10 ಸಾವಿರಕ್ಕೆ ವಿಐಪಿ ದರ್ಶನ

Team Udayavani, Jul 22, 2019, 5:38 AM IST

ತಿರುಪತಿ: ತಿರುಪತಿಯಲ್ಲಿರುವ ವೆಂಕಟೇಶ್ವರ ದೇಗುಲದಲ್ಲಿ ಗಣ್ಯ, ಅತಿಗಣ್ಯರಿಗೆ ಮೀಸಲಾಗಿ ಇರುವ ದೇವರ ದರ್ಶನ ವ್ಯವಸ್ಥೆ ರದ್ದು ಮಾಡುವ ಬಗ್ಗೆ ತಿರುಪತಿ ತಿರುಮಲ ದೇವಸ್ಥಾನಮ್ಸ್‌ (ಟಿಟಿಡಿ) ಆಡಳಿತ ಮಂಡಳಿ ಈಗಾಗಲೇ ಘೋಷಣೆ ಮಾಡಿದೆ. ಇನ್ನು ಮುಂದೆ ಅದನ್ನು ಜನಸಾಮಾನ್ಯರಿಗೂ ವಿಸ್ತರಿಸಲಾಗುತ್ತದೆ. ಅದಕ್ಕಾಗಿ ಹತ್ತು ಸಾವಿರ ರೂ. ನೀಡಬೇಕು.

ಟಿಟಿಡಿ ಆಡಳಿತ ಮಂಡಳಿ ಶ್ರೀವಾನಿ ಟ್ರಸ್ಟ್‌ ಅಂದರೆ ಶ್ರೀ ವೆಂಕಟೇಶ್ವರ ಆಲಯ ನಿರ್ಮಾಣಂ ಟ್ರಸ್ಟ್‌ ಎಂಬ ಹೊಸ ವ್ಯವಸ್ಥೆ ಶುರು ಮಾಡಿದೆ. ದೇಶಾದ್ಯಂತ ವೆಂಕಟೇಶ್ವರ ದೇಗುಲ ನಿರ್ಮಿಸಲು ಅದರ ಮೂಲಕ ಧನಸಂಗ್ರಹ ಮಾಡಲಾಗುತ್ತದೆ. ಅದಕ್ಕಾಗಿ ಧನ ಸಂಗ್ರಹಿಸಲು ಈ ಟ್ರಸ್ಟ್‌ಗೆ 10 ಸಾವಿರ ರೂ. ನೀಡಿದರೆ ಅವರಿಗೆ ದೇವರ ದರ್ಶನದ ವಿಐಪಿ ಟಿಕೆಟ್ ನೀಡಲಾಗುತ್ತದೆ. ಸದ್ಯ ವಿಐಪಿ ದರ್ಶನದ ಟಿಕೆಟ್‌ಗೆ 500 ರೂ. ನಿಗದಿ ಮಾಡಲಾಗಿದೆ. ಲಕ್ಷಾಂತರ ಮಂದಿ ಭಕ್ತರು ದೇಗುಲಕ್ಕೆ ಆಗಮಿಸುವ ಹಿನ್ನೆಲೆಯಲ್ಲಿ ಕೆಲವೊಮ್ಮೆ ಹಣ ಪಾವತಿ ಮಾಡಿದರೂ ಟಿಕೆಟ್ ಸಿಗುತ್ತಿಲ್ಲ. ಅದಕ್ಕಾಗಿ ಶ್ರೀವಾನಿ ಟ್ರಸ್ಟ್‌ ಮೂಲಕ 10 ಸಾವಿರ ರೂ.ಸಂಗ್ರಹಿಸಿದರೆ ದೇಗುಲ ನಿರ್ಮಾಣಕ್ಕೂ ಧನಸಂಗ್ರಹವಾಗುತ್ತದೆ ಮತ್ತು ಜನಸಾಮಾನ್ಯರಿಗೂ ವಿಐಪಿ ಟಿಕೆಟ್ ನೀಡಿದಂತಾಗುತ್ತದೆ. ಇದರ ಜತೆಗೆ ದೇವರ ದರ್ಶನಕ್ಕಾಗಿ ಟೆಕೆಟ್ ತೆಗೆಸಿಕೊಡುತ್ತೇನೆ ಎಂದು ವಂಚಿಸುವ ಮಧ್ಯವರ್ತಿಗಳಿಗೂ ತಡೆಯೊಡ್ಡಿದಂತಾಗುತ್ತದೆ ಎಂದು ಟಿಟಿಡಿ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕುಮಾರ್‌ ಸಿಂಘಲ್ ಹೇಳಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ