ಪಂಜಾಬ್‌, ರಾಜಸ್ಥಾನ, ಉತ್ತರಾಖಂಡ ರೈಲು ನಿಲ್ದಾಣ ಸ್ಫೋಟಿಸುವುದಾಗಿ ಜೈಶ್‌ ಬೆದರಿಕೆ

Team Udayavani, Apr 19, 2019, 4:02 PM IST

ಹೊಸದಿಲ್ಲಿ : ಪಾಕಿಸ್ಥಾನದ ಜೈಶ್‌ ಎ ಮೊಹಮ್ಮದ ಉಗ್ರ ಸಂಘಟನೆ ತಾನು ಪಂಜಾಬ್‌, ರಾಜಸ್ಥಾನ ಮತ್ತು ಉತ್ತರಾಖಂಡದಲ್ಲಿನ ರೈಲು ನಿಲ್ದಾಣಗಳನ್ನು ಬ್ಲಾಸ್ಟ್‌ ಮಾಡುವ ಬೆದರಿಕೆ ಹಾಕಿದೆ.

ಜೈಶ್‌ ಎ ಮೊಹಮ್ಮದ್‌ ನ ಏರಿಯಾ ಕಮಾಂಡ ರ್‌ ಮನ್ಸೂರ್‌ ಅಹ್ಮದ್‌ ಹಾಕಿರುವ ಬೆದರಿಕೆಯನ್ನು ಒಳಗೊಂಡ, ಹಿಂದಿಯಲ್ಲಿ ಬರೆಯಲಾಗಿರುವ, ಪತ್ರವನ್ನು ಹಿರಿಯ ರೈಲ್ವೇ ಅಧಿಕಾರಿಗಳಿಗೆ ಕಳುಹಿಸಲಾಗಿದೆ.

ಈ ರೀತಿಯ ಒಂದು ಪತ್ರವನ್ನು ಉತ್ತರ ರೈಲ್ವೆಯ ಫಿರೋಜ್‌ಪುರ ವಿಭಾಗೀಯ ರೈಲ್ವೇ ಮ್ಯಾನೇಜರ್‌ ವಿವೇಕ್‌ ಕುಮಾರ್‌ ಅವರಿಗೆ ಬರೆಯಲಾಗಿದೆ. ಜಿಹಾದಿಗಳ ಹತ್ಯೆಗೆ ಪ್ರತೀಕಾರ ತೀರಿಸುವ ಸಲುವಾಗಿ ತಾನು ಮೇ 13ರಂದು ಫಿರೋಜ್‌ಪುರ, ಜಾಲಂಧರ, ಫ‌ರೀದ್‌ಕೋಟ್‌, ಅಮೃತಸರ ಮತ್ತು ಬರ್ನಾಲಾ ರೈಲ್ವೇ ನಿಲ್ದಾಣಗಳನ್ನು ಸ್ಫೋಟಿಸುವುದಾಗಿ ಈ ಪತ್ರದಲ್ಲಿ ಬೆದರಿಕೆ ಒಡ್ಡಲಾಗಿದೆ ಎಂದು ವರದಿಗಳು ತಿಳಿಸಿವೆ.

ಇಲ್ಲಿಯವರೆಗೂ ಏಷ್ಟೋ ದೈವ ದೇವರು ಜ್ಯೋತಿಷ್ಯರಲ್ಲಿ ಕೇಳಿ ಸರಿಯಾದ ಪರಿಹಾರ ಸಿಗದೆ ನೊಂದಿದ್ದರೆ.ಅಂತಃಹ ಯಾವುದೇ ಕಠಿಣ ಸಮಸ್ಯೆ ಗಳಿದ್ದರು ಉತ್ತಮ ಸಲಹೆ ಹಾಗೂ ಶಾಶ್ವತ ಪರಿಹಾರ ತಿಳಿಸುತ್ತಾರೆ.

ಇಂದೇ ಸಂಪರ್ಕಿಸಿ ಶ್ರೀ ಶ್ರೀ ಬಿ.ಎಚ್ ಆಚಾರ್ಯರು 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ