ವೋಲ್ಟಾಸ್ ಬೆಕೊ ಗೃಹೋಪಯೋಗಿ ಉತ್ಪನ್ನಗಳ ಬಿಡುಗಡೆ
Team Udayavani, Sep 18, 2018, 11:29 AM IST
ನವದೆಹಲಿ: ಹವಾನಿಯಂತ್ರಣ (ಎಸಿ) ಉತ್ಪನ್ನಗಳ ತಯಾರಕ ಟಾಟಾ ಸಮೂಹದ ವೋಲ್ಟಾಸ್ ಈಗ ಟರ್ಕಿ ದೇಶದ ಗೃಹೋಪಯೋಗಿ ಉತ್ಪನ್ನಗಳ ತಯಾರಕ ಆರೆಲಿಕ್ ಸಂಸ್ಥೆಯೊಡಗೂಡಿ ಭಾರತದಲ್ಲಿ ಹೊಸ ಶ್ರೇಣಿಯ ‘ವೋಲ್ಟಾಸ್ ಬೆಕೊ’ ಬ್ರ್ಯಾಂಡ್ ರೆಫ್ರಿಜೆರಟರ್, ವಾಷಿಂಗ್ ಮೆಷಿನ್ಸ್, ಮೈಕ್ರೊವೇವ್ಸ್ ಹಾಗೂ ಡಿಷ್ ವಾಶ್‌ಗಳನ್ನು ಬಿಡುಗಡೆ ಮಾಡಿದೆ.
ದೆಹಲಿಯಲ್ಲಿ ವೋಲ್ಟಾಸ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಪ್ರದೀಪ್ ಭಕ್ಷಿ ಅವರು ನೂತನ ಗೃಹೋಪಯೋಗಿ ವಸ್ತುಗಳನ್ನು ಅನಾವರಣ ಮಾಡಿ ಮಾತನಾಡಿದರು. ಎಸಿ ಉತ್ಪನ್ನಗಳಲ್ಲಿ ಛಾಪನ್ನು ಮೂಡಿಸಿರುವ ನಾವು ಇಂದು ವೋಲ್ಟಾಸ್ ಬೆಕೊ ಗೃಹೋಪಯೋಗಿ ಉತ್ಪನ್ನಗಳನ್ನು ನಮ್ಮ ಗ್ರಾಹಕರಿಗೆ ಪರಿಚಯಿಸುತ್ತಿರುವುದು ಸಂತಸತಂದಿದೆ.
ವೋಲ್ಟಾಸ್ ಸದಾ ಗ್ರಾಹಕರ ದೃಷ್ಟಿಯಲ್ಲಿಟ್ಟುಕೊಂಡು ಕಾರ್ಯ ನಿರ್ವಹಿಸುತ್ತದೆ. ಮೇಕ್ ಇನ್ ಇಂಡಿಯಾ ಉಪಕ್ರಮದಡಿ 2020ರೊಳಗೆ ಈ ಎಲ್ಲ ಉತ್ಪನ್ನಗಳನ್ನು ಗುಜರಾತಿನಲ್ಲಿ ತಯಾರಿಸಲಾಗುತ್ತದೆ. ಆರೆಲಿಕ್‌ನಂತಹ ಉತ್ತಮ ಸಂಸ್ಥೆಯೊಡನೆ ಪಾಲುಗಾರನಾಗಿ ವ್ಯವಹಾರ ನಡೆಸುವುದು ಸಂತೋಷತರುತ್ತದೆ ಎಂದರು.
ಆರೆಲಿಕ್‌ನ ಸಿಇಒ ಹಕನ್ ಬಲ್‌ಗರು ಮಾತನಾಡಿ, ಬೆಕೊ ಮತ್ತು ವೋಲ್ಟಾಸ್ ನಡುವಿನ ಈ ಹೊಸ ಸಾಹಸದ ವಹಿವಾಟಿನ ಬಗ್ಗೆ ಬಹಳ ಉತ್ಸುಕರಾಗಿದ್ದೇವೆ. ಗಣನೀಯವಾಗಿ ಬೆಳವಣಿಗೆಯುತ್ತಿರುವ ಭಾರತದ ಆರ್ಥಿಕತೆ ಹಾಗೂ ಜನಸಂಖ್ಯೆ ನಡುವೆ ನಮ್ಮ ಮುಂದುವರಿದ ಯೋಜನೆಗಳನ್ನು ಜಾಗತಿಕವಾಗಿ ಬೆಂಬಲಿಸಲು ವೋಲ್ಟಾಸ್ ಸಹಕಾರ ಅಗತ್ಯವಾಗಿದೆ. ಇಲ್ಲಿನ ಮಾರುಕಟ್ಟೆಗೆ ಹೆಸರಾಂತ ಪಾಲುದಾರನೊಡಗೂಡಿ ಸರಣಿ ಉತ್ಪನ್ನಗಳನ್ನು ಪರಿಚಯಿಸುತ್ತಿರುವುದು ಪುಳಕ ತರುತ್ತದೆ ಎಂದು ನುಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಅತ್ಯಾಚಾರವೆಸಗಿ, ಕೃತ್ಯವನ್ನು ಚಿತ್ರೀಕರಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡವ ಅಂದರ್…!
ಇಂದಿನಿಂದ ದ್ವಿತೀಯ ಹಂತದ ಲಸಿಕೆ: ಕೋವಿಡ್ ಲಸಿಕೆ ಪಡೆದ ಪ್ರಧಾನಿ ನರೇಂದ್ರ ಮೋದಿ
ಮಳೆ ಕೊಯ್ಲಿಗೆ ಮೋದಿ ಕರೆ : ಮನ್ ಕಿ ಬಾತ್ನಲ್ಲಿ 100 ದಿನಗಳ ಅಭಿಯಾನ ಘೋಷಣೆ
ನಮೋ ಗುಣಗಾನ : ಕಾಂಗ್ರೆಸಿಗರಿಬ್ಬರಿಂದ ಬಿಜೆಪಿ, ಮೋದಿ ಶ್ಲಾಘನೆ
ಲಾಕ್ಡೌನ್ ಸಮಯದಲ್ಲಿ “ರಾಮಾಯಣ’ ರಚಿಸಿದ 10 ವರ್ಷದ ಬಾಲಕ !