ಮುಖೇಶ್ ಅಂಬಾನಿ ಇದೀಗ ಏಷ್ಯಾದ 2ನೇ ಅತಿ ಶ್ರೀಮಂತ
Team Udayavani, Aug 2, 2017, 9:30 AM IST
ಹೊಸದಿಲ್ಲಿ: ರಿಲಯನ್ಸ್ ಇಂಡಸ್ಟ್ರೀಸ್ ಅಧ್ಯಕ್ಷ, ಮುಖೇಶ್ ಅಂಬಾನಿ ಇದೀಗ ಏಷ್ಯಾದಲ್ಲೇ 2ನೇ ಅತಿ ಶ್ರೀಮಂತ ಎಂಬ ಪಟ್ಟ ಪಡೆದಿದ್ದಾರೆ. ಬ್ಲೂಮ್ಬರ್ಗ್ ಕೋಟ್ಯಧೀಶರ ಪಟ್ಟಿ ಬಿಡುಗಡೆಯಾಗಿದ್ದು, ಇದರಲ್ಲಿ ಕಳೆದ ಬಾರಿಗೆ ಏಷ್ಯಾದಿಂದ 2ನೇ ಸ್ಥಾನಿಯಾಗಿದ್ದ ಹಾಂಕಾಂಗ್ನ ಉದ್ಯಮಿ ಲಿ ಕಾ ಶಿಂಗ್ ಅವರನ್ನು ಅಂಬಾನಿ ಹಿಂದಿಕ್ಕಿದ್ದಾರೆ. ರಿಲಯನ್ಸ್ ಜಿಯೋ ಕಂಪೆನಿ ಸ್ಥಾಪನೆ, ರಿಲಯನ್ಸ್ ಪೆಟ್ರೋಲಿಯಂ ಷೇರು ಮೊತ್ತ ಹೆಚ್ಚಳದೊಂದಿಗೆ ಅವರ ಆಸ್ತಿ ಮೊತ್ತದಲ್ಲಿ 80 ಸಾವಿರ ಕೋಟಿ ರೂ. ಹೆಚ್ಚಳವಾಗಿದೆ. ಏಷ್ಯಾ ದಲ್ಲಿ ಅತಿ ಶ್ರೀಮಂತ ಎಂಬ ಹೆಸರನ್ನು ಚೀನಾದ ಆಲಿಬಾಬಾ ಗ್ರೂಪ್ನ ಜಾಕ್ ಮಾ (2.79 ಲಕ್ಷ ಕೋಟಿ ರೂ. ಆಸ್ತಿ) ಪಡೆದಿದ್ದಾರೆ.