ಗಡಿಯಲ್ಲಿ ಮತ್ತೆ PAK ಅಟ್ಟಹಾಸ;ಶೆಲ್ ದಾಳಿಗೆ 9ತಿಂಗಳ ಮಗು ಸೇರಿ 3 ಬಲಿ
Team Udayavani, Mar 2, 2019, 4:42 AM IST
ಜಮ್ಮು-ಕಾಶ್ಮೀರ:ವಾಯುಸೇನೆ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಬಿಡುಗಡೆಗೊಳಿಸಿದ ಬೆನ್ನಲ್ಲೇ ಗಡಿಯಲ್ಲಿ ಪಾಕಿಸ್ತಾನ ಪುಂಡಾಟ ಮತ್ತೆ ಮುಂದುವರಿಸಿದೆ. ಶುಕ್ರವಾರ ರಾತ್ರಿ ಫೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ ಬಳಿ ಪಾಕಿಸ್ತಾನ ಮಿಲಿಟರಿ ನಡೆಸಿದ ಭಾರೀ ಶೆಲ್ ದಾಳಿಗೆ ಇಬ್ಬರು ಮಕ್ಕಳು ಹಾಗೂ ತಾಯಿ ಸೇರಿದಂತೆ ಮೂವರು ಸಾವನ್ನಪ್ಪಿರುವ ಘಟನೆ ವರದಿಯಾಗಿದೆ.
ಗಡಿಯಲ್ಲಿ ಪಾಕ್ ಸೇನೆ ನಾಗರಿಕರನ್ನು ಗುರಿಯಾಗಿರಿಸಿಕೊಂಡು ಭಾರೀ ಶೆಲ್ ದಾಳಿ ನಡೆಸುತ್ತಿದ್ದು, ಇದರ ಪರಿಣಾಮ ಕಾಶ್ಮೀರದ ಫೂಂಚ್ ಜಿಲ್ಲೆಯ ರುಬಾನಾ ಕೋಸಾರ್ (24ವರ್ಷ) ಹಾಗೂ ಆಕೆಯ 5ವರ್ಷದ ಪುತ್ರ ಫಾಝಾನ್ ಹಾಗೂ 9 ತಿಂಗಳ ಮಗು ಶಬನಮ್ ಸಾವನ್ನಪ್ಪಿರುವುದಾಗಿ ವರದಿ ವಿವರಿಸಿದೆ.
ಪಾಕಿಸ್ತಾನ ಪಡೆಗಳು ಗಡಿನಿಯಂತ್ರಣ ರೇಖೆಯಲ್ಲಿ ಅಟ್ಟಹಾಸ ಮುಂದುವರಿಸಿದ್ದು ಹೊವಿಟ್ಜರ್ 105 ಎಂಎಂ ಸೇರಿದಂತೆ ಭಾರೀ ಗನ್, ಮೋರ್ಟಾರ್ ಬಾಂಬ್ ಗಳ ಸುರಿಮಳೆಗೈಯುತ್ತಿರುವುದಾಗಿ ಸೇನಾ ಮೂಲಗಳು ತಿಳಿಸಿದ್ದು, ಭಾರತೀಯ ಸೇನಾಪಡೆ ಕೂಡಾ ಪ್ರತಿದಾಳಿ ನಡೆಸಿರುವುದಾಗಿ ತಿಳಿಸಿದೆ.
ಪಾಕಿಸ್ತಾನ ಪಡೆ ನಡೆಸಿದ ಭಾರೀ ಶೆಲ್ ದಾಳಿಯಿಂದಾಗಿ ಗಡಿನಿಯಂತ್ರಣ ರೇಖೆಯ ಸುತ್ತಮುತ್ತ ಇರುವ ಸಾಲೋಟ್ರಿ ಗ್ರಾಮದ ಹಲವು ಮನೆಗಳು ಜಖಂಗೊಂಡಿದೆ. ಶುಕ್ರವಾರ ಬೆಳಗ್ಗೆ ಪಾಕ್ ಪಡೆ ನಡೆಸಿದ್ದ ಶೆಲ್ ದಾಳಿಗೆ ಮಹಿಳೆಯೊಬ್ಬರು ಗಾಯಗೊಂಡಿದ್ದ ಘಟನೆ ಫೂಂಚ್ ನ ಮಾನ್ ಕೋಟೆ ಪ್ರದೇಶದಲ್ಲಿ ನಡೆದಿತ್ತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nagaland Poll: ಬೇಡಿಕೆ ಈಡೇರಿಸಿ- ಆರು ಜಿಲ್ಲೆಗಳಲ್ಲಿ ಒಂದೇ ಒಂದು ಮತದಾನ ನಡೆದಿಲ್ಲ!
Manipura: ಮತಗಟ್ಟೆ ಮೇಲೆ ಗುಂಡಿನ ದಾಳಿ… ದಿಕ್ಕಾ ಪಾಲಾಗಿ ಓಡಿದ ಮತದಾರರು
Lok Sabha 1 Phase: ನಿತಿನ್ ಗಡ್ಕರಿ ಟು ಕನಿಮೋಳಿ..ಮೊದಲ ಹಂತದ ಘಟಾನುಘಟಿ ಅಭ್ಯರ್ಥಿಗಳು…
Navy chief: ಭಾರತೀಯ ನೌಕಾಪಡೆಯ ನೂತನ ಮುಖ್ಯಸ್ಥರಾಗಿ ದಿನೇಶ್ ತ್ರಿಪಾಠಿ ನೇಮಕ
Stones Pelted: ಮತದಾನದ ವೇಳೆ ಕಲ್ಲು ತೂರಾಟ… ಬಿಜೆಪಿ ನಾಯಕನಿಗೆ ಗಾಯ