ವರದಕ್ಷಿಣೆ ಕಿರುಕುಳ; ಸೊಸೆ ಹಾಗೂ 3 ತಿಂಗಳ ಹೆಣ್ಣು ಮಗು ಜೀವಂತ ದಹನ
Team Udayavani, Sep 19, 2019, 10:47 AM IST
ಉತ್ತರಪ್ರದೇಶ:ವರದಕ್ಷಿಣೆ ಕಿರುಕುಳದಲ್ಲಿ ಸೊಸೆ ಹಾಗೂ ಆಕೆಯ ಮೂರು ತಿಂಗಳ ಮಗುವನ್ನು ಅತ್ತೆ, ಮಾವ ಸೇರಿ ಜೀವಂತವಾಗಿ ಸುಟ್ಟು ಹಾಕಿರುವ ದಾರುಣ ಘಟನೆ ಉತ್ತರಪ್ರದೇಶದ ರಾಂಪುರ್ ನ ಹಾಜಿಪುರಾ ಮೊಹಲ್ಲಾದಲ್ಲಿ ನಡೆದಿದೆ.
ತನ್ನ ತಂಗಿ ನಾಲ್ಕು ವರ್ಷಗಳ ಹಿಂದೆ ವಿವಾಹವಾಗಿದ್ದು, ಆಕೆಗೆ ಮೂರು ವರ್ಷದ ಮಗ ಹಾಗೂ 3 ತಿಂಗಳ ಹೆಣ್ಣು ಮಗು ಇದೆ. ಏತನ್ಮಧ್ಯೆ ವರದಕ್ಷಿಣೆ ತರಲೇಬೇಕೆಂದು ಹಠ ಹಿಡಿದ ನಂತರ ಆಕೆ ತಂದೆ ಮನೆಗೆ ಬಂದಿದ್ದಳು. ಬುಧವಾರ ಮಾವ ಕರೆ ಮಾಡಿ ಮನೆಗೆ ಕರೆಯಿಸಿಕೊಂಡು ತಾಯಿ ಮತ್ತು ಮಗುವನ್ನು ಜೀವಂತವಾಗಿ ಸುಟ್ಟು ಹಾಕಿರುವುದಾಗಿ ಸಂತ್ರಸ್ತೆಯ ಸಹೋದರ ಮೊಹಮ್ಮದ್ ಜಾವೇದ್ ಆರೋಪಿಸಿದ್ದಾರೆ.
ಘಟನೆ ನಡೆದ ಮೇಲೆ ತಮಗೆ ಮನೆಯವರು ಯಾರು ತಮಗೆ ಮಾಹಿತಿ ನೀಡಿರಲಿಲ್ಲ. ತಾಯಿ ಮತ್ತು ಮಗುವನ್ನು ಸುಟ್ಟು ಹಾಕಿರುವ ವಿಷಯವನ್ನು ನೆರೆಮನೆಯವರು ತಿಳಿಸಿರುವುದಾಗಿ ಜಾವೇದ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಜಾವೇದ್ ಹೇಳಿಕೆಯನ್ನು ಆಧರಿಸಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿರುವುದಾಗಿ ಪೊಲೀಸ್ ವರಿಷ್ಠಾಧಿಕಾರಿ ಅಜಯ್ ಶರ್ಮಾ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
Delhi LG: ಕೇರಳ ಚರ್ಚುಗಳಿಗೆ ದಿಲ್ಲಿ ಗೌರ್ನರ್ ಭೇಟಿ; ಆಯೋಗಕ್ಕೆ “ಕೈ’ ದೂರು
Odisha: ಎನ್ಕೌಂಟರ್; ಇಬ್ಬರು ನಕ್ಸಲರ ಹತ್ಯೆ
Heart beats; ಭಾರತದ ಹೃದಯ ಪಾಕಿಸ್ಥಾನದ ಯುವತಿಗೆ ಹೊಸ ಜೀವನ ನೀಡಿತು..
IPL ಅಕ್ರಮ ಪ್ರಸಾರ ಕೇಸ್; ನಟಿ ತಮನ್ನಾಗೆ ಸಂಕಷ್ಟ: ಸೈಬರ್ ಸೆಲ್ ನೋಟಿಸ್
MUST WATCH
ಹೊಸ ಸೇರ್ಪಡೆ
Election Commission: ಮೋದಿ, ರಾಹುಲ್ ವಿರುದ್ಧ ದೂರು: ಚುನಾವಣಾ ಆಯೋಗ ನೋಟಿಸ್
IPL: ಎಲ್ಲೆ ಮೀರಿ ವಿಕೆಟ್ ಸಂಭ್ರಮಾಚರಣೆಡೆಲ್ಲಿ ವೇಗಿ ರಸಿಕ್ ಸಲಾಂಗೆ ಛೀಮಾರಿ
IPL: ಇಂಪ್ಯಾಕ್ಟ್ ಪ್ಲೇಯರ್ ನಿಯಮಕ್ಕೆ ಅಕ್ಷರ್ ಪಟೇಲ್ ಕೂಡ ವಿರೋಧ
Politics: ನಾನು ಮನಸ್ಸು ಮಾಡಿದರೆ ರೆಡ್ಡಿಯನ್ನು ಬೆತ್ತಲೆ ನಿಲ್ಲಿಸುತ್ತೇನೆ; ಸಚಿವ ತಂಗಡಗಿ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ