ನೋಟಲ್ಲೇಕೆ ಸ್ವಚ್ಛ ಭಾರತ?ಉತ್ತರ ನೀಡದ ಆರ್ಬಿಐ
Team Udayavani, Oct 16, 2017, 4:02 PM IST
ನವದೆಹಲಿ: ಹೊಸ 500 ಮತ್ತು 2 ಸಾವಿರ ಮುಖಬೆಲೆಯ ನೋಟುಗಳಲ್ಲಿ ಪ್ರಧಾನಿ ಮೋದಿ ಅವರ ಮಹತ್ವಾಕಾಂಕ್ಷೆಯ “ಸ್ವಚ್ಛ ಭಾರತ’ ಯೋಜನೆಯ ಲೋಗೋ ಬಳಸಿರುವ ನಿರ್ಧಾರದ ಕುರಿತ ಪ್ರಶ್ನೆಗೆ ಉತ್ತರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ನಿರಾಕರಿಸಿದೆ.
ಈ ನಿರ್ಧಾರ ಕುರಿತು ಮಾಹಿತಿ ಹಕ್ಕು ಕಾಯ್ದೆಯನ್ವಯ ಮಾಹಿತಿ ಕೋರಲಾಗಿತ್ತು. ಆದರೆ, ಆರ್ಬಿಐ ಭದ್ರತೆ ಕಾರಣ ಹೇಳಿ ಮಾಹಿತಿ ನೀಡಲು ನಿರಾಕರಿಸಿದೆ. ಅಷ್ಟೇ ಅಲ್ಲ, ಬ್ಯಾಂಕು ನೋಟುಗಳಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಜಾಹೀರಾತುಗಳನ್ನು ಮುದ್ರಿಸುವುದಕ್ಕೆ ಸಂಬಂಧಿಸಿ ಇರುವಂಥ ಮಾರ್ಗಸೂಚಿಗಳ ಪ್ರತಿಯನ್ನು ನೀಡಿ ಎಂದೂ ಅರ್ಜಿಯಲ್ಲಿ ಕೋರಲಾಗಿತ್ತು. ಇದಕ್ಕೂ ಆರ್ಬಿಐ ಉತ್ತರ ನೀಡಿಲ್ಲ.