್ಸ್ ತನಿಖಾ ದಳ ದಾಳಿ ನಡೆಸಿತ್ತು. ಲೋಕೋಪಯೋಗಿ ಇಲಾಖೆಯ ಕಿಶನ್ ಗಂಜ್ ವಿಭಾಗದ ಕಾರ್ಯನಿರ್ವಾಹಕ ಇಂಜಿನಿಯರ್ ಸಂಜಯ್ ಕುಮಾರ್ ರಾಯ್ ನಿವಾಸದ ಮೇಲೆ ದಾಳಿ ಅಧಿಕಾರಿಗಳು ನಡೆಸಿದ್ದರು.
ಕಿಶನ್ ಗಂಜ್ ನಲ್ಲಿರುವ ರಾಯ್ ನಿವಾಸಕ್ಕೆ ಅಧಿಕಾರಿಗಳು ಬಂದ ನಂತರ, ರಾಯ್ ಪಡೆದಿರುವ ಲಂಚದ ಹಣವನ್ನು ಜ್ಯೂನಿಯರ್ ಇಂಜಿನಿಯರ್ ಮತ್ತು ಕ್ಯಾಶಿಯರ್ ನಿವಾಸದದಲ್ಲಿ ಅಡಗಿಸಿಟ್ಟಿರುವ ವಿಷಯ ಬೆಳಕಿಗೆ ಬಂದಿತ್ತು. ಬಳಿಕ ವಿಜಿಲೆನ್ಸ್ ತನಿಖಾ ದಳದ ಅಧಿಕಾರಿಗಳು ಇಬ್ಬರ ಮನೆ ಮೇಲೆ ದಾಳಿ ನಡೆಸಿದ್ದರು ಎಂದು ವರದಿ ತಿಳಿಸಿದೆ.
ಕ್ಯಾಶಿಯರ್ ನಿವಾಸದಲ್ಲಿ ಶೋಧ ಕಾರ್ಯ ನಡೆಸಿದ ವೇಳೆ 3 ಕೋಟಿಗೂ ಅಧಿಕ ನಗದು ಹಾಗೂ ಸಂಜಯ್ ಕುಮಾರ್ ನಿವಾಸದಲ್ಲಿ ಒಂದು ಕೋಟಿ ರೂಪಾಯಿ ನಗದು ಪತ್ತೆಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು