ನೆತನ್ಯಾಹು ಜತೆ ಉಗ್ರ ನಿಗ್ರಹ ಚರ್ಚೆ: ಇಸ್ರೇಲಿಗೆ ಮೋದಿ ತ್ರಿದಿನ ಭೇಟಿ
Team Udayavani, Jul 3, 2017, 7:21 PM IST
ಹೊಸದಿಲ್ಲಿ : ಭದ್ರತೆ ಮತ್ತು ಸಾರ್ವಭೌಮತೆಯ ವಿಷಯದಲ್ಲಿ ಎಂಟೆದೆಯ ರಾಷ್ಟ್ರವೆಂದೇ ಖ್ಯಾತಿವೆತ್ತಿರುವ ಇಸ್ರೇಲ್ ಜತೆಗಿನ ರಾಜತಾಂತ್ರಿಕ ಬಾಂಧವ್ಯಕ್ಕೆ 25 ವರ್ಷಗಳು ತುಂಬಿರುವ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಜುಲೈ 4ರ ಮಂಗಳವಾರದಿಂದ ಮೂರು ದಿನಗಳ ಭೇಟಿಗಾಗಿ ಇಸ್ರೇಲ್ಗೆ ಪ್ರಯಾಣ ಬೆಳೆಸಲಿದ್ದಾರೆ.
ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರೊಂದಿಗಿನ ಭೇಟಿಯಲ್ಲಿ ಉಭಯ ದೇಶಗಳ ನಡುವಿನ ಪರಸ್ಪರ ಲಾಭದಾಯಕ ಎನಿಸುವ ವ್ಯಾಪಕ ವಿಷಯಗಳಿಗೆ ಸಂಬಂಧಿಸಿ ಆಳವಾದ ಚರ್ಚೆ ನಡೆಸಲಾಗುವುದು ಎಂದು ಪ್ರಧಾನಿ ಮೋದಿ ತಮ್ಮ ಫೇಸ್ ಬುಕ್ ಪೋಸ್ಟ್ನಲ್ಲಿ ಹೇಳಿದ್ದಾರೆ.
“ಭಯೋತ್ಪಾದನೆಯಂತಹ ಸಮಾನ ಹಾಗೂ ಪ್ರಮುಖ ಭದ್ರತಾ ಸವಾಲುಗಳನ್ನು ನಿಭಾಯಿಸುವ ಬಗ್ಗೆಯೂ ನಾವು ಚರ್ಚಿಸಲಿದ್ದೇವೆ’ ಎಂದು ಮೋದಿ ತಿಳಿಸಿದ್ದಾರೆ.
ಇಸ್ರೇಲಿಗೆ ಭೇಟಿ ನೀಡುವ ಭಾರತದ ಮೊದಲ ಪ್ರಧಾನಿ ಎಂಬ ಹೆಗ್ಗಳಿಕೆಗೂ ಪಾತ್ರರಾಗಿರುವ ಮೋದಿ, “ಈ ಅಭೂತಪೂರ್ವ ಭೇಟಿಯನ್ನು ಕಾತರದಿಂದ ಎದುರು ನೋಡುತ್ತಿರುವ ನಾನು, ಈ ಭೇಟಿ ಉಭಯ ದೇಶಗಳನ್ನು ಹಾಗೂ ಅವುಗಳ ಜನರನ್ನು ಇನ್ನಷ್ಟು ಸನಿಹಕ್ಕೆ ತರುವಂತಾಗಲೆಂದು ಹಾರೈಸುತ್ತೇನೆ’ ಎಂದು ಹೇಳಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು