ಪಶ್ಚಿಮ ಬಂಗಾಳ ಗವರ್ನರ್‌ಗೆ ಇಲ್ಲ ಕಾಪ್ಟರ್‌

Team Udayavani, Nov 15, 2019, 12:24 AM IST

ನವದೆಹಲಿ: ಪಶ್ಚಿಮ ಬಂಗಾಳದಲ್ಲಿ ಕಾರ್ಯಕ್ರಮವೊಂದಕ್ಕೆ ತೆರಳಲು ರಾಜ್ಯಪಾಲರಿಗೆ ಹೆಲಿಕಾಪ್ಟರ್‌ ನಿರಾಕರಿಸಿದ್ದರಿಂದ ಅವರು 600 ಕಿ.ಮೀ. ರಸ್ತೆ ಮಾರ್ಗವಾಗಿ ಸಂಚರಿಸಲು ನಿರ್ಧರಿಸಿದ್ದಾರೆ‌.

ಗಡಿಭಾಗವಾದ ಮುರ್ಷಿದಾಬಾದ್‌ನ ಪ್ರೊ.ಸಯೀದ್‌ ನೂರುಲ್‌ ಹಸನ್‌ ಕಾಲೇಜಿನಲ್ಲಿ ಶುಕ್ರವಾರ ನಡೆಯಲಿರುವ ರಜತ ಮಹೋತ್ಸವಕ್ಕೆ ರಾಜ್ಯಪಾಲ ಜಗದೀಪ್‌ ಧನ್‌ಕರ್‌ ಅವರನ್ನು ಮುಖ್ಯ ಅತಿಥಿಯನ್ನಾಗಿ ಆಹ್ವಾನಿಸಲಾಗಿತ್ತು. ಆದರೆ, ರಾಜ್ಯ ಸರ್ಕಾರ ಹೆಲಿಕಾಪ್ಟರ್‌ ವ್ಯವಸ್ಥೆ ಮಾಡಿಕೊಡಲು ನಿರಾಕರಿಸಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ