ಫೇಸ್‌ಬುಕ್‌ನಲ್ಲೂ ವಾಟ್ಸ್‌ಆ್ಯಪ್‌ ಸ್ಟೇಟಸ್‌

Team Udayavani, Jul 1, 2019, 5:12 AM IST

ಹೊಸದಿಲ್ಲಿ: ಸಾಮಾನ್ಯವಾಗಿ ನಾವು ವಾಟ್ಸ್‌ ಆ್ಯಪ್‌ನ ಸ್ಟೇಟಸ್‌ನಲ್ಲಿ ಶೇರ್‌ ಮಾಡಿದ ಫೋಟೋವನ್ನೇ ಫೇಸ್‌ಬುಕ್‌ನಲ್ಲೂ ಅಪ್‌ಲೋಡ್‌ ಮಾಡಿರುತ್ತೇವೆ. ಆದರೆ ವಾಟ್ಸ್‌ಆ್ಯಪ್‌ನಿಂದಲೇ ಈ ಕೆಲಸ ಮಾಡಲು ಸದ್ಯ ಅವಕಾಶವಿರಲಿಲ್ಲ.

ಅಂದರೆ ಪ್ರತ್ಯೇಕವಾಗಿ ಎರಡೂ ಅಪ್ಲಿಕೇಶನ್‌ಗಳಲ್ಲಿ ಫೋಟೋ ಅಥವಾ ಪಠ್ಯವನ್ನು ಹಂಚಿಕೊಳ್ಳಬೇಕಾಗಿತ್ತು. ಆದರೆ ಈ ಎರಡೂ ಸೌಲಭ್ಯಗಳನ್ನು ಲಿಂಕ್‌ ಮಾಡಲು ಫೇಸ್‌ಬುಕ್‌ ನಿರ್ಧರಿಸಿದೆ. ಅಂದರೆ ನೀವು ವಾಟ್ಸ್‌ಆ್ಯಪ್‌ನಲ್ಲಿ ಒಂದು ಸ್ಟೇಟಸ್‌ ಹಾಕಿದರೆ, ಅದನ್ನು ಫೇಸ್‌ಬುಕ್‌ನಲ್ಲೂ ಅಲ್ಲಿಂದಲೇ ಹಂಚಿಕೊಳ್ಳಬಹುದು.

ಆದರೆ ಈ ಸೌಲಭ್ಯ ಸದ್ಯಕ್ಕೆ ಪರೀಕ್ಷಾರ್ಥವಾಗಿ ವಾಟ್ಸ್‌ ಆ್ಯಪ್‌ನ ಬೀಟಾ ಆವೃತ್ತಿಯಲ್ಲಿ ಮಾತ್ರ ಲಭ್ಯವಿದೆ. ಮುಂದಿನ ದಿನಗಳಲ್ಲಿ ಇದನ್ನು ಎಲ್ಲ ಬಳಕೆದಾರರಿಗೂ ವಿಸ್ತರಿಸಲಾಗುತ್ತದೆ. ವಾಟ್ಸ್‌ಆ್ಯಪ್‌ನಲ್ಲಿ ಫೋಟೋ ಒಂದನ್ನು ಸ್ಟೇಟಸ್‌ಗೆ ಪೋಸ್ಟ್‌ ಮಾಡಿದ ಅನಂತರ, ಅಲ್ಲಿಯೇ ಕಾಣಿಸುವ “ಈ ಸ್ಟೇಟಸ್‌ ಅನ್ನು ಫೇಸ್‌ಬುಕ್‌ನಲ್ಲೂ ಹಂಚಿಕೊಳ್ಳಿ’ ಎಂಬ ಲಿಂಕ್‌ ಅನ್ನು ಕ್ಲಿಕ್ಕಿಸಿದರೆ ಸಾಕು. ಅದು ಫೇಸ್‌ಬುಕ್‌ ಸ್ಟೋರಿಯಾಗಿ ಕಾಣಿಸಿಕೊಳ್ಳುತ್ತದೆ. ಅಂದರೆ ಈ ಸೌಲಭ್ಯ ವಾಟ್ಸ್‌ಆ್ಯಪ್‌ ಸರ್ವರ್‌ ಮೂಲಕ ಸಾಗಣೆಯಾಗುವುದಿಲ್ಲ. ಬದಲಿಗೆ ನಮ್ಮ ಮೊಬೈಲ್‌ನಲ್ಲೇ ಇದು ವರ್ಗಾವಣೆಯಾಗುತ್ತದೆ. ಹೀಗಾಗಿ ಇದಕ್ಕೆ ಕಾನೂನಿನ ತೊಡಕೂ ಇಲ್ಲ ಎಂದು ಹೇಳಲಾಗಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ