ಕಾಂಗ್ರೆಸ್‌ ತನ್ನ ನಾಯಕತ್ವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು: ಶಶಿ ತರೂರ್‌ ಸಲಹೆ

Team Udayavani, Feb 24, 2020, 11:04 AM IST

ನವದೆಹಲಿ: ಪಕ್ಷ ‘ದಿಕ್ಕು ದೆಸೆ ಇಲ್ಲದೆ ಸಾಗುತ್ತಿದೆ’ ಎಂದು ಜನ ಭಾವಿಸುವ ಮೊದಲೇ ಕಾಂಗ್ರೆಸ್‌ ತನ್ನ ನಾಯಕತ್ವ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕು ಎಂದು ಪಕ್ಷದ ಹಿರಿಯ ನಾಯಕ ಶಶಿ ತರೂರ್‌ ಸಲಹೆ ನೀಡಿದ್ದಾರೆ. ಹಾಗೇ ‘ದೀರ್ಘಾವಧಿ ಅಧ್ಯಕ್ಷ’ರ ಕುರಿತ ಅನಿಶ್ಚಿತತೆಯನ್ನು ಪರಿಹರಿಸುವುದು ಪಕ್ಷದ ಬಲವರ್ಧನೆಗೆ ಸಹಕಾರಿಯಾಗಲಿದೆ ಎಂದಿದ್ದಾರೆ.

ಪಿಟಿಐ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ಸಲಹೆ ನೀಡಿರುವ ತರೂರ್‌, ಮತ್ತೆ ಕಾಂಗ್ರೆಸ್‌ ಅಧ್ಯಕ್ಷರಾಗಿ ಮುಂದುವರಿಯುವ ಕುರಿತು ರಾಹುಲ್‌ ಗಾಂಧಿಯೇ ನಿರ್ಧ ರಿಸಬೇಕು. ಒಂದೊಮ್ಮೆ ಹುದ್ದೆಯಿಂದ ಕೆಳಗಿಳಿಯುವ ಈ ಹಿಂದಿನ ನಿರ್ಧಾರದಿಂದ ಅವರು ಹಿಂದೆ ಸರಿಯದಿದ್ದರೆ, ಒಬ್ಬ ‘ಕ್ರಿಯಾ ಶೀಲ ಹಾಗೂ ಪೂರ್ಣಾವಧಿಯ ನಾಯಕ’ನನ್ನು ನೇಮಿಸಿ, ಪಕ್ಷ ಕಟ್ಟುವ ಕೆಲಸ ಮಾಡುವ ಅಗತ್ಯವಿದೆ ಎಂದು ಹೇಳಿದ್ದಾರೆ.

‘ಒಡೆದಾಳುವ ನೀತಿ’ ಅನುಸರಿಸುತ್ತಿರುವ ಬಿಜೆಪಿಗೆ ದೇಶದಲ್ಲಿ ಕಾಂಗ್ರೆಸ್‌ ಒಂದೇ ಪರ್ಯಾಯ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಆದರೆ, ಮುಖ್ಯವಾಗಿ ಪಕ್ಷದ ನಾಯಕತ್ವಕ್ಕೆ ಸಂಬಂಧಿಸಿದ ಕೆಲವು ನ್ಯೂನತೆಗಳನ್ನು ಸರಿಪಡಿಸಿ ಕೊಳ್ಳುವ ತುರ್ತು ಅಗತ್ಯವಿದೆ ಎಂದು ತರೂರ್‌ ಅಭಿಪ್ರಾಯಪಟ್ಟಿದ್ದಾರೆ. ಇದೇ ವೇಳೆ, ವೈಯಕ್ತಿಕ ಅಹಂಗಳು ಹಾಗೂ ಮಹತ್ವಾಕಾಂಕ್ಷೆಗಳನ್ನು ಬಿಟ್ಟು, ಒಗ್ಗಟ್ಟಾಗುವುದರಿಂದಷ್ಟೇ ಕಾಂಗ್ರೆಸ್‌ ಮತ್ತೆ ಚೇತರಿಕೆ ಕಾಣಲು ಸಾಧ್ಯ ಎಂದು ಪಕ್ಷದ ಮತ್ತೂಬ್ಬ ನಾಯಕ ಜೈರಾಂ ರಮೇಶ್‌ ಅಭಿಪ್ರಾಯಪಟ್ಟಿದ್ದಾರೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ