ಗಂಡನ ಕೊಂದು ರುಂಡ ಹಿಡಿದು ಠಾಣೆಗೆ ಬಂದ ಮಹಿಳೆ

Team Udayavani, May 30, 2019, 2:44 PM IST

ಲಖೀಮ್‌ಪುರ್‌(ಅಸ್ಸಾಂ): ಬೆಚ್ಚಿ ಬೀಳಿಸುವ ಘಟನೆಯೊಂದರಲ್ಲಿ ಮಹಿಳೆಯೊಬ್ಬಳು ಪತಿಯನ್ನು ಹತ್ಯೆಗೈದು ರುಂಡ ಸಮೇತ ಠಾಣೆಗೆ ಬಂದು ಶಣಾಗಿದ್ದಾಳೆ.

ಮಜ್‌ಗಾಂವ್‌ ಎಂಬಲ್ಲಿನ ಗುಣೇಶ್ವರಿ ಬರ್ಕಟಕಿ ಎಂಬ 48 ರ ಹರೆಯದ ಮಹಿಳೆ ಪತಿ ಮಧಿರಾಯ್‌ನ ಕಿರುಕುಳದಿಂದ ಬೇಸತ್ತು ಕೃತ್ಯ ಎಸಗಿದ್ದಾಳೆ.

ನಿತ್ಯವೂ ಕುಡಿದು ಬಂದು ಹಿಂಸೆ ನೀಡುತ್ತಿದ್ದ , ಮೂವರು ಹೆಣ್ಣು ಮಕ್ಕಳು ಮತ್ತು ಇಬ್ಬರು ಗಂಡು ಮಕ್ಕಳಿಗೂ ನಿರಂತರವಾಗಿ ಕಿರುಕುಳ ನೀಡುತ್ತಿದ್ದ.

ಕೊಡಲಿ ಹಿಡಿದು ನನ್ನನ್ನು ಕಡಿಯಲು ಬಂದಿದ್ದ, ನಾನು ಆತನನ್ನು ಕೊಲ್ಲುತ್ತಿರಲಿಲ್ಲ.ನಾನು ಸುಮ್ಮನುಳಿದಿದ್ದರೆ ನನ್ನನ್ನು ಕೊಲೆ ಮಾಡುತ್ತಿದ್ದ. ಮಕ್ಕಳ ಭವಿಷ್ಯದ ದೃಷ್ಟಿಯಿಂದ ನಾನು ಈ ಕೃತ್ಯ ಎಸಗಬೇಕಾಯಿತು ಎಂದು ಗುಣೇಶ್ವರಿ ಬರ್ಕಟಕಿ ಹೇಳಿದ್ದಾಳೆ.

ಗುಣೇಶ್ವರಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ