ಇಷ್ಟೊಂದು ದುರ್ಬಲ ಸರಕಾರ, ದುರ್ಬಲ ಪ್ರಧಾನಿ ದೇಶ ಕಂಡದ್ದಿಲ್ಲ: ಪ್ರಿಯಾಂಕಾ ಗಾಂಧಿ

Team Udayavani, Apr 20, 2019, 5:18 PM IST

ಪುಲ್‌ಪಳ್ಳಿ/ಮಾನಂತವಾಡಿ (ಕೇರಳ) : ದೇಶ ಈ ಹಿಂದೆಂದೂ ಇಷ್ಟೊಂದು ದುರ್ಬಲ ಸರಕಾರವನ್ನು ಮತ್ತು ಪ್ರಧಾನಿಯನ್ನು ಕಂಡದ್ದಿಲ್ಲ ಎಂದು ಕಾಂಗ್ರೆಸ್‌ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಬಿಜೆಪಿ ಮತ್ತು ಪ್ರಧಾನಿ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ.

ಪ್ರಿಯಾಂಕಾ ಗಾಂಧಿ ಅವರು ಪ್ರಕೃತ ಕೇರಳದ ವಯನಾಡ್‌ನ‌ಲ್ಲಿ ತನ್ನ ಸಹೋದರ, ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಪರ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ.

ಸರಕಾರದ ನೀತಿಗಳನ್ನು ಟೀಕಿಸುವವರ ಧ್ವನಿಯನ್ನು ದಮನಿಸುವುದನ್ನೇ ನಾವು ರಾಷ್ಟ್ರ ವಾದಿ ಎಂದು ತಿಳಿಯಬೇಕೇ ಎಂದು ಪ್ರಿಯಾಂಕಾ ಅವರು ಪುಲಪಳ್ಳಿಯಲ್ಲಿ ನಡೆದ ಬೃಹತ್‌ ರಾಲಿಯಲ್ಲಿ ಪ್ರಶ್ನಿಸಿದರು.

ತಮ್ಮ ಸಮಸ್ಯೆಗಳನ್ನು ತಿಳಿಸಲು  ದಿಲ್ಲಿಗೆ ಬರಿಗಾಲಲ್ಲಿ ಪಾದಯಾತ್ರೆಗೈದ ಸಹಸ್ರಾರು ರೈತರ ಧ್ವನಿಯನ್ನು ದಮನಿಸುವುದು ರಾಷ್ಟ್ರವಾದ ಆದೀತೇ ಎಂದು ಪ್ರಿಯಾಂಕಾ ಪ್ರಶ್ನಿಸಿದರು. ಜನರಿಗೆ ತಮ್ಮನ್ನು ಗೌರವದಿಂದ ಕಾಣುವ ಪ್ರಧಾನಿ ಬೇಕಾಗಿದ್ದಾರೆ ಹೊರತು ತಾನೇ ಕೊಟ್ಟ ಆಶ್ವಾಸನೆಯನ್ನು ತಾನೇ ಮುರಿಯುವ, ಮರೆಯುವ ಪ್ರಧಾನಿಯು ಜನರಿಗೆ ಬೇಕಾಗಿಲ್ಲ ಎಂದು ಪ್ರಿಯಾಂಕಾ ಅವರು ಮೋದಿಗೆ ಪರೋಕ್ಷವಾಗಿ ಟಾಂಗ್‌ ನೀಡಿದರು.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ