ಪಶ್ಚಿಮ ಬಂಗಾಲದ ನಾದಿಯಾ ನೋಡಾಲ್ ಇಲೆಕ್ಷನ್ ಆಫೀಸರ್ ನಾಪತ್ತೆ; ಶೋಧ, ತನಿಖೆ
Team Udayavani, Apr 19, 2019, 11:28 AM IST
ಕೋಲ್ಕತ : ಪಶ್ಚಿಮ ಬಂಗಾಲದ ನಾದಿಯಾ ಜಿಲ್ಲೆಯ ನೋಡಾಲ್ ಇಲೆಕ್ಷನ್ ಆಫೀಸರ್ ಅರ್ನಾಬ್ ರಾಯ್ ಅವರು ನಿನ್ನೆ ಗುರುವಾರದಿಂದ ನಾಪತ್ತೆಯಾಗಿದ್ದಾರೆ.
ಅರ್ನಾಬ್ ರಾಯ್ ಅವರು ತಮ್ಮ ಚುನಾವಣಾ ಕರ್ತವ್ಯದ ಮೇಲೆ ಬ್ರಿಪ್ರದಾಸ್ ಪಾಸ್ ಚೌಧರಿ ಪಾಲಿಟೆಕ್ನಿಕ್ ಕಾಲೇಜಿಗೆ ನಿನ್ನೆ ಗುರುವಾರ ಬೆಳಗ್ಗೆ ಹೋಗಿದ್ದರು. ಆದರೆ ಮಧ್ಯಾಹ್ನ ಊಟದ ಬಳಿಕ ಅವರು ನಾಪತ್ತೆಯಾದರು; ಅವರ ಅಧಿಕೃತ ವಾಹನ ಅವರ ಕರ್ತವ್ಯ ತಾಣದಲ್ಲೇ ಇದೆ ಎಂದು ಮೂಲಗಳು ತಿಳಿಸಿವೆ.
ಅರ್ನಾಬ್ ರಾಯ್ ಅವರು ತಮ್ಮ ಅಧೀನದ ಎಲ್ಲ ಇವಿಎಂ ಮತ್ತು ವಿವಿಪ್ಯಾಟ್ ಗಳ ಹೊಣೆಗಾರಿಕೆ ಹೊಂದಿದ್ದಾರೆ.
ಪೊಲೀಸರೀಗ ನಾಪತ್ತೆಯಾಗಿರುವ ಅರ್ನಾಬ್ ಅವರಿಗಾಗಿ ಶೋಧ ಕಾರ್ಯಾಚರಣೆ ಪತ್ತೆ ತನಿಖೆಯನ್ನು ಆರಂಭಿಸಿದ್ದಾರೆ. ಜಿಲ್ಲಾ ಮ್ಯಾಜಿಸ್ಟ್ರೇಟರು ಮತ್ತು ಎಸ್ ಪಿ ಅವರು ಚುನಾವಣಾ ಆಯುಕ್ತರ ಜತೆಗೂಡಿ ಪರಿಸ್ಥಿತಿಯನ್ನು ಗಂಭೀರವಾಗಿ ಅಲೋಕಿಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Brahmos; ಫಿಲಿಪ್ಪೀನ್ಸ್ಗೆ ಬ್ರಹ್ಮೋಸ್: ಭಾರತದ ಮೊದಲ ರಫ್ತು
EC ಚುನಾವಣ ಆಯೋಗ ಅಲ್ಲ, ಬಿಜೆಪಿ ಆಯೋಗ: ಮಮತಾ ಬ್ಯಾನರ್ಜಿ ಟೀಕಾಸ್ತ್ರ
ED; ನಾನು ತಿಂದದ್ದು ಮೂರೇ ಮಾವು: ಕೋರ್ಟ್ಗೆ ಕೇಜ್ರಿವಾಲ್ ಮಾಹಿತಿ
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು