ಎಲ್ಲಿಂದ ಬೇಕಾದರೂ ಕೆಲಸ ಮಾಡಿ! ಸಿಬಂದಿಗೆ ಸೂಚನೆ ನೀಡಿದ ಎಸ್ಬಿಐ
Team Udayavani, Jun 22, 2020, 6:10 AM IST
ಹೊಸದಿಲ್ಲಿ: ಕೋವಿಡ್-19 ಲಾಕ್ಡೌನ್ ಜಾರಿಗೆ ಬಂದ ಬಳಿಕ ಮನೆಯಿಂದಲೇ ಕೆಲಸದ ಪದ್ಧತಿ ಪ್ರಚಲಿತಕ್ಕೆ ಬಂದಿದೆ. ಈಗ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಇದಕ್ಕಿಂತಲೂ ಕೊಂಚ ಭಿನ್ನವಾದ ಮಾದರಿಯನ್ನು ಆಯ್ಕೆ ಮಾಡಿಕೊಂಡಿದೆ.
ಸರಕಾರಿ ಸ್ವಾಮ್ಯದ ಭಾರತೀಯ ಸ್ಟೇಟ್ ಬ್ಯಾಂಕ್ ಸಿಬಂದಿ ಇನ್ನುಮುಂದೆ ಎಲ್ಲಿಂದ ಬೇಕಾದರೂ ಕರ್ತವ್ಯ ನಿರ್ವಹಿಸಬಹುದು. ಬ್ಯಾಂಕ್ನ 19 ವಿದೇಶಿ ಕಚೇರಿಗಳ ಸಿಬಂದಿ ಈಗಾಗಲೇ ತಾವಿರುವ ಸ್ಥಳದಿಂದಲೇ ಕಾರ್ಯ ನಿರ್ವಹಿಸುತ್ತಿದ್ದಾರೆ. ಆದರೆ ಈ ಹೊಸ ಪದ್ಧತಿ ಇದುವರೆಗೆ ದೇಶದೊಳಗಿನ ಎಸ್ಬಿಐ ಶಾಖೆಗಳಲ್ಲಿ ಜಾರಿಗೆ ಬಂದಿರಲಿಲ್ಲ.
ಎಸ್ಬಿಐ ಅಧ್ಯಕ್ಷರಿಂದ ಪತ್ರ ಇನ್ನು ದೇಶಾದ್ಯಂತ ಇರುವ ಎಸ್ಬಿಐಯ 2.5 ಲಕ್ಷ ಸಿಬಂದಿ ಮನೆಯಿಂದ ಕೆಲಸ ಮಾಡುವ ವಿಧಾನ ಬಿಟ್ಟು, ಎಲ್ಲಿಂದ ಬೇಕಾದರೂ ಕೆಲಸ ಮಾಡುವ ಹೊಸ ವಿಧಾನಕ್ಕೆ ಅಪ್ ಗ್ರೇಡ್ ಆಗಲಿದ್ದಾರೆ. ಈ ಕುರಿತು ಬ್ಯಾಂಕ್ ಅಧ್ಯಕ್ಷ ರಜನೀಶ್ ಕುಮಾರ್ ಷೇರುದಾರರಿಗೆ ಪತ್ರ ಬರೆದಿದ್ದಾರೆ. ವರ್ಕ್ ಫ್ರಂ ಎನಿವೇರ್ ಪದ್ಧತಿಯಿಂದ ಪ್ರಯಾಣ ಸಮಯ ಉಳಿತಾಯವಾಗುತ್ತದೆ. ಗುಣಮಟ್ಟದ ಸೇವೆಗೆ ಇದು ಪೂರಕ ಎಂದಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Loksabha Election; ದೇಶದಲ್ಲಿ ಹಂತ-1: ಮತ ಇಂದು
EVM ಯಾವ ಗುಂಡಿ ಒತ್ತಿದರೂ ಬಿಜೆಪಿಗೆ ಮತ: ಭಾರೀ ಚರ್ಚೆ
Cerelac ಶಿಶು ಆಹಾರದಲ್ಲಿ ಹೆಚ್ಚುವರಿ ಸಕ್ಕರೆ ಬೆರೆತಿದೆ: ಗಂಭೀರ ಆರೋಪ
MUST WATCH
ಹೊಸ ಸೇರ್ಪಡೆ
Gadaga ಹತ್ಯೆ ಪ್ರಕರಣ; ಆರೋಪಿಗಳ ಪತ್ತೆಗೆ ಪರಿಶೀಲನೆ ಮುಂದುವರೆದಿದೆ: ಗದಗ ಎಸ್ಪಿ
Vote: ದಾಖಲೆ ಸಂಖ್ಯೆಯಲ್ಲಿ ಮತ ಚಲಾಯಿಸಿ…: ಮತದಾರರಲ್ಲಿ ಮನವಿ ಮಾಡಿದ ಪ್ರಧಾನಿ ಮೋದಿ
Gadaga: ಒಂದೇ ಕುಟುಂಬದ ನಾಲ್ವರ ಭೀಕರ ಹತ್ಯೆ; ದುಷ್ಕರ್ಮಿಗಳು ಪರಾರಿ
Polls: ಇಂದು 102 ಕ್ಷೇತ್ರಗಳಲ್ಲಿ ಮೊದಲ ಹಂತದ ಮತದಾನ, ಮತದಾರರ ಕೈಯಲ್ಲಿ ಅಭ್ಯರ್ಥಿಗಳ ಭವಿಷ್ಯ
Hunsur: ನಾಗರಹೊಳೆಯಲ್ಲಿ ದುಷ್ಕರ್ಮಿಗಳ ಗುಂಡೇಟಿಗೆ ಕಾಡುಕೋಣ ಬಲಿ