ಪುರುಷ, ಮಹಿಳೆಯರ ಮಾದರಿ ತೂಕ ಹೆಚ್ಚಳ: ರಾಷ್ಟ್ರೀಯ ಪೌಷ್ಟಿಕ ಸಂಸ್ಥೆಯ ನೂತನ ಮಾನದಂಡ
Team Udayavani, Sep 30, 2020, 6:29 AM IST
ಸಾಂದರ್ಭಿಕ ಚಿತ್ರವನ್ನು ಬಳಸಲಾಗಿದೆ – Representative Image Used
ಹೈದರಾಬಾದ್: ರಾಷ್ಟ್ರೀಯ ಪೌಷ್ಟಿಕ ಸಂಸ್ಥೆ (ಎನ್‌ಐಎನ್)ಯುಭಾರತೀಯರ ಮಾದರಿ ತೂಕವನ್ನು 5 ಕೆ.ಜಿ. ಹೆಚ್ಚಿಸಿ ಮಾನದಂಡ ಹೊರಡಿಸಿದೆ.
ಪುರುಷರ ಮಾದರಿ ತೂಕವನ್ನು 60ರಿಂದ 65 ಕೆ.ಜಿ.ಗೆ ಹೆಚ್ಚಿಸಿದೆ. ಮಹಿಳೆಯರ ಮಾದರಿ ತೂಕವನ್ನು 50 ಕೆ.ಜಿ.ಯಿಂದ 55 ಕಿಲೋಗೆ ನಿಗದಿಪಡಿಸಿದೆ.
ಈ ತೂಕಕ್ಕೆ ತಕ್ಕಂತೆ ಮಾದರಿ ಎತ್ತರವನ್ನೂ ಪರಿಷ್ಕರಿಸಿದೆ. ಪುರುಷರಿಗೆ 5.6ರಿಂದ 5.8 ಅಡಿ, ಮಹಿಳೆಯರಿಗೆ 5 ಅಡಿಯಿಂದ 5.3 ಅಡಿ ಎತ್ತರ ನಿಗದಿಪಡಿಸಿದೆ.
ಎನ್‌ಐಎನ್ ಗೊತ್ತುಪಡಿಸಿರುವ ನೂತನ ಮಾನದಂಡವನ್ನೇ ಶರೀರ ತೂಕ ಸೂಚ್ಯಂಕಕ್ಕೆ (ಬಿಎಂಐ) ಪರಿಗಣಿಸಲಾಗುತ್ತದೆ.
ರಾಷ್ಟ್ರೀಯ ಕೌಟುಂಬಿಕ ಆರೋಗ್ಯ ಸಮೀಕ್ಷೆ (2015), ರಾಷ್ಟ್ರೀಯ ಪೌಷ್ಟಿಕ ಮೇಲ್ವಿಚಾರಣ ಸಮಿತಿ (2016), ವಿಶ್ವ ಆರೋಗ್ಯ ಸಂಸ್ಥೆ (2006), ಭಾರತೀಯ ಮಕ್ಕಳ ತಜ್ಞರ ಅಕಾಡೆಮಿಯ (2015) ವರದಿ ಆಧರಿಸಿ ಮಾನದಂಡ ರೂಪಿಸಲಾಗಿದೆ.
ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್ ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ
ಎಷ್ಟು ಆಹಾರ ಸೇವಿಸಬೇಕು?: 2000 ಕಿಲೋ ಕ್ಯಾಲರಿಗೆ 40 ಗ್ರಾಂ ಆಹಾರ ಸೇವನೆ ದೇಹಕ್ಕೆ ಸುರಕ್ಷಿತ. ಜಡ, ಮಧ್ಯಮ ಮತ್ತು ಹೆಚ್ಚು ಚಟುವಟಿಕೆಯುಳ್ಳ ಮಂದಿ ಕ್ರಮವಾಗಿ 25, 30 ಮತ್ತು 40 ಗ್ರಾಂ ಕೊಬ್ಬಿನಾಂಶವುಳ್ಳ ಆಹಾರ ಸೇವಿಸಬೇಕು. ನಿತ್ಯ 2 ಗ್ರಾಂ ಸೋಡಿಯಂ, 3,510 ಮಿ.ಗ್ರಾಂ ಪೊಟ್ಯಾಶಿಯಂ ದೇಹಕ್ಕೆ ಅತ್ಯವಶ್ಯ ಎಂದು ಎನ್‌ಐಎನ್ ಅಭಿಪ್ರಾಯಪಟ್ಟಿದೆ.
– ಮೂರು ಸಮಿತಿಗಳ ವರದಿ ಆಧರಿಸಿ ಹೊಸ ಮಾನದಂಡ ರೂಪಿಸಲು ನಿರ್ಧಾರ
– 2 ಸಾವಿರ ಕಿಲೋಕ್ಯಾಲರಿಗೆ 40 ಗ್ರಾಂ ಆಹಾರ ಸೇವನೆ ಸುರಕ್ಷಿತ
– ನಿತ್ಯ 2 ಗ್ರಾಂ, 3,510 ಮಿಲಿಗ್ರಾಂ ಪೊಟ್ಯಾಶಿಯಂ ಅಗತ್ಯವೆಂದ ಎನ್‌ಐಎನ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tapi River; ಸಲ್ಮಾನ್ ಮನೆ ದಾಳಿಗೆ ಬಳಸಿದ್ದ ಅಸ್ತ್ರ ನದಿಯಲ್ಲಿ ವಶ!
MDH- Everest ಮಸಾಲೆ ನಿಷೇಧ: ಸಿಂಗಾಪುರ, ಹಾಂಕಾಂಗ್ ನಿಂದ ವಿವರ ಕೇಳಿದ ಭಾರತ
Loksabha Election; ಬಿಜೆಪಿ 14ನೇ ಪಟ್ಟಿ: ಲಡಾಖ್ ಹಾಲಿ ಸಂಸದ ನಮ್ಗ್ಯಾಲ್ ಗೆ ಕೊಕ್
Video| ರಾಮನ ಫೋಟೋ ಇರುವ ತಟ್ಟೆಯಲ್ಲಿ ಬಿರಿಯಾನಿ: ವಿವಾದ
Reliance Jio Profit; ರಿಲಯನ್ಸ್ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ