ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದು, ಶವವನ್ನು ತುಂಡರಿಸಿ ನಾಶ ಮಾಡಿದ ಪತ್ನಿ!


Team Udayavani, Sep 21, 2021, 10:14 AM IST

ಪ್ರಿಯಕರನ ಜೊತೆಸೇರಿ ಗಂಡನನ್ನು ಕೊಂದು, ಶವವನ್ನು ತುಂಡರಿಸಿ ಕೆಮಿಕಲ್ ನಿಂದ ನಾಶ ಮಾಡಿದ ಪತ್ನಿ

ಪಾಟ್ನಾ: ಮಹಿಳೆಯೊಬ್ಬಳು ತನ್ನ ಪ್ರಿಯಕರನ ಜೊತೆ ಸೇರಿ ಗಂಡನನ್ನು ಕೊಂದು ಆತನ ಶವವನ್ನು ರಾಸಾಯನಿಕ ಬಳಸಿ ವಿಲೇವಾರಿ ಮಾಡಲೆತ್ನಿಸಿದ ಘಟನೆ ಬಿಹಾರ ರಾಜ್ಯದಲ್ಲಿ ನಡೆದಿದೆ. ರಾಸಾಯನಿಕ ಸ್ಪೋಟವಾಗಿ ಘಟನೆ ಬೆಳಕಿಗೆ ಬಂದಿದೆ.

ಮುಜಾಫರ್ ಪುರ್ ನ ಸಿಕಂದರ್ ಪುರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ. 30 ವರ್ಷದ ರಾಕೇಶ್ ಎಂಬಾತನೇ ತನ್ನ ಪತ್ನಿ ರಾಧಾಳಿಂದ ಹತ್ಯೆಗೊಳಗಾದ ವ್ಯಕ್ತಿ. ರಾಕೇಶ್ ಪತ್ನಿ ರಾಧಾ, ಆಕೆಯ ಪ್ರಿಯಕರ ಸುಭಾಶ್, ರಾಧಾ ಸಹೋದರಿ ಕೃಷ್ಣಾ, ಮತ್ತು ಆಕೆಯ ಪತಿ ಆರೋಪಗಳು.

ಮೃತ ದೇಹವನ್ನು ಸುಭಾಷ್ ಹಲವಾರು ತುಂಡುಗಳಾಗಿ ಕತ್ತರಿಸಿದ್ದಾನೆ. ಸುಭಾಷ್ ಮತ್ತು ರಾಧಾ ಬಾಡಿಗೆ ಫ್ಲಾಟ್ ಒಳಗೆ ಶವವನ್ನು ವಾಸನೆ ಬಾರದಂತೆ ತಡೆಯಲು ರಾಸಾಯನಿಕವನ್ನು ಬಳಸಲು ಪ್ರಯತ್ನಿಸಿದ್ದಾರೆ. ಇದರಿಂದಾಗಿ ರಾಸಾಯನಿಕ ಸ್ಫೋಟಕ್ಕೆ ಕಾರಣವಾಗಿದೆ, ಇದು ಸ್ಥಳೀಯ ನಿವಾಸಿಗಳಿಗೆ ತಿಳಿದು ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ಪೊಲೀಸರು ಫ್ಲಾಟ್ ಗೆ ಬಂದು ನೋಡಿದಾಗ ಶವದ ತುಂಡುಗಳನ್ನು ಚದುರಿದ್ದವು. ನಂತರ ಪೊಲೀಸರು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದರು ಮತ್ತು ವಿಧಿವಿಜ್ಞಾನ ತಂಡವು ಈ ಬಗ್ಗೆ ತನಿಖೆ ಪ್ರಾರಂಭಿಸಿದೆ.

ಇದನ್ನೂ ಓದಿ:ಬಾಲ್ಯ ವಿವಾಹ: ಉಡುಪಿ ರಾಜ್ಯಮಟ್ಟದಲ್ಲಿ ಶೂನ್ಯ ಪ್ರಕರಣ ಹೊಂದಿರುವ ಏಕೈಕ ಜಿಲ್ಲೆ  

ಮೃತ ರಾಕೇಶ್ ಅನಧಿಕೃತ ಮದ್ಯ ಮಾರಾಟ ಮಾಡುತ್ತಿದ್ದ. ಹೀಗಾಗಿ ಆತನ ಮೇಲೆ ಪೊಲೀಸರ ಕಣ್ಣಿತ್ತು. ಹೀಗಾಗಿ ಅತ ಪತ್ನಿಯನ್ನು ಮನೆಯಲ್ಲಿಟ್ಟು ಬೇರೆ ಕಡೆ ರಹಸ್ಯವಾಗಿ ನೆಲೆಸಿದ್ದ. ಆತನ ಪಾರ್ಟ್ನರ್ ಸುಭಾಶ್, ರಾಧಾರರನ್ನು ನೋಡಿಕೊಳ್ಳುತ್ತಿದ್ದ. ಈ ವೇಳೆ ರಾಧಾ ಮತ್ತು ಸುಭಾಶ್ ನಡುವೆ ಪ್ರೀತಿ ಬೆಳೆದಿತ್ತು. ಇದಕ್ಕೆ ರಾಧಾ ಸಹೋದರಿ ಮತ್ತು ಆಕೆಯ ಗಂಡನ ಸಹಕಾರವೂ ದೊರೆದಿತ್ತು. ತಮ್ಮ ದಾರಿಗೆ ಗಂಡ ರಾಕೇಶ್ ಅಡ್ಡಗಾಲಾಗುತ್ತಾನೆ ಎಂದು ಆತನ ಹತ್ಯೆಗೆ ಸಂಚು ರೂಪಿಸಿದ್ದರು ಇವರು!

ತೀಜ್ ಹಬ್ಬದ ಸಂದರ್ಭದಲ್ಲಿ ಗಂಡನನ್ನು ಮನೆಗೆ ಕರೆದ ರಾಧಾ, ಅಂದೇ ಪ್ರಿಯಕರ ಸುಭಾಶ್ ಜೊತೆ ಸೇರಿ ಆತನ ಹತ್ಯೆ ಮಾಡಿದ್ದಳು. ನಂತರ ರಾಕೇಶ್ ಶವವನ್ನು ತುಂಡರಿಸಿ ಅದಕ್ಕೆ ಕೆಮಿಕಲ್ ಹಾಕಿ ನಾಶ ಮಾಡಲು ಯತ್ನಿಸಿದ್ದರು. ಈ ವೇಳೆ ಸ್ಪೋಟವಾಗಿ ವಿಚಾರ ಬಹಿರಂಗವಾಗಿದೆ.

ರಾಕೇಶ್ ಸಹೋದರ ದಿನೇಶ್ ಈ ಬಗ್ಗೆ ದೂರು ನೀಡಿದ್ದು, ರಾಧಾ, ಆಕೆಯ ಪ್ರೇಮಿ ಸುಭಾಷ್, ಸಹೋದರಿ ಕೃಷ್ಣ ಮತ್ತು ಕೃಷ್ಣ ಅವರ ಪತಿ ಸೇರಿ ಕೊಲೆ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ. ತನ್ನ ಸಹೋದರ ಪತ್ನಿ ರಾಧಾ ಸುಭಾಷ್ ಜೊತೆ ಅಕ್ರಮ ಸಂಬಂಧ ಹೊಂದಿದ್ದಳು ಎಂದು ದಿನೇಶ್ ಆರೋಪಿಸಿದ್ದಾರೆ.

ಟಾಪ್ ನ್ಯೂಸ್

police

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್ : ಪೋಲೀಸರ ಅಮಾನತು

bike insurance

ಬೈಕ್ 150 ಸಿಸಿಗಿಂತ ಹೆಚ್ಚಿನದ್ದಾಗಿದ್ದರೆ ಇನ್ಶುರೆನ್ಸ್‌  ಕ್ಲೈಮ್  ಆಗುವುದಿಲ್ಲವೇ..?

goa

ಗೋವಾ ವಿದೇಶಿ ಪ್ರವಾಸಿಗರಿಗೆ RTPCR ಕಡ್ಡಾಯ: ಖಾಸಗಿ ಸಂಸ್ಥೆಗೆ ಗುತ್ತಿಗೆ

21ananya

ಅನನ್ಯ-ಆರ್ಯನ್ ವಾಟ್ಸ್ಯಾಪ್ ಚಾಟ್: ಡ್ರಗ್ಸ್ ಅಲ್ಲಂತೆ ಸಿಗರೇಟ್ ಅಂತೆ!?

1-111

ಬಾಂಗ್ಲಾದಲ್ಲಿ ಹಿಂದೂಗಳ ಮೇಲಿನ ಹಿಂಸಾಚಾರ : ಪ್ರಮುಖ ಸೂತ್ರಧಾರನ ಬಂಧನ

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

2012 ಟಿ20 ವಿಶ್ವಕಪ್ ನಲ್ಲಿ ಅಫ್ಘಾನ್ ತಂಡಕ್ಕೆ ಚಿಯರ್ ಮಾಡಿದ್ದು ಮೂವರು ಮಾತ್ರ!

1-belur

ರಾಘವೇಂದ್ರ ಮತ್ತು ವಿಜಯೇಂದ್ರರ ಹಣವೆಲ್ಲವೂ ಷಡಕ್ಷರಿ ಬಳಿ : ಬೇಳೂರು ಬಾಂಬ್

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

bike insurance

ಬೈಕ್ 150 ಸಿಸಿಗಿಂತ ಹೆಚ್ಚಿನದ್ದಾಗಿದ್ದರೆ ಇನ್ಶುರೆನ್ಸ್‌  ಕ್ಲೈಮ್  ಆಗುವುದಿಲ್ಲವೇ..?

goa

ಗೋವಾ ವಿದೇಶಿ ಪ್ರವಾಸಿಗರಿಗೆ RTPCR ಕಡ್ಡಾಯ: ಖಾಸಗಿ ಸಂಸ್ಥೆಗೆ ಗುತ್ತಿಗೆ

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

ಟಿಎಂಸಿ ಸಂಸದೆ ಸುಶ್ಮಿತಾ ದೇವ್ ಮೇಲೆ ದಾಳಿ: ಬಿಜೆಪಿ ಕೈವಾಡದ ಆರೋಪ

kedhara

ಚಾರ್ ಧಾಮ್ ಯಾತ್ರೆ : 2 ಲಕ್ಷಕ್ಕೂ ಹೆಚ್ಚು ಯಾತ್ರಾರ್ಥಿಗಳ ಭೇಟಿ

mamata

ಫಾಲೆರೊ ಟಿಎಂಸಿ ರಾಷ್ಟ್ರೀಯ ಉಪಾಧ್ಯಕ್ಷ : ಅ.28ಕ್ಕೆ ಗೋವಾಕ್ಕೆ ಮಮತಾ ಬ್ಯಾನರ್ಜಿ

MUST WATCH

udayavani youtube

ನಮ್ಮ ದೇಶ ಕರ್ತವ್ಯ ಪಾಲಿಸಿದೆ : ಪ್ರಧಾನಿ ನರೇಂದ್ರ ಮೋದಿ

udayavani youtube

ಶೆಟ್ಟಿ ನೀನು ಹುಡುಗಿ ತರ ಮಾತಾಡ್ತೀಯ

udayavani youtube

POLYHOUSE ನಲ್ಲಿ ಸೌತೆಕಾಯಿ ತರಕಾರಿ ಕೃಷಿ; ಇಲ್ಲಿದೆ ಸಂಪೂರ್ಣ ಮಾಹಿತಿ…

udayavani youtube

ನೂರು ಕೋಟಿ ಡೋಸ್‌ ಲಸಿಕಾ ಗುರಿ ತಲುಪಿದ ಸಂಭ್ರಮ

udayavani youtube

Video Viral : ಜಾನಪದ ಶೈಲಿಯ ಹಾಡಿನ ಮೂಲಕ ಒಡ್ಡೋಲಗದ ಆಮಂತ್ರಣ

ಹೊಸ ಸೇರ್ಪಡೆ

araga jnanendra

ಮನುಷ್ಯರನ್ನಾಗಿಸುವಲ್ಲಿ ಪ್ರಸ್ತುತ ಶಿಕ್ಷಣ ವಿಫ‌ಲ: ಆರಗ ಜ್ಞಾನೇಂದ್ರ

ಪಕ್ಷ ಸಂಘಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕರ ವೈಫ‌ಲ್ಯ

ಪಕ್ಷ ಸಂಘಟನೆಯಲ್ಲಿ ಬಿಜೆಪಿ ಜಿಲ್ಲಾಧ್ಯಕರ ವೈಫ‌ಲ್ಯ

police

ಕಾನೂನು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ ಕೇಸ್ : ಪೋಲೀಸರ ಅಮಾನತು

by-election-24

ದೇಗಲೂರ ಉಪ ಕದನ; ಚವ್ಹಾಣ ಪ್ರಚಾರ

devadasi23

ಬಾಕಿ ಪಿಂಚಣಿ ಬಿಡುಗಡೆಗೆ ದೇವದಾಸಿಯರ ಒತ್ತಾಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.