ಸ್ನೇಹಿತನ ಮನೆಯಲ್ಲಿ ವಿವಾಹಿತೆಯ ಮೃತ ದೇಹ ಪತ್ತೆ, ಸ್ನೇಹಿತ ನಾಪತ್ತೆ
Team Udayavani, Aug 30, 2018, 12:22 PM IST
ಥಾಣೆ, ಮಹಾರಾಷ್ಟ್ರ : 29ರ ಹರೆಯದ ವಿವಾಹಿತ ಮಹಿಳೆ ಹರ್ಷದಾ ಸೋಮವಂಶಿ ಎಂಬಾಕೆಯ ಮೃತ ದೇಹ ಆಕೆಯ ಸ್ನೇಹಿತನ ಅಪಾರ್ಟ್ಮೆಂಟ್ನಲ್ಲಿ ಪತ್ತೆಯಾಗಿರುವುದಾಗಿ ಪೊಲೀಸರು ತಿಳಿಸಿದ್ದಾರೆ.
ಕ್ಯಾಟರಿಂಗ್ ಉದ್ಯಮದಲ್ಲಿ ತೊಡಗಿಕೊಂಡಿದ್ದ ಹರ್ಷದಾ ಅವರು ಮೊನ್ನೆ ಮಂಗಳವಾರದಿಂದ ನಾಪತ್ತೆಯಾಗಿದ್ದರು. ಆಕೆಯ ಮನೆಯವರು ಆ ಬಗ್ಗೆ ಡೊಂಬಿವಿಲಿಯ ಮನಪಾಡಾ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು.
ದೂರನ್ನು ಆಧರಿಸಿ ಶೋಧ ಕಾರ್ಯಾಚರಣೆ ನಡೆಸಿದ ಪೊಲೀಸರಿಗೆ, ಹರ್ಷದಾ ಅವರ ಮೃತ ದೇಹ ತಾವು ವಾಸವಾಗಿರುವ ಅಪಾರ್ಟ್ಮೆಂಟ್ನಲ್ಲೇ ಇರುವ ತನ್ನ ಪುರುಷ ಸ್ನೇಹಿತರೊಬ್ಬರ ಮನೆಯಲ್ಲಿ ಕಂಡು ಬಂದಿತು.
ನಿನ್ನೆ ಬುಧವಾರ ಸಂಜೆಯಿಂದ ಮೃತ ಹರ್ಷದಾ ಅವರ ಪುರುಷ ಸ್ನೇಹಿತ ನಾಪತ್ತೆಯಾಗಿದ್ದು ಆತನಿಗಾಗಿ ಪೊಲೀಸರೀಗ ಹುಡುಕಾಡುತ್ತಿದ್ದಾರೆ.
ಹರ್ಷದಾ ಅವರ ದೇಹದ ಮೇಲೆ ಯಾವುದೇ ಗಾಯದ ಗುರುತುಗಳು ಕಂಡು ಬಂದಿಲ್ಲ. ಆಕೆಯ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಕೇಸು ದಾಖಲಿಸಿ ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಹಳದಿ ಶಾಸ್ತ್ರದ ವೇಳೆ ವಿದ್ಯುತ್ ಸ್ಪರ್ಶ… ಆಸ್ಪತ್ರೆ ದಾರಿ ಮಧ್ಯೆ ಕೊನೆಯುಸಿರೆಳೆದ ವರ
ತಂಗಿ ಮದುವೆಗೆ ಟಿವಿ ಗಿಫ್ಟ್ ಕೊಟ್ಟದ್ದಕ್ಕೆ ಅಸಮಾಧಾನ: ಪತಿಯನ್ನು ಥಳಿಸಿ ಕೊಲ್ಲಿಸಿದ ಪತ್ನಿ
West Bengal; ಮಗಳನ್ನು ಕಂಡು ಕಣ್ಣೀರಿಟ್ಟ ಶೇಖ್ ಷಹಜಹಾನ್: ಬಿಜೆಪಿ ವ್ಯಂಗ್ಯ
Amit Shah: 2024ರ ಚುನಾವಣೆಯಲ್ಲಿ ಎನ್ ಡಿಎಗೆ 400ಕ್ಕೂ ಅಧಿಕ ಸ್ಥಾನ ಖಚಿತ: ಶಾ
Patanjali ತಪ್ಪು ಜಾಹೀರಾತು; ಕ್ಷಮೆಯಾಚಿಸಿದ ಬಾಬಾ ರಾಮ್ ದೇವ್,ಬಾಲಕೃಷ್ಣ