ಕಂಪ್ಯೂಟರ್, ಲ್ಯಾಪ್‌ಟಾಪ್ ಗಳಲ್ಲಿ ವಿಂಡೋಸ್ ಅಪ್‌ಡೇಟ್‌ಗೆ ಸರ್ಕಾರ ಸೂಚನೆ
Team Udayavani, Aug 26, 2022, 8:30 PM IST
ನವದೆಹಲಿ: ಕಂಪ್ಯೂಟರ್, ಲ್ಯಾಪ್‌ಟಾಪ್ ಗಳಲ್ಲಿ ವಿಂಡೋಸ್ ಬಳಸುತ್ತಿರುವವರಿಗೆ ಕೇಂದ್ರ ಸರ್ಕಾರ ಎಚ್ಚರಿಕೆ ನೀಡಿದೆ.
ವಿಂಡೋಸ್‌ನ ಕೆಲವು ವರ್ಷನ್‌ಗಳಲ್ಲಿ ವೈರಸ್ ತಡೆಯುವಂತಹ ಶಕ್ತಿ ದುರ್ಬಲಗೊಂಡಿದೆ.
ಹೀಗಾಗಿ, ಕಂಪ್ಯೂಟರ್‌ಗೆ ವೈರಸ್ ದಾಳಿ ನಡೆಸಬಹುದು. ಹೀಗಾಗಿ, ವಿಂಡೋಸ್ ಅಪ್‌ಡೇಟ್ ಮಾಡಿಕೊಳ್ಳಿ ಎಂದೂ ಸರ್ಕಾರ ಸೂಚಿಸಿದೆ.
ಕೇಂದ್ರ ಮಾಹಿತಿ ಮತ್ತು ತಂತ್ರಜ್ಞಾನ ಸಚಿವಾಲಯದ ಕಂಪ್ಯೂಟರ್ ತುರ್ತು ಪ್ರತಿಕ್ರಿಯೆ ತಂಡ(ಸಿಇಆರ್‌ಟಿ) ಈ ಎಚ್ಚರಿಕೆಯನ್ನು ಕೊಟ್ಟಿದೆ.
ವಿಂಡೋಸ್‌ನಲ್ಲಿ ವೈರಸ್ ತಡೆಯುವ ವಿಂಡೋಸ್ ಡಿಫೆಂಡರ್‌ನಲ್ಲಿ ತಾಂತ್ರಿಕ ಸಮಸ್ಯೆ ಕಾಣಿಸಿಕೊಂಡಿದೆ.
ಅದರಿಂದಾಗಿ ಹ್ಯಾಕರ್‌ಗಳು ನೇರವಾಗಿ ಲ್ಯಾಪ್‌ಟಾಪ್/ಕಂಪ್ಯೂಟರ್ ಅನ್ನು ಹ್ಯಾಕ್ ಮಾಡುವ ಸಾಧ್ಯತೆಯಿದೆ.
ವಿಂಡೋಸ್‌ನ 43 ವರ್ಷನ್‌ಗಳಲ್ಲಿ ಈ ಸಮಸ್ಯೆ ಕಾಣಿಸಿಕೊಂಡಿದೆ ಎಂದು ಎಚ್ಚರಿಕೆಯಲ್ಲಿ ತಿಳಿಸಲಾಗಿದೆ.