ದೇಶದ ಮಿಲಿಟರಿಗೆ “CDS” ನೇಮಕ, ಮೋದಿ ಮಹತ್ವದ ಘೋಷಣೆ, ಸಿಡಿಎಸ್ ಗೆ ಪರಮಾಧಿಕಾರ ಏನಿದು?

Team Udayavani, Aug 15, 2019, 11:22 AM IST

ನವದೆಹಲಿ:ಎನ್ ಡಿಎ ನೇತೃತ್ವದ ಸರಕಾರ 2ನೇ ಬಾರಿ ಕೇಂದ್ರದಲ್ಲಿ ಅಧಿಕಾರಕ್ಕೇರಿದ 70 ದಿನದೊಳಗೆ 70 ವರ್ಷಗಳಲ್ಲಿ ಸಾಧಿಸಲಾಗದ್ದನ್ನು ಸಾಧಿಸಿ ತೋರಿಸಿದ್ದೇವೆ. ಜಮ್ಮು-ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ 370 ಮತ್ತು 35ಎ ವಿಧಿಯನ್ನು ರದ್ದುಗೊಳಿಸಿದ್ದೇವೆ. ಮುಸ್ಲಿಂ ಮಹಿಳೆಯರಿಗೆ ಸಮಾನ ಹಕ್ಕು ದೊರೆಯಲು ತ್ರಿವಳಿ ತಲಾಖ್ ನಿಷೇಧಿಸಿ ಹೊಸ ಮಸೂದೆ ಮಂಡಿಸಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಕೆಂಪುಕೋಟೆಯಲ್ಲಿ 73ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕೆಂಪುಕೋಟೆಯಲ್ಲಿ ಗುರುವಾರ ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಪ್ರಧಾನಿ ಮೋದಿ ಮಹತ್ವದ ಮತ್ತೊಂದು ನಿರ್ಧಾರವನ್ನು ಘೋಷಿಸಿದ್ದಾರೆ. ಅದೇನು ಗೊತ್ತಾ ದೇಶದ ಸೇನೆಗೆ ಚೀಫ್ ಆಫ್ ಡಿಫೆನ್ಸ್ ಸ್ಟಾಪ್(ಸಿಡಿಎಸ್) ನೇಮಕ ಮಾಡುವುದಾಗಿ.

ಏನಿದು ಸಿಡಿಎಫ್?

ಕೇಂದ್ರ ಸರಕಾರ ರಾಷ್ಟ್ರ ರಕ್ಷಣಾ ವ್ಯವಸ್ಥೆಯನ್ನು ಮತ್ತಷ್ಟು ಬಲಪಡಿಸುವ ನಿಟ್ಟಿನಲ್ಲಿ ಚೀಫ್ ಆಫ್ ಡಿಫೆನ್ಸ್ ಸ್ಟಾಫ್(ಮುಖ್ಯಸೇನಾಧಿಕಾರಿ) ಅನ್ನು ಅನುಷ್ಠಾನಗೊಳಿಸಲು ನಿರ್ಧರಿಸಿದೆ. ಈ ಸಿಡಿಎಫ್ ನೂತನ ಹುದ್ದೆ ಸೃಷ್ಟಿಯಿಂದ ಭಾರತೀಯ ಸೇನಾಪಡೆಯ ಆರ್ಮಿ, ನೌಕಾದಳ ಮತ್ತು ವಾಯುದಳದ ಸಮನ್ವಯ ಸಾಧಿಸಲು ಸಹಕಾರಿಯಾಗಲಿದೆ.

ದೇಶದ ಸೇನೆಗೆ ಚೀಫ್ ಆಫ್ ಡಿಫೆನ್ಸ್ ಸ್ಟಾಫ್(ಸಿಡಿಎಸ್) ನೇಮಕ ಮಾಡಬೇಕೆಂದು ಈ ಹಿಂದೆ ಹಲವಾರು ಬಾರಿ ತಜ್ಞರು ಮತ್ತು ಹಿರಿಯ ಅಧಿಕಾರಿಗಳು ಆಗ್ರಹಿಸಿದ್ದರು. ಇದು 1999ರ ಕಾರ್ಗಿಲ್ ಯುದ್ಧದ ಬಳಿಕ ಮೊದಲ ಬಾರಿಗೆ ಸಿಡಿಎಸ್ ಬಗ್ಗೆ ಶಿಫಾರಸು ಮಾಡಲಾಗಿತ್ತು. ಈ ಸಿಡಿಎಸ್ ನೂತನ ಹುದ್ದೆಯ ಮುಖ್ಯ ಉದ್ದೇಶ ಸೇನೆಯ ಮೂರು ವಲಯದ ನಡುವೆ ಉತ್ತಮ ಸಮನ್ವಯ ಸಾಧಿಸುವುದು.

ನಮ್ಮ ದೇಶದ ಸೇನೆ ಹೆಮ್ಮೆಯ ಪ್ರತೀಕವಾಗಿದೆ. ಹೀಗಾಗಿ ಇನ್ಮುಂದೆ ಸೇನೆಯ ನಡುವಿನ ಸಮನ್ವಯ ಮತ್ತಷ್ಟು ಚುರುಕುಗೊಳ್ಳಬೇಕಿದೆ. ಈ ಹಿನ್ನೆಲೆಯಲ್ಲಿ ನಾನು ಕೆಂಪುಕೋಟೆಯಲ್ಲಿ ಮಹತ್ವದ ನಿರ್ಧಾರವನ್ನು ಘೋಷಿಸುತ್ತಿದ್ದೇನೆ. ಭಾರತದ ಸೇನೆಗೆ ಶೀಘ್ರವೇ ಮುಖ್ಯ ಸೇನಾಧಿಕಾರಿ(ಸಿಡಿಎಸ್) ನೇಮಕವಾಗಲಿದ್ದಾರೆ ಎಂದು ಮೋದಿ ಹೇಳಿರುವುದು ಹೆಚ್ಚು ಮಹತ್ವದ ಪಡೆದಿದೆ.

ಸಿಡಿಎಸ್ ಅಧಿಕಾರ ಏನು?

ಚೀಫ್ ಆಫ್ ಡಿಫೆನ್ಸ್ ಸ್ಟಾಫ್ ಹುದ್ದೆ ಹೇಗೆ ಕಾರ್ಯನಿರ್ವಹಿಸಲಿದೆ ಎಂದರೆ..ಸೇನಾ ಮುಖ್ಯಾಧಿಕಾರಿ ಪ್ರಸ್ತುತ ಇರುವ ಸೇನೆಯ ಮೂರು ವಿಭಾಗದ ಸಂಬಂಧಿಸಿದಂತೆ ಕೇಂದ್ರ ಸರಕಾರಕ್ಕೆ ಸಲಹೆ ನೀಡುವ ಏಕೈಕ ಸಮನ್ವಯಾಧಿಕಾರಿಯಾಗಿರುತ್ತಾರೆ. ಭಾರತದ ಆರ್ಮಿ, ನೌಕಾದಳ ಮತ್ತು ವಾಯುದಳಕ್ಕೆ ಸಂಬಂಧಿಸಿದ ಸಿಡಿಎಸ್ ಸರ್ಕಾರಕ್ಕೆ ಸಲಹೆ ನೀಡುವ ಸಿಂಗಲ್ ಪಾಯಿಂಟ್ ಅಧಿಕಾರ ಅವರದ್ದಾಗಿರುತ್ತದೆ. ಈ ಸಲಹೆ ಮೇಲೆ ಕೇಂದ್ರ ನಿರ್ಧಾರ ಕೈಗೊಳ್ಳಲಿದೆ. ಆರ್ಮಿ, ನೌಕದಳ ಮತ್ತು ವಾಯುಪಡೆಗೆ ಸಿಡಿಎಸ್(ಮುಖ್ಯ ಸೇನಾಧಿಕಾರಿ) ಮುಖ್ಯಸ್ಥರಾಗಿದ್ದು, 5 ಸ್ಟಾರ್ ಹೊಂದಿರುವ ಮಿಲಿಟರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಾರೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ