ಬ್ಲ್ಯಾಕ್ ಮೇಲ್ ಮಾಡಿದ ಸಲಿಂಗಕಾಮಿ ಸ್ನೇಹಿತನನ್ನು ಕೊಂದು ಚೀಲದಲ್ಲಿ ಕಟ್ಟಿ ಚರಂಡಿಗೆಸೆದರು!
Team Udayavani, Jul 3, 2022, 4:15 PM IST
ಹೊಸದಿಲ್ಲಿ: ಚರಂಡಿಯಲ್ಲಿ ಗೋಣಿಚೀಲದಲ್ಲಿ ಕಟ್ಟಿದಂತಹ ಸ್ಥಿತಿಯಲ್ಲಿ ಕಾನೂನು ವಿದ್ಯಾರ್ಥಿಯೊಬ್ಬನ ಮೃತದೇಹ ಪತ್ತೆಯಾದ ಘಟನೆಗೆ ಸಂಬಂಧಿಸಿದಂತೆ ದೆಹಲಿ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
22 ವರ್ಷದ ಕಾನೂನು ವಿದ್ಯಾರ್ಥಿ ಯಶ್ ರಸ್ತೋಗಿಯ ಶವ ಶನಿವಾರ ರಾತ್ರಿ ಸಾದಿಕ್ ನಗರದ ಚರಂಡಿಯಲ್ಲಿ ಪತ್ತೆಯಾಗಿತ್ತು. ಆತ ಕಳೆದ ಜೂನ್ 26ರಿಂದ ನಾಪತ್ತೆಯಾಗಿದ್ದ.
ಸ್ಥಳಕ್ಕೆ ಭೇಟಿ ನೀಡಿದ ಎಸ್.ಪಿ ವಿನೀತ್ ಭಟ್ನಗರ್ ಅವರು, ಘಟನೆಗೆ ಸಂಬಂಧಿಸಿದಂತೆ ನಾವು ಅಲಿಶಾನ್, ಸಲೀಂ ಮತ್ತು ಶಾವೆಜ್ ಎಂಬ ಆರೋಪಿಗಳನ್ನು ಬಂಧಿಸಿದ್ದೇವೆ. ಈ ಮೂವರು ಮೃತ ಯಶ್ ನೊಂದಿಗೆ ಅಸ್ವಾಭಾವಿಕ ಲೈಂಗಿಕ ಸಂಬಂಧ ಹೊಂದಿದ್ದರು ಎಂದಿದ್ದಾರೆ.
ಆರೋಪಿಗಳನ್ನು ಕೆಲವು ಆಕ್ಷೇಪಾರ್ಹ ಛಾಯಾಚಿತ್ರಗಳ ಮೂಲಕ ಬ್ಲ್ಯಾಕ್‌ಮೇಲ್ ಮಾಡುವ ಮೂಲಕ 40,000 ರೂ.ಗಳನ್ನು ವಸೂಲಿ ಮಾಡಿದ್ದ ಯಶ್, ನಂತರ ಹೆಚ್ಚಿನ ಹಣಕ್ಕೆ ಬೇಡಿಕೆಯಿಟ್ಟಿದ್ದ. ಈ ಕಾರಣದಿಂದ ಮೂವರು ಆತನನ್ನು ಕೊಂದು ಶವವನ್ನು ಚರಂಡಿಗೆ ಎಸೆದಿದ್ದರು ಎಂದು ಎಸ್ ಪಿ ತಿಳಿಸಿದ್ದಾರೆ.
ಸಂತ್ರಸ್ತೆಯ ಕುಟುಂಬದ ಪ್ರಕಾರ, ಜೂನ್ 26 ರಂದು ಸಂಜೆ 4 ಗಂಟೆ ಸುಮಾರಿಗೆ ಯಶ್ ತನ್ನ ಸ್ಕೂಟಿಯಲ್ಲಿ ಮನೆಯಿಂದ ಹೋದವ ನಂತರ ಹಿಂತಿರುಗಲಿಲ್ಲ. ಮನೆಯವರು ಪೊಲೀಸರಿಗೆ ಮಾಹಿತಿ ನೀಡಿದ್ದು, ನಂತರ ಶೋಧ ಕಾರ್ಯ ಆರಂಭವಾಗಿತ್ತು.
ಇದನ್ನೂ ಓದಿ:ಮಹಾರಾಷ್ಟ್ರದಲ್ಲಿ ಮುಸ್ಲಿಮರು ಗುರಿಯಾಗುತ್ತಿದ್ದಾರೆ : ಅಬು ಅಸಿಂ ಅಜ್ಮಿ
ಯಶ್ ಮೊಬೈಲ್ ಲೊಕೇಶನ್ ಪತ್ತೆ ಮಾಡಿದ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರು ಮೂವರನ್ನು ವಿಚಾರಣೆಗೆ ಒಳಪಡಿಸಿದಾಗ, ಯಶ್ ಈ ಹುಡುಗರ ವಿಡಿಯೋ ಮಾಡಿದ್ದು, ಸಲಿಂಗಕಾಮಿ ಆ್ಯಪ್ ನೊಂದಿಗೆ ಸಂಪರ್ಕ ಹೊಂದಿದ್ದು, ಹಣಕ್ಕಾಗಿ ನಿರಂತರವಾಗಿ ಬ್ಲ್ಯಾಕ್‌ಮೇಲ್ ಮಾಡುತ್ತಿದ್ದ ಎಂದು ತಿಳಿದು ಬಂದಿದೆ.
ಆರೋಪಿ ಶಾವೇಜ್, ಯಶ್ ನನ್ನು ಲಿಸಾಡಿ ಗೇಟ್ ಪ್ರದೇಶಕ್ಕೆ ಕರೆದಿದ್ದ, ಅಲ್ಲಿ ತೀವ್ರ ವಾಗ್ವಾದದ ನಂತರ ಅಲಿಶಾನ್ ಸಹಾಯದಿಂದ ಯಶ್ ನನ್ನು ಕೊಂದಿದ್ದಾನೆ. ಬಳಿಕ ಸಲೀಂ ಅವರ ಶವವನ್ನು ಗೋಣಿಚೀಲದಲ್ಲಿ ಸುತ್ತಿ ಚರಂಡಿಗೆ ಎಸೆದಿದ್ದಾನೆ ಎನ್ನಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ರಾಯಚೂರನ್ನು ತೆಲಂಗಾಣದೊಳಕ್ಕೆ ವಿಲೀನಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ: ಸಿಎಂ ಕೆಸಿಆರ್
ಭಾರತದಲ್ಲಿ 24ಗಂಟೆಯಲ್ಲಿ 12,608 ಕೋವಿಡ್ ಸೋಂಕು ಪ್ರಕರಣ ಪತ್ತೆ, 72 ಮಂದಿ ಸಾವು
ರೈತರಿಗೆ ಬಡ್ಡಿ ದರ ಇಳಿಕೆ ಸಿಹಿ: ಶೇ.1.5ರಷ್ಟು ಬಡ್ಡಿ ವಿನಾಯಿತಿ
ದಿಲ್ಲಿಗೆ ಮತ್ತೆ ಕೋವಿಡ್ ಏರಿಕೆ: ಸೋಂಕಿತರಲ್ಲಿ ಶೇ.60 ಮಂದಿ ಆಸ್ಪತ್ರೆಗೆ ದಾಖಲು
ಶೇ.72 ಸಚಿವರ ವಿರುದ್ಧ ಕ್ರಿಮಿನಲ್ ಕೇಸು; ಬಿಹಾರ ಸಂಪುಟದ ಬಗ್ಗೆ ಎಡಿಆರ್ ಅಧ್ಯಯನ ವರದಿ
MUST WATCH
ಹೊಸ ಸೇರ್ಪಡೆ
ಈಜಲು ಹೋಗಿ ನಿರುಪಾಲಾದ ಇಂಜಿನಿಯರ್ : ಎರಡನೇ ದಿನಕ್ಕೆ ಮುಂದುವರೆದ ಶೋಧ ಕಾರ್ಯ
ರಾಯಚೂರನ್ನು ತೆಲಂಗಾಣದೊಳಕ್ಕೆ ವಿಲೀನಗೊಳಿಸಲು ಜನರು ಒತ್ತಾಯಿಸುತ್ತಿದ್ದಾರೆ: ಸಿಎಂ ಕೆಸಿಆರ್
ಉಡುಪಿಯಲ್ಲಿ ನಾಳೆ ಕೃಷ್ಣಾಷ್ಟಮಿ, ನಾಡಿದ್ದು ವಿಟ್ಲ ಪಿಂಡಿ
ಕಾಂಗ್ರೆಸ್ ನಾಯಕರ ಹೇಳಿಕೆ ವಿರುದ್ಧ ಮುಸ್ಲಿಂ ಮುಖಂಡನ ಆಕ್ರೋಶ: ವಿಡಿಯೋ ವೈರಲ್
ಮಡಿಕೇರಿ; ದೇಶ ಕಾಯುವವನ ಹೆತ್ತವರಿಗೇ ರಕ್ಷಣೆ ಇಲ್ಲ!