ಕ್ಸಿಯೋಮಿಗೆ ಸೇರಿದ 5,551 ಕೋಟಿ ರೂ. ಮುಟ್ಟುಗೋಲಿಗೆ ಅನುಮತಿ
Team Udayavani, Sep 30, 2022, 8:45 PM IST
ನವದೆಹಲಿ: ಮೊಬೈಲ್ಪೋನ್ ತಯಾರಿಕಾ ಚೀನ ಕಂಪನಿ “ಕ್ಸಿಯೋಮಿ’ಗೆ ಸೇರಿದ 5,551 ಕೋಟಿ ರೂ. ಠೇವಣಿಯನ್ನು ಮುಟ್ಟುಗೋಲು ಹಾಕಿಕೊಳ್ಳಲು ಜಾರಿ ನಿರ್ದೇಶನಾಲಯ(ಇಡಿ)ಕ್ಕೆ ವಿದೇಶಿ ವಿನಿಮಯ ನಿರ್ವಹಣೆ ಕಾಯಿದೆ(ಫೆಮಾ) ಅಡಿ ಕಾರ್ಯನಿರ್ವಹಿಸುವ ಪ್ರಾಧಿಕಾರ ಅನುಮೋದನೆ ನೀಡಿದೆ.
ಭಾರತದಲ್ಲಿ ಇಷ್ಟು ದೊಡ್ಡ ಮೊತ್ತವನ್ನು ಮುಟ್ಟುಗೋಲು ಹಾಕುತ್ತಿರುವುದು ಇದೇ ಮೊದಲು. ಫೆಮಾ ಕಾಯಿದೆಯ ಸೆಕ್ಷನ್ 37ಎ ಅಡಿಯಲ್ಲಿ ಕ್ಸಿಯೋಮಿ ಇಂಡಿಯಾ ಪ್ರೈವೇಟ್ ಲಿಮಿಟೆಡ್ಗೆ ಸೇರಿದ ಠೇವಣಿ ಮುಟ್ಟುಗೋಲಿಗೆ ಅನುಮತಿ ಕೋರಿ ಫೆಮಾ ಪ್ರಾಧಿಕಾರಕ್ಕೆ ಇಡಿ ದಾಖಲೆ ಸಲ್ಲಿಸಿತ್ತು.
ಕಾನೂನು ಉಲ್ಲಂಘಿಸಿ ಅಕ್ರಮವಾಗಿ ಕ್ಸಿಯೋಮಿ ಇಂಡಿಯಾ ಕಂಪನಿ ವಿದೇಶಕ್ಕೆ 5,551.27 ಕೋಟಿ ರೂ.ಗಳನ್ನು ವರ್ಗಾವಣೆ ಮಾಡಿದೆ ಎಂದು ಇಡಿ ತಿಳಿಸಿದೆ.