ಹಾರಾಟದ ವೇಳೆ ತಾಂತ್ರಿಕ ದೋಷ: ಸುರಕ್ಷಿತವಾಗಿ ಇಳಿದ ವಿಸ್ತಾರಾ ವಿಮಾನ
Team Udayavani, Feb 25, 2019, 11:47 AM IST
ಮುಂಬಯಿ : ಚೆನ್ನೈನಿಂದ 121 ಪ್ರಯಾಣಿಕರನ್ನು ಒಯುತ್ತಿದ್ದ ವಿಸ್ತಾರಾ ವಿಮಾನ ಆಗಸದಲ್ಲಿ ಹಾರುತ್ತಿದ್ದ ವೇಳೆಯೇ ಇಂಜಿನ್ ದೋಷ ಕಾಣಿಸಿಕೊಂಡ ಹೊರತಾಗಿಯೂ ಅದು ಕೋಲ್ಕತದಲ್ಲಿ ಸುರಕ್ಷಿತವಾಗಿ ಇಳಿಯುವಲ್ಲಿ ಸಫಲವಾಯಿತು.
ಈ ಘಟನೆ ಇಂದು ಸೋಮವಾರ ಬೆಳಗ್ಗೆ 8.56ಕ್ಕೆ ನಡೆಯಿತೆಂದು ವಿಮಾನ ಯಾನ ಸಂಸ್ಥೆ ಹೇಳಿದೆ.
ಆದರೆ ಈ ಏರ್ ಬಸ್ ಎ320 ವಿಮಾನ ಇಳಿದೊಡನೆಯೇ ಅದನ್ನು ಕೂಲಂಕಷ ತಾಂತ್ರಿಕ ತಪಾಸಣೆಗೆ ಒಳಪಡಿಸಿ ತಾಂತ್ರಿಕ ದೋಷವನ್ನು ಸರಿಪಡಿಸಲು ಇಂಜಿನಿಯರ್ಗಳು ಕಾರ್ಯೋನ್ಮುಖರಾದರು ಎಂದು ಏರ್ ಲೈನ್ ಸಂಸ್ಥೆ ತಿಳಿಸಿದೆ.
ವಿಮಾನದಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡ ವಿಷಯವನ್ನು ಪ್ರಯಾಣಿಕರಿಗೆ ತಿಳಿಸಲಾಯಿತು ಎಂದು ಫ್ಲೈಟ್ ಕಮಾಂಡರ್ ಹೇಳಿದರು.