ಮೂರು ತಿಂಗಳ ಗರಿಷ್ಠ ಮಟ್ಟಕ್ಕೇರಿದ ಹಣದುಬ್ಬರ : ಶೇ. 3.18ಕ್ಕೆ ನೆಗೆತ

Team Udayavani, Apr 15, 2019, 6:56 PM IST

ಹೊಸದಿಲ್ಲಿ : ಕಳೆದ ಮಾರ್ಚ್‌ ತಿಂಗಳಲ್ಲಿ ಸಗಟು ಬೆಲೆ ಹಣದುಬ್ಬರವು ಶೇ.3.18ಕ್ಕೆ ನೆಗೆಯುವ ಮೂಲಕ ಕಳೆದ ಮೂರು ತಿಂಗಳ ಗರಿಷ್ಠ ಏರಿಕೆಯನ್ನು ದಾಖಲಿಸಿತು. ಆಹಾರ ಸಾಮಗ್ರಿಗಳು, ತೈಲ ಮುಂತಾದ ಅಗತ್ಯ ವಸ್ತುಗಳ ಬೆಲೆಯಲ್ಲಾದ ಏರಿಕೆಯೇ ಇದಕ್ಕೆ ಕಾರಣವಾಗಿದೆ ಎಂದು ಇಂದು ಸೋಮವಾರ ಬಿಡುಗಡೆ ಮಾಡಲಾಗಿರುವ ಸರಕಾರಿ ಪ್ರಕಟನೆ ತಿಳಿಸಿದೆ.

ಕಳೆದ ವರ್ಷ ಮಾರ್ಚ್‌ ತಿಂಗಳಲ್ಲಿ ಹಣದುಬ್ಬರ ಶೇ.2.74ರ ಮಟ್ಟದಲ್ಲಿತ್ತು.

ಈ ವರ್ಷ ಮಾರ್ಚ್‌ ನಲ್ಲಿ ಅಗತ್ಯ ಆಹಾರ ವಸ್ತುಗಳ ಬೆಲೆ ಶೇ.5.68ರಷ್ಟು ಏರಿದೆ. ಫೆಬ್ರವರಿ ತಿಂಗಳಲ್ಲಿ ಇದು ಶೇ.4.28ರಷ್ಟು ಇತ್ತು. ತರಕಾರಿ ಬೆಲೆಗಳು ಕೂಡ ಏರಿರುವುದು ಹಣದುಬ್ಬರ 3 ತಿಂಗಳ ಗರಿಷ್ಠ ಮಟ್ಟಕ್ಕೆ ಏರಲು ಕಾರಣವಾಗಿದೆ ಎಂದು ಮೂಲಗಳು ಹೇಳಿವೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ