ಬೆಂಗಳೂರು, ಮುಂಬಯಿಗೆ ಮರಳುವತ್ತ ಕಾರ್ಮಿಕರು
ಉತ್ತರ ಪ್ರದೇಶ, ಬಿಹಾರ, ಬಂಗಾಲದಲ್ಲಿ ರೈಲುಗಳು ಫುಲ್ | ರೈಲ್ವೇಮಂಡಳಿ ಅಧ್ಯಕ್ಷ ಯಾದವ್ ಮಾಹಿತಿ
Team Udayavani, Jun 29, 2020, 7:37 AM IST
ಉ.ಪ್ರ.ದ ಬಂದಾ ಜಿಲ್ಲೆಯ ನುಗಾವಾ ಗ್ರಾಮದಲ್ಲಿ ವಲಸೆ ಕಾರ್ಮಿಕರು ಶ್ರಮದಾನದ ಮೂಲಕ 40 ಕಿಮೀ ದೂರದಷ್ಟು ಕಾಲುವೆ ದುರಸ್ತಿ ಮಾಡಿದರು.
ಹೊಸದಿಲ್ಲಿ: ಕೋವಿಡ್ ಲಾಕ್‌ಡೌನ್ ಸಂದರ್ಭದಲ್ಲಿ ಕೈಗಳಿಗೆ ದುಡಿಮೆಯಿಲ್ಲದೆ, ಹೊಟ್ಟೆಗೆ ಅನ್ನವಿಲ್ಲದೆ ಬಳಲಿ, ಹುಟ್ಟೂರು ಸೇರಿಕೊಂಡಿದ್ದ ವಲಸಿಗರು ಈಗ ಮತ್ತೆ ದುಡಿಮೆ, ಅನ್ನ ನೀಡುವ ಮಹಾನಗರಗಳತ್ತ ಮರುವಲಸೆ ಆರಂಭಿಸಿದ್ದಾರೆ. ಅತಿ ಹೆಚ್ಚು ವಲಸೆ ಕಾರ್ಮಿಕರನ್ನು ಹೊಂದಿರುವ ಬಿಹಾರ, ಉತ್ತರಪ್ರದೇಶ ಮತ್ತು ಪಶ್ಚಿಮ ಬಂಗಾಳದಿಂದ ಬೆಂಗಳೂರು, ಮುಂಬೆ„, ಅಹಮದಾಬಾದ್ ನಗರಗಳತ್ತ ಹೋಗುವ ರೈಲುಗಳು ವಲಸೆ ಕಾರ್ಮಿಕರಿಂದ ತುಂಬಿ ತುಳುಕುತ್ತಿವೆ. ಮೂರೂ ರಾಜ್ಯಗಳ ವಿವಿಧ ನಗರಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ರೈಲುಗಳು ಕೆಲ ದಿನಗಳಿಂದ ಶೇ.100ರಷ್ಟು ಪ್ರಯಾಣಿಕರನ್ನು ಹೊತ್ತು ಸಾಗುತ್ತಿವೆ. ಜೂ.1ರಿಂದ ರೈಲ್ವೆ ಒಟ್ಟು 100 ಜೋಡಿ ಮೇಲ್/ಎಕ್ಸ್‌ಪ್ರೆಸ್ ರೈಲುಗಳು, 15 ಜೋಡಿ ಹವಾ ನಿಯಂತ್ರಿತ ರೈಲುಗಳನ್ನು ಕಾರ್ಯಾಚರಣೆಗೆ ಇಳಿಸಿದೆ. ಜೂ.1ರಿಂದ ರೈಲ್ವೇ ಇಲಾಖೆ ಸಾಮಾನ್ಯ ರೈಲುಗಳ ಕಾರ್ಯಾಚರಣೆ ಆರಂಭಿಸಿದ್ದು, ಕಾರ್ಮಿಕರು ದುಡಿಮೆ ನೀಡುವ ರಾಜ್ಯಗಳತ್ತ ಹೊರಟಿದ್ದಾರೆ ಎಂದು ರೈಲ್ವೇ ಮಂಡಳಿ ಅಧ್ಯಕ್ಷ ವಿ.ಕೆ.ಯಾದವ್ ತಿಳಿಸಿದ್ದಾರೆ.
ಶ್ರಮದಾನ: ನರೇಗಾ ಯೋಜನೆ ಅಡಿ ಕೆಲಸ ಸಿಗಲಿದೆ ಎಂದು ಕಾದು ಕಾದು ಬೇಸತ್ತ ಉ.ಪ್ರ.ದ ನವಗಾವ್ ಗ್ರಾಮಸ್ಥರು ಸುಮಾರು 40 ಕಿ.ಮೀ ಉದ್ದದ ನಾಲೆ ಸ್ವತ್ಛಗೊಳಿಸಿ ಕಡೆಯ ಭಾಗದಲ್ಲಿರುವ ಗದ್ದೆಗಳಿಗೂ ನೀರು ತಲುಪಿಸುವ ಕಾರ್ಯದಲ್ಲಿ ತೊಡಗಿದ್ದಾರೆ.
ಹಸಿವಿಗಿಂತ ವೈರಸ್ ಲೇಸು
“ಹೊಟ್ಟೆಗೆ ಹಿಟ್ಟಿಲ್ಲದೆ ಹಸಿದು ಬಳಲುವುದಕ್ಕಿಂತ ಕೊರೊನಾ ವೈರಸ್‌ಗೆ ತುತ್ತಾಗುವುದೇ ಲೇಸು’ ಇದು ಕೆಲಸ ಅರಸಿ ಮಹಾನಗರಗಳತ್ತ ಹೊರಟ ವಲಸಿಗರ ಮಾತು. ಲಾಕ್‌ಡೌನ್ ದಿನಗಳಿಗೆ ಹೋಲಿಸಿದರೆ ಸೋಂಕು ವ್ಯಾಪಕವಾಗಿ ಹರಡುತ್ತಿದೆ. ಭಯಭೀತರಾಗಿ ಊರಿಗೆ ಹೋದವರು, ಇಂಥ ಅಪಾಯದ ಸಂದರ್ಭದಲ್ಲೇಕೆ ಕೆಲಸ ಅರಸಿ ಹೊರಟಿದ್ದೀರ ಎಂದು ಕೇಳಿದರೆ, ಕಾರ್ಮಿಕರು “ಮನೆಯಲ್ಲಿ ಕುಳಿತರೆ ನಮ್ಮ, ಹೊಟ್ಟೆ ತುಂಬುವುದಾದರೂ ಹೇಗೆ? ಹಸಿವಿನಿಂದ ಸಾಯುವುದಕ್ಕಿಂತ ಕೊರೊನಾಗೆ ತುತ್ತಾಗಿ ಸಾಯುವುದು ಎಷ್ಟೋ ಮೇಲು ಎನ್ನುತ್ತಾರೆ.
30,00,000 ಉ.ಪ್ರದೇಶಕ್ಕೆ ಮರಳಿದ್ದ ವಲಸಿಗರು
28,00,000 ತವರಿಗೆ ಹೋಗಿದ್ದ ಬಿಹಾರ ಕಾರ್ಮಿಕರು
20,00,000 ಪ.ಬಂಗಾಲಕ್ಕೆ ಮರಳಿದ್ದ ಕಾರ್ಮಿಕರು
4,594 ಕಾರ್ಯಾಚರಣೆ ನಡೆಸಿರುವ ಶ್ರಮಿಕ ರೈಲುಗಳು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಕೇದಾರನಾಥದ ಕಸದ ರಾಶಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ ಪ್ರಧಾನಿ ಮೋದಿ
ವಿಜ್ಞಾನ ವಿಸ್ಮಯ: 40 ದಿನದ ಮಗುವಿನ ಹೊಟ್ಟೆಯೊಳಗೆ ಭ್ರೂಣ ಬೆಳವಣಿಗೆ !!
ಪಾಕ್ ಗಡಿಯಲ್ಲಿ ಬಾಂಬ್, ಗ್ರೆನೇಡ್ಗಳಿದ್ದ ಡ್ರೋನ್ ಹೊಡೆದುರುಳಿಸಿದ ಸೇನೆ
ಮೋಜಿಗಾಗಿ ವಿದ್ವಂಸಕ ಕೃತ್ಯ: ಎಸಿ ಲೋಕಲ್ ರೈಲುಗಳಿಗೆ ಕಲ್ಲು ತೂರಾಟ!
ಶಕ್ತಿಮಾನ್ ನಂತೆ ಸಾಹಸ ಪ್ರದರ್ಶನ ಮಾಡಲು ಹೋಗಿ ಜೈಲುಪಾಲಾದ ಮೂವರು ಯುವಕರು: ಇಲ್ಲಿದೆ ವಿಡಿಯೋ