ಮಲ್ಯಗೆ ಜೈಲಲ್ಲಿದೆ ಟೀವಿ, ಟಾಯ್ಲೆಟ್
Team Udayavani, Aug 25, 2018, 6:00 AM IST
ಹೊಸದಿಲ್ಲಿ: ಟೀವಿಯುಂಟು, ಟಾಯ್ಲೆಟ್ಟೂ ಇದೆ, ಮಲಗಲು ಹಾಸಿಗೆಯನ್ನೂ ಕೊಡ್ತೇವೆ, ಸ್ನಾನ, ಬಟ್ಟೆ ತೊಳೆಯಲು ಜಾಗವೂ ಉಂಟು, ಸೂರ್ಯನ ಬೆಳಕಿಗೇನೂ ಕೊರತೆ ಇಲ್ಲವೇ ಇಲ್ಲ… ಸಾವಿರಾರು ಕೋಟಿ ಸಾಲ ಮಾಡಿ, ಮರುಪಾವತಿಸದೇ ಪರಾರಿಯಾಗಿರುವ ವಿಜಯ್ ಮಲ್ಯರನ್ನು ಕಳುಹಿಸಿಕೊಡಿ… ಒಳ್ಳೆಯ ಜೈಲಲ್ಲೇ ಇಡುತ್ತೇವೆ!
ಇದು ಕೇಂದ್ರ ತನಿಖಾ ದಳದ(ಸಿಬಿಐ) ಅಧಿಕಾರಿಗಳು ಲಂಡನ್ನ ಕೋರ್ಟ್ ಮುಂದೆ ಸಲ್ಲಿಸಿರುವ ಮುಂಬೈನ ಆರ್ಥರ್ ರಸ್ತೆ ಜೈಲಿನ ವಿಡಿಯೋದಲ್ಲಿನ ಅಂಶಗಳು. ವಿಚಾರಣೆ ವೇಳೆ ವಿಜಯ್ ಮಲ್ಯ ಪರ ವಕೀಲರು ಆರ್ಥರ್ ಜೈಲಿನಲ್ಲಿ ಸೂರ್ಯನ ಬೆಳಕೇ ಇಲ್ಲ ಎಂದು ಆರೋಪಿಸಿದ್ದರು. ಹೀಗಾಗಿ ಅಲ್ಲಿನ ಕೋರ್ಟ್ ಜೈಲಿನ ವಿಡಿಯೋ ನೀಡುವಂತೆ ಕೇಳಿತ್ತು.
ಇದೀಗ ಜೈಲಿನ ಸಂಪೂರ್ಣ ವಿಡಿಯೋ ಮಾಡಿ ಕೊಟ್ಟಿರುವ ಸಿಬಿಐ ಅಧಿಕಾರಿಗಳು, ಜೈಲಿನಲ್ಲಿ ಇರುವ ಮತ್ತು ಮಲ್ಯಗೆ ಜೈಲಿನಲ್ಲಿ ನೀಡಬಹುದಾದ ಸೌಲಭ್ಯಗಳ ಪಟ್ಟಿಯನ್ನೇ ಮಾಡಿದ್ದಾರೆ. ಜೈಲಿನೊಳಗೆ ಇರುವ ವಾಸ ಮಾಡತಕ್ಕ ಸ್ಥಳ ಮತ್ತು ವೈದ್ಯಕೀಯ ಸೌಲಭ್ಯಗಳ ಕುರಿತೂ ಹೇಳಿದ್ದಾರೆ. ಮಲ್ಯರನ್ನು ಪೂರ್ವಾಭಿಮುಖ ಜೈಲಿನ ಕೋಣೆಯಲ್ಲಿ ಇರಿಸಲಾಗುವುದರಿಂದ ಸೂರ್ಯನ ಬೆಳಕೂ ಚೆನ್ನಾಗಿಯೇ ಬರುತ್ತದೆ ಎಂದು ವಿಡಿಯೋದಲ್ಲೇ ವಿವರಣೆ ನೀಡಿದ್ದಾರೆ.
ಜೈಲಿನ ಕೊಠಡಿಯೊಳಗೆ ಇರುವ ಗಾಳಿ-ಬೆಳಕು, ಕಿಟಕಿ, ಸಿಸಿಟಿವಿ ಭದ್ರತೆ ಬಗ್ಗೆಯೂ ವಿವರಣೆ ಇದೆ. ಅಲ್ಲದೆ ಮಲ್ಯಗೆ ಲೈಬ್ರರಿ ವ್ಯವಸ್ಥೆಯನ್ನೂ ಮಾಡಿಕೊಡುವುದಾಗಿ ಅಧಿಕಾರಿಗಳು ಕೋರ್ಟ್ ಮುಂದೆ ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ