11 ತಿಂಗಳ ಕನಿಷ್ಠಕ್ಕೆ ಸಗಟು ಹಣದುಬ್ಬರ ಪ್ರಮಾಣ
Team Udayavani, Sep 15, 2022, 5:55 AM IST
ಹೊಸದಿಲ್ಲಿ: ಆಗಸ್ಟ್ಗೆ ಸಂಬಂಧಿಸಿದಂತೆ ಸಗಟು ಮಾರಾಟ ಆಧಾರಿತ (ಡಬ್ಲ್ಯುಪಿಐ) ಹಣದುಬ್ಬರ ದರ ಶೇ.12.41 ಆಗಿದೆ. ಹನ್ನೊಂದು ತಿಂಗಳಿಗೆ ಹೋಲಿಕೆ ಮಾಡಿದರೆ ಇದು ಕನಿಷ್ಠದ್ದು ಎಂದು ವಿಶ್ಲೇಷಿಸಲಾಗುತ್ತಿದೆ.
ತೈಲೋತ್ಪನ್ನಗಳು ಮತ್ತು ಕೆಲವೊಂದು ವಸ್ತುಗಳ ಬೆಲೆಯಲ್ಲಿ ಇಳಿಕೆಯಾದ ಕಾರಣ ಇಳಿಕೆಯಾಗಿದೆ. ಸತತ ಮೂರು ತಿಂಗಳಿಂದ ಸಗಟು ಮಾರಾಟ ಆಧಾರಿತ ಹಣದುಬ್ಬರ ಇಳಿಕೆಯಾಗುತ್ತಾ ಬಂದಿದೆ. ಜುಲೈಯಲ್ಲಿ ಹಣದುಬ್ಬರ ಪ್ರಮಾಣ ಶೇ.13.93 ಆಗಿತ್ತು. ಕಳೆದ ವರ್ಷದ ಆಗಸ್ಟ್ನಲ್ಲಿ ಶೇ.11.64 ಆಗಿತ್ತು. ಆಹಾರ ವಸ್ತುಗಳ ಹಣದುಬ್ಬರ ಜುಲೈಯಲ್ಲಿ ಶೇ.10.77 ಇದ್ದದ್ದು ಆಗಸ್ಟ್ನಲ್ಲಿ ಶೇ.12.37 ಆಗಿದೆ.
ಅಲ್ಪ ಏರಿಕೆ: ಇದೇ ವೇಳೆ, ದೇಶದ ರಫ್ತು ಪ್ರಮಾಣ ಆಗಸ್ಟ್ನಲ್ಲಿ ಕೊಂಚ ಏರಿಕೆಯಾಗಿದೆ. ಶೇಕಡಾವಾರು ಲೆಕ್ಕಾಚಾರದಲ್ಲಿ ಹೇಳುವುದಿದ್ದರೆ ಶೇ.1.62ರಷ್ಟು ಹೆಚ್ಚಿದೆ. ಆಮದು ಪ್ರಮಾಣ 61. 9 ಬಿಲಿಯನ್ ಡಾಲರ್ಗೆ ಏರಿಕೆಯಾಗಿದೆ. ವ್ಯಾಪಾರದಲ್ಲಿನ ವಹಿವಾಟು ಕೊರತೆಯ ಪ್ರಮಾಣ 27.98 ಬಿಲಿಯನ್ ಅಮೆರಿಕನ್ ಡಾಲರ್ಗೆ ಏರಿಕೆಯಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ ಟಿಕೆಟ್ ಡೌಟ್
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Noida; ಪ್ರೇಯಸಿಯನ್ನು ಕೊಂದು ಆತ್ಮಹತ್ಯೆಗೆ ಯತ್ನಿಸಿದ ಪ್ರಿಯಕರ!
MUST WATCH
ಹೊಸ ಸೇರ್ಪಡೆ
Income Tax; ಕಾಂಗ್ರೆಸ್ ಗೆ ಐಟಿ ಶಾಕ್; 1700 ಕೋಟಿ ರೂ ನೋಟಿಸ್ ನೀಡಿದ ಆದಾಯ ತೆರಿಗೆ ಇಲಾಖೆ
ನಟ, ಕಾಂಗ್ರೆಸ್ ಮಾಜಿ ಸಂಸದ ಗೋವಿಂದ “ಶಿಂಧೆ ಸೇನೆ’ ಸೇರ್ಪಡೆ
ಕಂಗನಾ ವಿರುದ್ಧ ಪೋಸ್ಟ್: ಕೈ ನಾಯಕಿಗೆ ಟಿಕೆಟ್ ಡೌಟ್
Chandigarh: ಪುತ್ರನ ಬೆನ್ನಲ್ಲೇ ಪುತ್ರಿ ಜತೆಗೆ ಸಾವಿತ್ರಿ ಜಿಂದಾಲ್ ಬಿಜೆಪಿಗೆ
Vijayapura; ಬಂಜಾರರನ್ನು ಅವಮಾನಿಸಿಲ್ಲ, ವೋಟ್ ಬೇಡ ಎಂದಿಲ್ಲ: ಜಿಗಜಿಣಗಿ