ನಾವು ಆಯ್ಕೆಯಿಂದ ಮುಸ್ಲಿಮರು: ರಾಮ್ದೇವ್ಗೆ ಓವೈಸಿ ತಿರುಗೇಟು
Team Udayavani, Feb 9, 2019, 1:53 PM IST
ಹೈದರಾಬಾದ್: ‘ಶ್ರೀರಾಮ ಕೇವಲ ಹಿಂದುಗಳಿಗೆ ಮಾತ್ರವಲ್ಲದೆ ಮುಸ್ಲಿಮರಿಗೂ ಪೂರ್ವಜ’ ಎಂದಿದ್ದ ಯೋಗ ಗುರು ಬಾಬಾ ರಾಮ್ದೇವ್ ಅವರಿಗೆ ಎಐಎಂಐಎಂ ಪಕ್ಷದ ಸಂಸದ ಅಸಾದುದ್ದೀನ್ ಓವೈಸಿ ಅವರು ತಿರುಗೇಟು ನೀಡಿದ್ದು, ‘ನಾವು ಆಯ್ಕೆಯಿಂದ ಮುಸ್ಲಿಮರು. ನಿಮ್ಮ ನಂಬಿಕೆಗಳನ್ನು ನಿಮ್ಮಲ್ಲಿಯೆ ಇರಿಸಿಕೊಳ್ಳಿ. ಇನ್ನೊಬ್ಬರ ಮೇಲೆ ಹೇರಿಕೆ ಮಾಡುವುದು ತಪ್ಪಾಗುತ್ತದೆ’ ಎಂದಿದ್ದಾರೆ.
‘ಆರ್ಎಸ್ಎಸ್ ಮತ್ತು ಸಂಘಪರಿವಾರದವರು ಇಂತಹ ಹೇಳಿಕೆಗಳನ್ನು ಪ್ರತೀ ಬಾರಿಯೂ ನೀಡುತ್ತಾರೆ.ನಾವು ಆಯ್ಕೆಯಿಂದ ಮುಸ್ಲಿಮರಾಗಿದ್ದೇವೆ. ಯಾರೂ ನಮ್ಮ ಪೂರ್ವಜರನ್ನು ಒತ್ತಾಯ ಮಾಡಿರಲಿಲ್ಲ’ ಎಂದರು.
ರಾಮ್ದೇವ್ ಅವರು ಶುಕ್ರವಾರ ಆಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣದ ಕುರಿತಾಗಿ ಮಾತನಾಡುವ ವೇಳೆ ರಾಮ ಮುಸ್ಲಿಮರಿಗೂ ಪೂರ್ವಜ ಎಂದಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Daily Horoscope: ಉದ್ಯೋಗದಲ್ಲಿ ಪ್ರತಿಭೆಗೆ ಗೌರವ, ದೇವತಾರಾಧನೆಯ ಮೂಲಕ ವಿಘ್ನ ನಿವಾರಣೆ
Srirangapatna: ಐಸ್ ಕ್ರೀಂನಲ್ಲಿ ವಿಷ ಬೆರೆಸಿ ಮಕ್ಕಳ ಕೊಂದ ತಾಯಿ
Loksabha Election; ದೇಶದಲ್ಲಿ ಹಂತ-1: ಮತ ಇಂದು
Ls Polls: ಕಾಂಗ್ರೆಸ್ ಗೆಲ್ಲಿಸದಿದ್ದರೆ ಸಿದ್ದು ಸ್ಥಾನಕ್ಕೆ ಕಂಟಕ; ಸಚಿವ ಬೈರತಿ ಸುರೇಶ್
Wrestlers: ದುಬಾೖ ವಿಮಾನ ನಿಲ್ದಾಣದಲ್ಲಿ ಸಿಕ್ಕಿಬಿದ್ದ ಇಬ್ಬರು ಕುಸ್ತಿಪಟುಗಳು