ಸಂವಿಧಾನ ಬದಲಾಯಿಸೋದಕ್ಕೇ ನಾವು ಬಂದಿರೋದು!

Team Udayavani, Dec 24, 2017, 4:24 PM IST

ಕೊಪ್ಪಳ : ‘ಜಾತ್ಯಾತೀತರ ರಕ್ತದ ಬಗ್ಗೆ ನನಗೆ ಅನುಮಾನವಿದೆ. ನಾವು ಸಂವಿಧಾನ ಬದಲಾಯಿಸಲೆಂದೇ ಬಂದಿರುವುದು’ ಎಂದು ಹೇಳಿಕೆ ನೀಡಿರುವ ಕೇಂದ್ರ ಸಚಿವ ಅನಂತ್‌ ಕುಮಾರ್‌ ಹೆಗಡೆ ಮತ್ತೆ ವಿವಾದಕ್ಕೆ ಗುರಿಯಾಗಿದ್ದಾರೆ.

ಕುಕನೂರಿನಲ್ಲಿ ನಡೆದ ಯುವ ಬ್ರಾಹ್ಮಣ ಸಭೆಯಲ್ಲಿ ಮಾತನಾಡಿದ ಸಚಿವ ಹೆಗಡೆ  ‘ನಾನು ಹಿಂದೂ, ನಾನು ಮುಸ್ಲಿಂ,ನಾನೊಬ್ಬ ಕ್ರೈಸ್ತ, ನಾನೊಬ್ಬ ಲಿಂಗಾಯತ ಎಂದರೆ ನನಗೆ ನಿಜಕ್ಕೂ ಖುಷಿ , ಅವರ ಕಾಲು ಮುಟ್ಟಿ ನಮಸ್ಕರಿಸುತ್ತೇನೆ. ಆದರೆ ಈ ಜಾತ್ಯಾತೀತ ಎನ್ನುತ್ತಾರಲ್ಲ. ಅವರ ರಕ್ತದ ಬಗ್ಗೆ ನನಗೆ ಸಂಶಯ ಇದೆ. ಜಾತ್ಯಾತೀತರು ಅಪ್ಪ- ಅಮ್ಮನ ಪರಿಚಯ ಇಲ್ಲದವರು. ಸಂವಿಧಾನದಲ್ಲಿ ಹೇಳಿದೆ ಅನ್ನುತ್ತಾರೆ. ಹೌದು ಸ್ವಾಮಿ ನಾವೂ ಸಂವಿಧಾನಕ್ಕೆ ಗೌರವ ಕೊಡುತ್ತೇವೆ. ಆದರೆ ಸಂವಿಧಾನ ಕಾಲಕ್ಕೆ ತಕ್ಕಂತೆ ಬದಲಾಗಬೇಕು. ನಾವು ಬಂದಿರೋದೆ ಸಂವಿಧಾನ ಬದಲಾವಣೆ ಮಾಡುವುದಕ್ಕೆ’ ಎಂದರು. 

ಇದೇ ವೇಳೆ ‘ಯಾರೋ ಒಬ್ಬ ಚಮಚಾ ಹೇಳಿದ್ದಕ್ಕೆ ನಾನು ಬದಲಾಗುವುದಿಲ್ಲ’ ಎಂದರು. 

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ