ಗೂಗಲ್ ಹುಡುಕಾಟ: ರಾಕಿಂಗ್ ಸ್ಟಾರ್ ಯಶ್ ಗೆ 40ನೇ ಸ್ಥಾನ
Team Udayavani, Jun 30, 2022, 7:30 AM IST
ಹೊಸದಿಲ್ಲಿ: ಕಳೆದೊಂದು ವರ್ಷದಲ್ಲಿ ಗೂಗಲ್ ಸರ್ಚ್ ಎಂಜಿನ್ನಲ್ಲಿ ಏಷ್ಯಾ ಖಂಡದ ಯಾರ ಬಗ್ಗೆ ಗೂಗಲ್ ಬಳಕೆದಾರರು ಇಂಟರ್ನೆಟ್ನಲ್ಲಿ ಅತೀ ಹೆಚ್ಚಾಗಿ ಹುಡುಕಾಟ ನಡೆಸಿದ್ದಾರೆ ಎಂಬ ಕುತೂಹಲ ತಣಿಸುವ ಪಟ್ಟಿಯನ್ನು ಗೂಗಲ್ ಸಂಸ್ಥೆ ಬಿಡುಗಡೆ ಮಾಡಿದೆ.
ಜನಪ್ರಿಯ ಚಿತ್ರವಾದ ಕೆಜಿಎಫ್ ನ ನಾಯಕ ಯಶ್ ಈ ಪಟ್ಟಿಯಲ್ಲಿ 40ನೇ ಸ್ಥಾನದಲ್ಲಿದ್ದಾರೆ. ಈ ವಿಚಾರದಲ್ಲಿ ಅವರು, ತಮ್ಮ ಸಮಕಾಲೀನ ಕಲಾವಿದರಾದ ಮಹೇಶ್ ಬಾಬು (47ನೇ ಸ್ಥಾನ), ಅಜಯ್ ದೇವಗನ್ (52), ರಾಮ್ ಚರಣ್ (53), ಜೂ| ಎನ್ಟಿಆರ್ (58), ಧನುಷ್ (61), ಸೂರ್ಯ (63), ಪ್ರಭಾಸ್ (68) ಅವರನ್ನೂ ಹಿಂದಿಕ್ಕಿದ್ದಾರೆ! ಅಷ್ಟೇ ಅಲ್ಲ, ಖ್ಯಾತ ಕ್ರಿಕೆಟಿಗರಾದ ಸಚಿನ್ ತೆಂಡೂಲ್ಕರ್ (65), ಕನ್ನಡಿಗರಾದ ಕೆ.ಎಲ್. ರಾಹುಲ್ (67), ರಜನೀಕಾಂತ್ (77)ರನ್ನೂ ಪಟ್ಟಿಯಲ್ಲಿ ಹಿಂದಿಕ್ಕಿದ್ದಾರೆ.
ದಕ್ಷಿಣ ಕೊರಿಯಾದ ಪ್ರಖ್ಯಾತ ಕೆ ಪಾಪ್ ಗ್ರೂಪ್ ಬಿಟಿಎಸ್ ನ ಗಾಯಕ ‘ವಿ’ ಗೂಗಲ್ ಸರ್ಚ್ ನಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ವಿ ಎಂಬುದು ಈ ಗಾಯಕನ ಸ್ಟೇಜ್ ನೇಮ್.. ಕಿಮ್ ತೆ-ಹ್ಯುಂಗ್ ಎಂಬುದು ಅವರ ಮೂಲನಾಮ. ಅನಂತರದ ಸ್ಥಾನಗಳಲ್ಲಿ ಅದೇ ತಂಡದ ಜುಂಗ್ ಕುಕ್ ಸ್ಥಾನ ಪಡೆದಿದ್ದಾರೆ. ಇತ್ತೀಚೆಗೆ ಹತ್ಯೆಗೀಡಾದ ಪಂಜಾಬ್ ಗಾಯಕ ಸಿಧು ಮೂಸೆವಾಲಾ, ಜಿಮಿನ್ (ದ. ಕೊರಿಯಾ ಹಾಡುಗಾರ), ಲತಾ ಮಂಗೇಶ್ಕರ್, ಲೀಸಾ (ಥೈಲೆಂಡ್ ಹಾಡುಗಾರ್ತಿ), ಕತ್ರಿನಾ ಕೈಫ್, ಆಲಿಯಾ ಭಟ್, ಪ್ರಿಯಾಂಕಾ ಚೋಪ್ರಾ, ವಿರಾಟ್ ಕೊಹ್ಲಿ ಇದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ
Ramakrishna Mission: ರಾಮಕೃಷ್ಣ ಮಠ, ಮಿಷನ್ನ ಅಧ್ಯಕ್ಷರಾಗಿ ಕನ್ನಡಿಗ ಸ್ವಾಮೀಜಿ ಆಯ್ಕೆ
Sam Pitroda: ಪಿತ್ರೋಡಾ ಹೇಳಿಕೆ, ನಮ್ಮ ಅಭಿಪ್ರಾಯ ಅಲ್ಲ: ಕಾಂಗ್ರೆಸ್
Vote: ಉದಾಸೀನ ಮಾಡದಿರಿ, ತಪ್ಪದೇ ಮತ ಹಾಕಿ…
MUST WATCH
ಹೊಸ ಸೇರ್ಪಡೆ
Modi ಕಲ್ಪನೆಯ ವಿಕಸಿತ ಭಾರತಕ್ಕಾಗಿ ಕೋಟ ಅವರನ್ನು ಗೆಲ್ಲಿಸೋಣ: ಅಣ್ಣಾ ಮಲೈ
Award: ಅಮಿತಾಬ್ ಬಚ್ಚನ್, ಎಆರ್ ರೆಹಮಾನ್ ಗೆ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಗೌರವ
LS Polls: ಹಿಂದೂ ಸಂಸ್ಕೃತಿ, ಪರಂಪರೆ ಉಳಿಸಲು ಬಿಜೆಪಿಯೇ ಶಕ್ತಿ: ಹರಿಕೃಷ್ಣ ಬಂಟ್ವಾಳ
33 ವರ್ಷಗಳಲ್ಲಿ ದ.ಕ. ಜಿಲ್ಲೆಗೆ ಬಿಜೆಪಿ ಸಂಸದರ ಕೊಡುಗೆ ಏನು? ಸಚಿವ ದಿನೇಶ್ ಗುಂಡೂರಾವ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ