ನೀರಿಗೆ ಬರ : ಮನೆಯಿಂದಲೇ ಕೆಲಸ ಮಾಡಿ!

ನೀರಿಗೆ ಬರ: "ವರ್ಕ್‌ ಫ್ರಂ ಹೋಂ' ಮೊರೆ ಹೋದ ಐಟಿ ಕ್ಷೇತ್ರ

Team Udayavani, Jun 14, 2019, 6:10 AM IST

ಚೆನ್ನೈ: ಕಳೆದ 200 ದಿನಗಳಿಂದ ಮಳೆ ಬೀಳದ ಹಿನ್ನೆಲೆಯಲ್ಲಿ ಚೆನ್ನೈ ನಗರ ನೀರಿನ ತೀವ್ರಕ್ಷಾಮ ಎದುರಿಸುತ್ತಿದ್ದು, ಅದರ ಬಿಸಿ ಈಗ ಅಲ್ಲಿನ ಐಟಿ ವಲಯಕ್ಕೂ ತಟ್ಟಿದೆ. ಹಳೆ ಮಹಾಬಲಿಪುರಂ ರಸ್ತೆಯ (ಒಎಂಆರ್‌) ಪ್ರಾಂತ್ಯದಲ್ಲಿರುವ ಸುಮಾರು 12 ಐಟಿ ಕಂಪೆನಿಗಳು ತಮ್ಮ 5,000 ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವಂತೆ (ವರ್ಕ್‌ ಫ್ರಂ ಹೋಂ) ಸೂಚಿಸಿವೆ. ಮುಂದಿನ ಮೂರು ತಿಂಗಳವರೆಗೆ ಚೆನ್ನೈನಲ್ಲಿ ಮಳೆಯಾಗುವ ಯಾವುದೇ ಲಕ್ಷಣಗಳು ಕಾಣದಿರುವುದು ಈ ಕಂಪೆನಿಗಳನ್ನು ಕಂಗೆಡಿಸಿದೆ.

ಒಎಂಆರ್‌ ಪ್ರಾಂತ್ಯದಲ್ಲಿ ಸುಮಾರು 600 ಐಟಿ ಕಂಪೆನಿಗಳು ಕಾರ್ಯ ನಿರ್ವಹಿಸುತ್ತಿವೆ. ಇಲ್ಲಿನ ಹಲವಾರು ಕಂಪೆನಿಗಳು ಬಳಸಿದ ನೀರನ್ನೇ ಶುದ್ಧೀಕರಿಸಿ ಮರುಬಳಕೆ ಮಾಡು ತ್ತಿದ್ದರೂ, ಅದು ಕಚೇರಿಯ ಅಗತ್ಯದ ಕೇವಲ ಶೇ. 55ರಷ್ಟನ್ನು ಮಾತ್ರ ಪೂರೈಸುತ್ತಿದೆ. ಹಾಗಾಗಿ, ಕೆಲ ಕಂಪೆನಿಗಳು ಉದ್ಯೋಗಿಗಳಿಗೆ ಕೆಲವು ನಿಬಂಧನೆಗಳನ್ನು ಹೇರತೊಡಗಿವೆ. ಉದಾಹರಣೆಗೆ, “ಫೋರ್ಡ್‌ ಬ್ಯುಸಿನೆಸ್‌ ಸರ್ವೀಸಸ್‌’ ಕಂಪೆನಿ, ಉದ್ಯೋಗಿಗಳು ತಮ್ಮ ಕುಡಿಯುವ ನೀರನ್ನು ಮನೆಯಿಂದಲೇ ತರುವಂತೆ ಆದೇಶಿಸಿದೆ.

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ಇನ್ನೂ ನಿಮ್ಮಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃ ಶಿದ್ದ , ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ 5 ದಿನಗಳಲ್ಲಿ ನೇರವೆರಿಸಿ ಕೋಡುತ್ತಾರೇ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗೂರುಜೀ
ಜಯನಗರ ಬೆಂಗಳೂರು, ಮೋ- 8884889444

ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ