ಅನಿಲ್ ಅಂಬಾನಿ ಮಾಲಕತ್ವದ ಕೇಂದ್ರ ಕಚೇರಿಯನ್ನು ವಶಕ್ಕೆ ಪಡೆದ ಯೆಸ್ ಬ್ಯಾಂಕ್
Team Udayavani, Jul 30, 2020, 12:14 PM IST
ಮುಂಬೈ: ಸಾಲ ಹಿಂದುರುಗಿಸದ ಕಾರಣದಿಂದ ಅನಿಲ್ ಅಂಬಾನಿ ಅವರ ಮುಂಬೈಯ ಸಾಂತಕ್ರೂಜ್ ನಲ್ಲಿರುವ ಕೇಂದ್ರ ಕಚೇರಿಯನ್ನು ಯೆಸ್ ಬ್ಯಾಂಕ್ ವಶಪಡಿಸಿಕೊಂಡಿದೆ.
ಯೆಸ್ ಬ್ಯಾಂಕಿನಿಂದ ಅನಿಲ್ ಅಂಬಾನಿ ಗ್ರೂಪ್ 2,892 ಕೋಟಿ ರೂ. ಸಾಲ ಪಡೆದಿತ್ತು. ಆದರೆ ಸಾಲ ಹಿಂದುರುಗಿಸದ ಕಾರಣ ಅನಿಲ್ ಅಂಬಾನಿ ಗ್ರೂಪ್ ನ ಕೇಂದ್ರ ಕಚೇರಿ ಮತ್ತು ಮುಂಬೈನ ಎರಡು ಫ್ಲ್ಯಾಟ್ ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಯೆಸ್ ಬ್ಯಾಂಕ್ ಪ್ರಕಟಣೆಯಲ್ಲಿ ತಿಳಿಸಿದೆ.
ಅನಿಲ್ ಅಂಬಾನಿ ಗ್ರೂಪ್ ನ ಬಹುತೇಕ ಕಂಪನಿಗಳು ಈಗಾಗಲೇ ಸಂತಕ್ರೂಜ್ ಕಚೇರಿಯಿಂದ ರಿಲಯನ್ಸ್ ಸೆಂಟರ್ ಗೆ ಸ್ಥಳಾಂತವಾಗಿದೆ. ಅನಿಲ್ ಅಂಬಾನಿ ಈಗಾಗಲೇ ಭಾರಿ ಸಾಲದಲ್ಲಿದ್ದು, ಬ್ಯಾಂಕ್ ನೋಟೀಸ್ ಗಳಿಂದಲೇ ಇತ್ತೀಚಿನ ದಿನಗಳಲ್ಲಿ ಸುದ್ದಿ ಮಾಡುತ್ತಿದೆ.