ಅಂದು ರಾಹುಲ್ ಹರಿದು ಹಾಕಿದ್ದ ಸುಗ್ರೀವಾಜ್ಞೆ ಪ್ರತಿ ಇಂದು ಅವರಿಗೆ ಮುಳುವಾಯ್ತು!

ಮಾಡಿದ್ದುಣ್ಣೋ ಮಹರಾಯ ಎಂಬಂತಾಗಿದೆ ರಾಹುಲ್ ಸ್ಥಿತಿ; 2013ರಲ್ಲಿ ಆಗಿದ್ದೇನು?

Team Udayavani, Mar 24, 2023, 4:21 PM IST

ಅಂದು ರಾಹುಲ್ ಹರಿದು ಹಾಕಿದ್ದ ಸುಗ್ರೀವಾಜ್ಞೆ ಪ್ರತಿ ಇಂದು ಅವರಿಗೆ ಮುಳುವಾಯ್ತು!

ಹೊಸದಿಲ್ಲಿ: 2019ರಲ್ಲಿ ಕರ್ನಾಟಕದಲ್ಲಿ ಭಾಷಣ ಮಾಡುವ ವೇಳೆ ನೀಡಿದ ಹೇಳಿಕೆ ವಿಚಾರದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರನ್ನು ಸೂರತ್ ಕೋರ್ಟ್ ದೋಷಿ ಎಂದು ತೀರ್ಪು ನೀಡಿದ್ದು, ಎರಡು ವರ್ಷ ಶಿಕ್ಷೆ ವಿಧಿಸಿದೆ. ಹೀಗಾಗಿ 2013ರ ಸುಪ್ರೀಂ ಕೋರ್ಟ್ ಆದೇಶದಂತೆ ರಾಹುಲ್ ಗಾಂಧಿ ಅವರ ಲೋಕಸಭೆ ಸದಸ್ಯತ್ವ ಅನರ್ಹವಾಗಿದೆ.

ನಿಗದಿತ ಪ್ರಕರಣದಲ್ಲಿ ಎರಡು ವರ್ಷವರೆಗೆ ಶಿಕ್ಷೆಗೆ ಗುರಿಯಾದ ಸಂಸತ್‌ ಸದಸ್ಯರು (ಲೋಕಸಭೆ ಮತ್ತು ರಾಜ್ಯಸಭೆ) ಶಾಸಕರು (ವಿಧಾನಸಭೆ ಮತ್ತು ವಿಧಾನ ಪರಿಷತ್‌) ಕೂಡಲೇ ತಾವು ಹೊಂದಿರುವ ಸದನದ ಸದಸ್ಯತ್ವದಿಂದ ಅನರ್ಹಗೊಳ್ಳುತ್ತಾರೆ.

ಕ್ರಿಮಿನಲ್ ಪ್ರಕರಣಗಳಲ್ಲಿ ರಾಜಕಾರಣಿಗಳನ್ನು ಅನರ್ಹಗೊಳಿಸುವ ಕುರಿತು 2013 ರ ಆದೇಶವನ್ನು ಸುಪ್ರೀಂ ಕೋರ್ಟ್ ಪ್ರಕಟಿಸಿದಾಗ, ಯುಪಿಎ ಸರ್ಕಾರವು ಶಿಕ್ಷೆಗೊಳಗಾದ ಸಂಸದರು ಮತ್ತು ಶಾಸಕರು ಶಿಕ್ಷೆಯ ನಂತರ ಮೂರು ತಿಂಗಳವರೆಗೆ ಸದನದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಲು ಸುಗ್ರೀವಾಜ್ಞೆಯನ್ನು ಸೂಚಿಸಿತ್ತು. ಆ ಅವಧಿಯಲ್ಲಿ, ಅವರು ತಮ್ಮ ದೋಷಾರೋಪಣೆಗೆ ತಡೆಯಾಜ್ಞೆಗಾಗಿ ಉನ್ನತ ನ್ಯಾಯಾಲಯಗಳಿಗೆ ಮೇಲ್ಮನವಿ ಸಲ್ಲಿಸಬಹುದು ಮತ್ತು ಸದನದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳಬಹುದು ಎಂಬ ಅಂಶವನ್ನಿರಿಸಿ ಸುಗ್ರಿವಾಜ್ಞೆಗೆ ಸಿದ್ದತೆ ನಡೆಸಿತ್ತು.

ಇದನ್ನೂ ಓದಿ:ಜಯಲಲಿತಾ ಟು ಅಜಂ ಖಾನ್; ಶಿಕ್ಷೆಯ ಕಾರಣದಿಂದ ಅನರ್ಹಗೊಂಡ ಸಂಸದ-ಶಾಸಕರ ಪಟ್ಟಿ ಇಲ್ಲಿದೆ

ಆದರೆ, ರಾಹುಲ್ ಗಾಂಧಿ ಯುಪಿಎ ಸರ್ಕಾರದ ಈ ಸುಗ್ರೀವಾಜ್ಞೆಯನ್ನು ಬಲವಾಗಿ ವಿರೋಧಿಸಿದ್ದರು. ಆಗ ಅಮೇಠಿ ಕ್ಷೇತ್ರದ ಸಂಸದರಾಗಿದ್ದ ರಾಹುಲ್‌ ಗಾಂಧಿಯವರು, ಕಾಂಗ್ರೆಸ್‌ ಮುಖಂಡ ಅಜಯ ಮಕೇನ್‌ ಉಪಸ್ಥಿತಿಯಲ್ಲಿ ನಡೆಸಲಾಗಿದ್ದ ಸುದ್ದಿಗೋಷ್ಠಿಯಲ್ಲಿ ಸುಗ್ರೀವಾಜ್ಞೆಯ ಪ್ರತಿಯನ್ನೇ ಹರಿದು ಎಸೆದಿದ್ದರು. ಸೆ.27ರಂದು ಈ ಘಟನೆ ನಡೆದಿತ್ತು. ಅಂತಿಮವಾಗಿ ಅ.2ರಂದು ಕೇಂದ್ರ ಸರ್ಕಾರ ಸುಗ್ರೀವಾಜ್ಞೆಯನ್ನೇ ವಾಪಸ್‌ ಪಡೆದಿತ್ತು. ಇದೀಗ ರಾಹುಲ್‌ ಗಾಂಧಿಯವರಿಗೆ ತಕ್ಷಣದಿಂದ ಅನ್ವಯವಾಗುವಂತೆ ಅನರ್ಹಗೊಂಡಿದ್ದಾರೆ. ಒಂದು ವೇಳೆ ಅಂದು ರಾಹುಲ್ ಪ್ರತಿ ಹರಿಯದೆ ವಿರೋಧ ಮಾಡದೆ ಇದ್ದರೆ, ಸುಗ್ರಿವಾಜ್ಞೆ ಜಾರಿಯಾಗಿ ರಾಹುಲ್ ಗೆ ಮೂರು ತಿಂಗಳ ಅವಕಾಶ ಸಿಗುತ್ತಿತ್ತು.

ಇದೀಗ ರಾಹುಲ್ ಗಾಂಧಿ 2024ರ ಲೋಕಸಭೆ ಚುನಾವಣೆಗೆ ಸ್ಪರ್ಧಿಸುವ ಅವಕಾಶವನ್ನೂ ಕಳೆದುಕೊಳ್ಳಲಿದ್ದಾರೆ.

ಟಾಪ್ ನ್ಯೂಸ್

ISSF Junior World Cup: ಧನುಷ್‌ ಶ್ರೀಕಾಂತ್‌ಗೆ ಚಿನ್ನ

ISSF Junior World Cup: ಧನುಷ್‌ ಶ್ರೀಕಾಂತ್‌ಗೆ ಚಿನ್ನ

enWorld Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

World Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

Moodlakatte : ರೈಲು ಹಳಿಯಲ್ಲಿ ಶವ ಪತ್ತೆ

vijayendra

PSI ಹಗರಣ; ನನ್ನ ಹೆಸರು ತೇಲಿ ಬಿಟ್ಟಿದ್ದಾರೆ‌, ತನಿಖೆ ಮಾಡಲಿ:ಬಿ‌.ವೈ.ವಿಜಯೇಂದ್ರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-goa

Goa ಆಕರ್ಷಣೆ; ಹೊಸ ಜುವಾರಿ ಸೇತುವೆಯ ಮೇಲೆ ಅವಳಿ ಗೋಪುರಗಳು

1-scsad

KSOU ಶೀಘ್ರದಲ್ಲಿ ಮುಕ್ತ ವಿವಿಯಿಂದ ಆನ್ ಲೈನ್ ಕೋಸ್೯ : ಕುಲಪತಿ ಪ್ರೊ ಹಲ್ಸೆ

1-fdffdsf

Perfect 35 % ಪಡೆದು ಪಾಸಾಗಿ ಸುದ್ದಿಯಾದ ವಿದ್ಯಾರ್ಥಿ; ಹೆತ್ತವರ ಸಂಭ್ರಮ!

ಮಹಿಳೆಯ ನಗ್ನ ದೇಹದ ಚಿತ್ರಣವು ಅಶ್ಲೀಲವೆಂದು ಪರಿಗಣಿಸಲಾಗದು: ಕೇರಳ ಹೈಕೋರ್ಟ್ ಹೇಳಿದ್ದೇನು?

ಮಹಿಳೆಯ ನಗ್ನ ದೇಹದ ಚಿತ್ರಣವು ಅಶ್ಲೀಲವೆಂದು ಪರಿಗಣಿಸಲಾಗದು: ಕೇರಳ ಹೈಕೋರ್ಟ್ ಹೇಳಿದ್ದೇನು?

Snake: ಆಟ ಆಡುತ್ತಿದ್ದಾಗ ಹಾವನ್ನೇ ಜಗಿದು ತಿಂದ 3 ವರ್ಷದ ಮಗು; ಸತ್ತು ಹೋದದ್ದು ಹಾವು.!

Snake: ಆಟ ಆಡುತ್ತಿದ್ದಾಗ ಹಾವನ್ನೇ ಜಗಿದು ತಿಂದ 3 ವರ್ಷದ ಮಗು; ಸತ್ತು ಹೋದದ್ದು ಹಾವು.!

MUST WATCH

udayavani youtube

Balasore Train Tragedy; ಎರಡೂ ರೈಲುಗಳನ್ನು ದುರಸ್ತಿ ಮಾಡಲಾಗಿದೆ: ಅಶ್ವಿನಿ ವೈಷ್ಣವ್

udayavani youtube

ಶುಚಿ ರುಚಿಗೆ ಹೆಸರುವಾಸಿ ಅರ್ಚನಾ ಹೋಟೆಲ್ ಇನ್ನಂಜೆ

udayavani youtube

ಗ್ಯಾರಂಟಿ ಖಚಿತ, ಪ್ರಯಾಣ ಉಚಿತ, ಷರತ್ತು ನಿಯಮಿತ… | ಗ್ಯಾರಂಟಿ ಯೋಜನೆಗಳ ನಿಯಮಗಳು ಇಲ್ಲಿದೆ

udayavani youtube

Yellur: ಗೋಶಾಲೆ ನಿರ್ಮಾಣಕ್ಕೆ ಮೀಸಲಿಟ್ಟ ಜಾಗದಲ್ಲಿ ಅದಮಾರು ಶ್ರೀಗಳಿಂದ ಗೋಪೂಜೆ

udayavani youtube

ಕಪ್ಪು ಬಣ್ಣದ ತುಟಿ…ಕೆಂಪು ಬಣ್ಣವಾಗಿ ಕಾಣಲು ಇಲ್ಲಿದೆ ಸರಳ ಮನೆಮದ್ದು

ಹೊಸ ಸೇರ್ಪಡೆ

ISSF Junior World Cup: ಧನುಷ್‌ ಶ್ರೀಕಾಂತ್‌ಗೆ ಚಿನ್ನ

ISSF Junior World Cup: ಧನುಷ್‌ ಶ್ರೀಕಾಂತ್‌ಗೆ ಚಿನ್ನ

enWorld Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

World Environment Day- 2023: ಜಾಗೃತಿ ಇಲ್ಲದಿದ್ದರೆ ಕಾನೂನು ವ್ಯರ್ಥ: ಸಿದ್ದರಾಮಯ್ಯ

Perampalli: ಡಿವೈಡರ್‌ ಮೇಲೇರಿದ ಕಾರು!

Perampalli: ಡಿವೈಡರ್‌ ಮೇಲೇರಿದ ಕಾರು!

Prabhu chouhan

Cow ಕಾಯ್ದೆ: ಸಚಿವ ವೆಂಕಟೇಶ್ ವಿರುದ್ಧ ಪ್ರಭು ಚೌಹಾಣ್ ಕಿಡಿ

1-asdadsa

ಪ್ರತಿಗ್ರಾಮದಲ್ಲೂ ಕಲ್ಯಾಣಿ ನಿರ್ಮಿಸಲು ಸಾಲುಮರದ ತಿಮ್ಮಕ್ಕ ಮನವಿ