ಗಾಯಕ ವಾಜಿದ್ ಪತ್ನಿಗೂ ಮತಾಂತರ ಕಿರುಕುಳ!
Team Udayavani, Nov 30, 2020, 7:34 AM IST
ಮುಂಬಯಿ: ಇತ್ತೀಚೆಗಷ್ಟೇ ಅಗಲಿದ ಬಾಲಿವುಡ್ನ ಖ್ಯಾತ ಸಂಗೀತ ಸಂಯೋಜಕ- ಗಾಯಕ ವಾಜಿದ್ ಖಾನ್ ಅವರ ಪತ್ನಿ ಕಮಲುÅಖ್ ಕೂಡ ಬಲವಂತದ ಮತಾಂತರ ಕಿರುಕುಳವನ್ನು ಅನುಭವಿಸಿದ್ದರು ಎಂಬ ಸಂಗತಿ ತಡವಾಗಿ ಬೆಳಕಿಗೆ ಬಂದಿದೆ.
“ಮತಾಂತರ ವಿರೋಧಿ ಮಸೂದೆ’ ಎಂಬ ಹ್ಯಾಶ್ಟ್ಯಾಗ್ನೊಂದಿಗೆ ಕಮ ಲ್ರುಖ್ ತಮ್ಮ ದಾಂಪ ತ್ಯದ ಬಿರುಕಿನ ಕಥೆ ಹೇಳಿಕೊಂಡಿದ್ದಾರೆ. “ಪಾರ್ಸಿ ಜನಾಂಗದ ನಾನು ವಾಜಿದ್ನನ್ನು 10 ವರ್ಷ ಪ್ರೀತಿಸಿ, ವಿಶೇಷ ವಿವಾಹ ಕಾಯ್ದೆಯಡಿ ಮದುವೆಯಾಗಿದ್ದೆ. ಆದರೆ ವಾಜಿದ್ನ ತಾಯಿ ಮತ್ತು ಕುಟುಂಬದ ಇತರೆ ಸದಸ್ಯರು ನನ್ನನ್ನು ತಮ್ಮ ಧರ್ಮಕ್ಕೆ ಮತಾಂತರಗೊಳ್ಳಲು ಭಾರೀ ಒತ್ತಡ ಹೇರಿದ್ದರು. ಈ ಕಿರುಕುಳ ತಾಳಲಾರದೆ ನಾನು ವಾಜಿದ್ ಜತೆಗಿನ ದಾಂಪತ್ಯ ಜೀವನದಿಂದ ಹೊರಬಂದಿದ್ದೆ’ ಎಂದು ತಿಳಿಸಿದ್ದಾರೆ. ಮತಾಂತರ ವಿರೋಧಿ ಮಸೂದೆ ಚರ್ಚೆಯ ಹಿನ್ನೆಲೆಯಲ್ಲಿ ಈ ಪೋಸ್ಟ್ ಹಾಕಿಕೊಂಡಿರುವುದಾಗಿಯೂ ಕಮಲ್ರುಖ್ ಸ್ಪಷ್ಪಪಡಿಸಿದ್ದಾರೆ. “ವಾಜಿದ್ ಒಬ್ಬ ಅದ್ಭುತ ಟ್ಯಾಲೆಂಟ್ ಹೊಂದಿದ ವ್ಯಕ್ತಿ. ನಾನು, ನನ್ನ ಮಕ್ಕಳು ಅವನನ್ನು ಈಗಲೂ ಮಿಸ್ ಮಾಡಿಕೊಳ್ಳುತ್ತಿದ್ದೇವೆ’ ಎಂದು ದುಃಖ ತೋಡಿಕೊಂಡಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Mukhtar Ansari: ಕುಖ್ಯಾತ ಗ್ಯಾಂಗ್ಸ್ಟರ್, 5 ಬಾರಿ ಶಾಸಕ ಅನ್ಸಾರಿ ಸಾವು
Horoscope: ಉದ್ಯೋಗ ಸ್ಥಾನದಲ್ಲಿ ಮೇಲಿನವರಿಂದ ಶ್ಲಾಘನೆ, ಮಹಿಳಾ ಉದ್ಯಮಿಗಳಿಗೆ ಯಶಸ್ಸು
ಸಂಸದ ಡಿ.ಕೆ.ಸುರೇಶ್ ಆಸ್ತಿ ಮೌಲ್ಯ 593 ಕೋಟಿ ರೂ.!
IPL; ಇಂದು ಚಿನ್ನಸ್ವಾಮಿಯಲ್ಲಿ ಆರ್ಸಿಬಿ ಬಲೆಗೆ ಬೀಳುತ್ತಾ ಕೋಲ್ಕತಾ?
Raichur Lok Sabha Constituency: ಎಸ್ಟಿ ಮೀಸಲು ಕ್ಷೇತ್ರದಲ್ಲಿ 14 ಸಲ ಗೆದ್ದ ಕಾಂಗ್ರೆಸ್