ತಂದೆ ಮಗನ ಫೋಟೋ ವೈರಲ್
Team Udayavani, Jun 17, 2022, 6:20 AM IST
ತಂದೆ ಮತ್ತು ಮಗ ರೈಲು ಪ್ರಯಾಣದಲ್ಲಿ ಭೇಟಿಯಾದರೆ ಹೇಗಿರುತ್ತದೆ? ಇದರಲ್ಲೇನು ವಿಶೇಷ ಎಂದು ಪ್ರಶ್ನಿಸಬೇಡಿ.
ರೈಲಿನಲ್ಲಿ ಟಿಕೆಟ್ ಪರೀಕ್ಷಕರಾಗಿ ಕೆಲಸ (ಟಿಟಿಇ) ಮಾಡುತ್ತಿರುವ ಮಗ ಮತ್ತು ಗಾರ್ಡ್ ಆಗಿ ಕೆಲಸ ಮಾಡುತ್ತಿರುವ ತಂದೆ ರೈಲು ನಿಲ್ದಾಣವೊಂದರಲ್ಲಿ 2 ಪ್ರತ್ಯೇಕ ರೈಲುಗಳಲ್ಲಿ ಎದುರು ಬದುರಾಗಿ ಬಂದ ಸಂದರ್ಭದಲ್ಲಿ ಮಗ ಸೆಲ್ಫಿ ತೆಗೆದುಕೊಂಡಿದ್ದಾರೆ. ಇಬ್ಬರೂ ಕೂಡ ತಮ್ಮ ತಮ್ಮ ಸಮವಸ್ತ್ರದಲ್ಲಿದ್ದರು ಎನ್ನುವುದು ಗಮನಾರ್ಹ.
ಇಬ್ಬರು ಖುಷಿಯಾಗಿ ಸಂಚರಿಸುತ್ತಿರುವ ರೈಲಿನಲ್ಲೇ ಭೇಟಿಯಾಗುವ ಸಂದರ್ಭದ ಫೋಟೋ ಈಗ ವೈರಲ್ ಆಗಿದೆ.
“ಇದೊಂದು ಅತ್ಯುತ್ತಮ ಸೆಲ್ಫಿ. ತಂದೆ ಮತ್ತು ಮಗ ಕೆಲಸ ಮಾಡುತ್ತಿರುವ ರೈಲುಗಳೆರಡು ಎದುರು ಬದುರಾಗಿ ಸಂಚರಿಸಿದಾಗ ತೆಗೆದಿರುವ ಫೋಟೋ ಅದ್ಭುತ’ ಟ್ವೀಟಿಗರೊಬ್ಬರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಈ ಫೋಟೋ 30 ಸಾವಿರಕ್ಕೂ ಹೆಚ್ಚು ಲೈಕ್ಗಳನ್ನು ಪಡೆದುಕೊಂಡಿದೆ ಮತ್ತು 2 ಸಾವಿರಕ್ಕೂ ಅಧಿಕ ರಿ ಟ್ವೀಟ್ಗಳನ್ನು ಕಂಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
LS Polls: ವೇದಿಕೆಯಲ್ಲಿ ಭಾಷಣ ಮಾಡುತ್ತಲೇ ಅಸ್ವಸ್ಥಗೊಂಡ ಕೇಂದ್ರ ಸಚಿವ ನಿತಿನ್ ಗಡ್ಕರಿ
Lok Sabha Election: ಗೋವಾದ ಎರಡೂ ಕ್ಷೇತ್ರದಲ್ಲಿ 16 ಅಭ್ಯರ್ಥಿಗಳು ಕಣಕ್ಕೆ, ಇಲ್ಲಿದೆ ವಿವರ
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ