Haryana; ಭರ್ಜರಿ ಪ್ರಚಾರ ಆರಂಭಿಸಿದ ಕಾಂಗ್ರೆಸ್ ಅಭ್ಯರ್ಥಿ ವಿನೇಶ್ ಫೋಗಟ್
ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯವಿರುವಲ್ಲಿ ಗೆಲುವು ಸುಲಭವೇ? ಹರಿಯಾಣದ ಹೈ ವೋಲ್ಟೇಜ್ ಕ್ಷೇತ್ರ...
Team Udayavani, Sep 8, 2024, 5:33 PM IST
ಹೊಸದಿಲ್ಲಿ: ಹರಿಯಾಣ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್(Congress) ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಕುಸ್ತಿಪಟು ವಿನೇಶ್ ಫೋಗಟ್(Vinesh Phogat) ಅವರು ಭಾನುವಾರ ಭರ್ಜರಿ ಪ್ರಚಾರ ಆರಂಭಿಸಿದ್ದಾರೆ.
ಜುಲಾನಾ ವಿಧಾನಸಭಾ ಕ್ಷೇತ್ರದಿಂದ ಕಣಕ್ಕಿಳಿದಿರುವ ವಿನೇಶ್ ಅವರಿಗೆ ನೂರಾರು ಕಾಂಗ್ರೆಸ್ ಕಾರ್ಯಕರ್ತರು ಭರ್ಜರಿ ಸ್ವಾಗತ ನೀಡಿದರು. 30 ರ ಹರೆಯದ ಒಲಿಂಪಿಯನ್, ಯುವ ನಾಯಕಿ ಖಾಪ್ ಪಂಚಾಯತ್ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.
ಬಹಿರಂಗ ಪ್ರಚಾರ ಸಭೆ ಉದ್ದೇಶಿಸಿ ಮಾತನಾಡಿದ ವಿನೇಶ್ ‘ಜುಲಾನಾದಲ್ಲಿ ನಿಮ್ಮೆಲ್ಲರನ್ನು ಭೇಟಿಯಾದ ನಂತರ ನನಗೆ ಸಮಾಧಾನವಾಯಿತು. ನಿಮ್ಮಿಂದ ನಾನು ಪಡೆದ ಪ್ರೀತಿ ಮತ್ತು ಆಶೀರ್ವಾದವೇ ನನಗೆ ದೊಡ್ಡ ಶಕ್ತಿ. ನಾನು ನಿಮ್ಮ ನಂಬಿಕೆಯನ್ನು ಎಂದಿಗೂ ಕಳೆದುಕೊಳ್ಳುವುದಿಲ್ಲ. ಯಾವಾಗಲೂ ನಿಮ್ಮ ಸೇವೆಗೆ ಸಮರ್ಪಿತಳಾಗಿರುತ್ತೇನೆ ಎಂದು ನಾನು ಭರವಸೆ ನೀಡುತ್ತೇನೆ. ನಮ್ಮ ಸಮುದಾಯದ ಅಭಿವೃದ್ಧಿ ಮತ್ತು ನಿಮ್ಮ ಯೋಗಕ್ಷೇಮ ನನ್ನ ಆದ್ಯತೆಯಾಗಿದೆ. ನಾವೆಲ್ಲರೂ ಒಟ್ಟಾಗಿ ಹೊಸ ಆರಂಭವನ್ನು ಮಾಡೋಣ” ಎಂದರು.
ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ವಿನೇಶ್” ಕ್ಷೇತ್ರದಲ್ಲಿ ಜನರು ತುಂಬಾ ಉತ್ಸುಕರಾಗಿದ್ದಾರೆ, ನಮಗೆ ನೀಡಿದ ಜವಾಬ್ದಾರಿ, ಕಾಂಗ್ರೆಸ್ ಪಕ್ಷವು ನನ್ನನ್ನು ಇಲ್ಲಿಗೆ ಅಭ್ಯರ್ಥಿಯನ್ನಾಗಿ ಕಳುಹಿಸಿದೆ, ಜನರು ನಮಗೆ ಪ್ರೀತಿ ಮತ್ತು ಬೆಂಬಲ ನೀಡುತ್ತಿದ್ದಾರೆ. ನಮ್ಮ ಜನರು ನನ್ನನ್ನು ಗೆಲ್ಲಿಸುತ್ತಾರೆ ಮತ್ತು ಅವರ ದೃಷ್ಟಿಯಲ್ಲಿ ನಾನು ವಿಜೇತೆ. ಇದಕ್ಕಿಂತ ದೊಡ್ಡದು ಯಾವುದೂ ಇಲ್ಲ” ಎಂದರು.
ಬ್ರಿಜ್ ಭೂಷಣ್ ವಿರುದ್ಧ ಕಿಡಿ
ಬಿಜೆಪಿ ನಾಯಕ ಬ್ರಿಜ್ ಭೂಷಣ್ ಅವರ “ವಂಚನೆ” ಆರೋಪಕ್ಕೆ ಪ್ರತಿಕ್ರಿಯಿಸಿರುವ ವಿನೇಶ್ ಫೋಗಟ್ “ನಾನು ದೆಹಲಿ ವಿಮಾನ ನಿಲ್ದಾಣಕ್ಕೆ ಆಗಮಿಸುತ್ತಿದ್ದಂತೆ ಪದಕವನ್ನು ಪಡೆಯದಿರುವ ನೋವು ಕಡಿಮೆಯಾಗಿದೆ.ಬ್ರಿಜ್ ಭೂಷಣ್ ದೇಶವಲ್ಲ, ಜನರು ನನ್ನೊಂದಿಗೆ ನಿಂತಿದ್ದಾರೆ, ಅವರು ನನ್ನ ಸ್ವಂತದವರು. ಬ್ರಿಜ್ ಭೂಷಣ್ ನನಗೆ ಎಂದಿಗೂ ಅಸ್ತಿತ್ವದಲ್ಲಿಲ್ಲ” ಎಂದು ಕಿಡಿಯಾಗಿದ್ದಾರೆ.
ಶುಕ್ರವಾರ ಕುಸ್ತಿಪಟುಗಳಾದ ಬಜರಂಗ್ ಪೂನಿಯಾ ಅವರೊಂದಿಗೆ ವಿನೇಶ್ ಕಾಂಗ್ರೆಸ್ ಪಕ್ಷವನ್ನು ಅಧಿಕೃತವಾಗಿ ಸೇರಿದ ಬಳಿಕ ಅವರಿಗೆ ಟಿಕೆಟ್ ಘೋಷಣೆ ಮಾಡಲಾಗಿತ್ತು.
#WATCH | Jind, Haryana: Congress candidate from Julana Assembly Constituency Vinesh Phogat says, “It feels good, people are very excited, the responsibility we have been given, the Congress party has sent us here as candidates, so people are giving us love and supporting us. Our… pic.twitter.com/GwJQq23x4g
— ANI (@ANI) September 8, 2024
ಪ್ರಾದೇಶಿಕ ಪಕ್ಷಗಳ ಪ್ರಾಬಲ್ಯ
ಹರಿಯಾಣದ ಜಾಟ್ ಪ್ರಾಬಲ್ಯದ ಬಂಗಾರ್ ಪ್ರದೇಶದ ಜುಲಾನಾ ಕ್ಷೇತ್ರದಲ್ಲಿ ಕಳೆದ 15 ವರ್ಷಗಳಿಂದ ಭಾರತೀಯ ರಾಷ್ಟ್ರೀಯ ಲೋಕದಳ (INLD) ಮತ್ತು ಜನನಾಯಕ್ ಜನತಾ ಪಾರ್ಟಿ (JJP) ಯಂತಹ ಪ್ರಾದೇಶಿಕ ಪಕ್ಷಗಳು ಪ್ರಾಬಲ್ಯ ಹೊಂದಿವೆ. 2009 ಮತ್ತು 2014ರಲ್ಲಿ ಐಎನ್‌ಎಲ್‌ಡಿಯ ಪರ್ಮಿಂದರ್ ಸಿಂಗ್ ಗೆದ್ದಿದ್ದರೆ, ಜೆಜೆಪಿಯ ಅಮರ್‌ಜೀತ್ ಧಂಡಾ 2019ರಲ್ಲಿ ಗೆಲುವು ಸಾಧಿಸಿದ್ದರು. ಈ ಬಾರಿ ಕ್ಷೇತ್ರ ಭಾರೀ ಕುತೂಹಲ ಕೆರಳಿಸಿದೆ. ಹರಿಯಾಣದ ಹೈವೋಲ್ಟೇಜ್ ಕ್ಷೇತ್ರವಾಗಿ ಬದಲಾಗಿದೆ.
ಜಾತಿ ಲೆಕ್ಕಾಚಾರ
ಕ್ರೀಡಾ ಲೋಕದ ತಾರೆ ಜಾಟ್ ಪ್ರತಿನಿಧಿಯಾಗಿ ವಿನೇಶ್ ಕಾಂಗ್ರೆಸ್‌ಗೆ ಪ್ರವೇಶಿಸಿದ್ದು ಜುಲಾನಾದಲ್ಲಿ ಹೊಸ ಲೆಕ್ಕಾಚಾರಕ್ಕೆ ಕಾರಣವಾಗಿದೆ. ವಿನೇಶ್ ಅವರ ಮಾವ(ಪತಿ ಸೋಮವೀರ್ ರಾಠಿ ತಂದೆ) ರಾಜ್‌ಪಾಲ್ ರಾಠಿ, ರಾಠಿ ಸಮುದಾಯದ ಖಾಪ್‌ನೊಂದಿಗೆ ಘರ್ವಾಲಿ, ಖೇರಾ ಬಖ್ತಾ, ಜಮೋಲಾ, ಕರೇಲಾ, ಜಯಜಯವಂತಿ ಮತ್ತು ಘೆರ್ತಿ ಎಂಬ ಆರು ಗ್ರಾಮಗಳನ್ನು ಪ್ರತಿನಿಧಿಸುವ ಚುಗಾಮಾ ಖಾಪ್ ವಿನೇಶ್ ಳನ್ನು ಸ್ವಾಗತಿಸುತ್ತಿದೆ” ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Digital arrest; ದಂಧೆ ನಡೆಸುತ್ತಿದ್ದ ತೈವಾನ್ ನ ನಾಲ್ವರು ಸೇರಿ 17 ಮಂದಿ ಬಂಧನ
Modi ಮಾನನಷ್ಟ ಕೇಸ್: ತರೂರ್ ವಿಚಾರಣೆಗೆ ತಡೆಯಾಜ್ಞೆ 4 ವಾರ ವಿಸ್ತರಿಸಿದ ಸುಪ್ರೀಂ
Uddhav Thackeray: ಮಾಜಿ ಸಿಎಂ, ಶಿವಸೇನಾ ನಾಯಕ ಉದ್ಧವ್ ಠಾಕ್ರೆ ಆಸ್ಪತ್ರೆಗೆ ದಾಖಲು
Lawrence Bishnoi; ಗ್ಯಾಂಗ್ ನ ಹಿಟ್ ಲಿಸ್ಟ್ ನಲ್ಲಿ ಖ್ಯಾತ ಕಾಮಿಡಿಯನ್
Rain Alert: ತಮಿಳುನಾಡಿನ ನಾಲ್ಕು ಜಿಲ್ಲೆಯ ಶಾಲಾ ಕಾಲೇಜುಗಳಿಗೆ ಅ.15ರಂದು ರಜೆ… ಸಿಎಂ ಸಭೆ
MUST WATCH
ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್
ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?
Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ
ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ
ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.