ಜನಿಸಿ ಕೇವಲ ಎರಡು ಗಂಟೆಯೊಳಗೆ ಆಧಾರ್ ಕಾರ್ಡ್, ಪಾಸ್ಪೋರ್ಟ್!
Team Udayavani, Dec 16, 2018, 6:35 AM IST
ಸೂರತ್: ಜನಿಸಿದ ಕೇವಲ 2 ಗಂಟೆಯೊಳಗೆ ಆಧಾರ್ ಗುರುತಿನ ಪತ್ರ, ಪಡಿತರ ಚೀಟಿ, ಪಾನ್ಪೋರ್ಟ್ ಸೇರಿದಂತೆ ಎಲ್ಲಾ ಅಧಿಕೃತ ದಾಖಲೆಗಳನ್ನು ಪಡೆದು ಗುಜರಾತ್ನ ಮಗು ರಮೈಯಾ ದಾಖಲೆ ನಿರ್ಮಿಸಿದ್ದಾಳೆ.
ರಮೈಯಾ ಡಿ.12ರಂದು ಸೂರತ್ನ ಆಸ್ಪತ್ರೆಯಲ್ಲಿ ಜನಿಸಿದಳು. ಮಗುವಿನ ತಂದೆ ಅಂಕಿತ್ ನಗರಾನಿ, ತಮ್ಮ ಮಗುವನ್ನು ಪ್ರಧಾನಿ ನರೇಂದ್ರ ಮೋದಿಯವರ ಡಿಜಿಟಲ್ ಇಂಡಿಯಾ ಉಪಕ್ರಮದ ಭಾಗಿಯನ್ನಾಗಿಸಬೇಕು ಎಂಬ ಆಕಾಂಕ್ಷೆ ಇರಿಸಿಕೊಂಡಿದ್ದರು. ಆಕೆ ಜನಿಸಿದ ಕೆಲವೇ ಗಂಟೆಗಳಲ್ಲಿ ಆಕೆಯ ಬಳಿ ಎಲ್ಲಾ ಅಧಿಕೃತ ದಾಖಲೆಗಳು ಇರಬೇಕು ಎಂದು ಅವರು ಬಯಸಿದ್ದರು. ಅದರಂತೆ, ಅವರ ಪುತ್ರಿ ರಮೈಯಾ ಈಗ ದೇಶದ ಎಲ್ಲ ಅಧಿಕೃತ ದಾಖಲೆಗಳನ್ನು ಪಡೆದ ಅತಿ ಕಿರಿಯ ಭಾರತೀಯಳು ಎಂಬ ಖ್ಯಾತಿಗೆ ಪಾತ್ರಳಾಗಿದ್ದಾಳೆ.
“ಮೊದಲಿಂದಲೇ ದಾಖಲೆಗಳನ್ನು ಪಡೆಯಲು ಪ್ರಯತ್ನಿಸುತ್ತಿದ್ದೆವು. ಸಂಬಂಧಪಟ್ಟ ಅಧಿಕಾರಿಗಳೆಲ್ಲರೂ ಸಹಕರಿಸಿದ ಕಾರಣ ಮಗು ಜನಿಸಿದ ಕೇವಲ 2 ಗಂಟೆಯೊಳಗೆ ಅವಳ ಎಲ್ಲಾ ಅಧಿಕೃತ ದಾಖಲೆಗಳೂ ದೊರೆತವು’ ಎಂದು ಅಂಕಿತ್ ಹೇಳಿದ್ದಾರೆ. ಇದಕ್ಕೂ ಮೊದಲು ಕಳೆದ ಏಪ್ರಿಲ್ನಲ್ಲಿ ಮಹಾರಾಷ್ಟ್ರದ ಜನಿಸಿದ್ದ ಸಾಚಿ ಜನಿಸಿದ 1.48 ಗಂಟೆಯೊಳಗೆ ಆಧಾರ್ ಕಾರ್ಡ್ ಪಡೆದು ದಾಖಲೆ ನಿರ್ಮಿಸಿದ್ದಳು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Patna: ಹೋಟೆಲ್ ನಲ್ಲಿ ಭಾರಿ ಅಗ್ನಿ ಅವಘಡ, 6 ಮಂದಿ ಸಜೀವ ದಹನ, ಹಲವರಿಗೆ ಗಾಯ
ನೀತಿ ಸಂಹಿತೆ ಉಲ್ಲಂಘನೆ: ಏಪ್ರಿಲ್ 29ರೊಳಗೆ ಉತ್ತರ ನೀಡಲು ಮೋದಿ, ರಾಹುಲ್ಗೆ ಸೂಚನೆ
Arunachal Pradesh: ಧಾರಾಕಾರ ಮಳೆ… ಭೂಕುಸಿತ, ಕೊಚ್ಚಿಹೋದ ಚೀನಾ ಗಡಿ ಸಂಪರ್ಕ ಹೆದ್ದಾರಿ
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು