ಮೈಸೂರಿನಲ್ಲಿ ಯೋಗ ದಿನ?
Team Udayavani, Jun 2, 2019, 6:00 AM IST
ಹೊಸದಿಲ್ಲಿ: ಅಂತಾರಾಷ್ಟ್ರೀಯ ಯೋಗ ದಿನಾಚರಣೆಯ ಅಂಗವಾಗಿ ಜೂನ್ 21ರಂದು
ಮುಂಜಾನೆ ಆಯೋಜಿಸಲಾಗುವ ರಾಷ್ಟ್ರಮಟ್ಟದ ಯೋಗ ಶಿಬಿರಕ್ಕಾಗಿ ಐದು ನಗರಗಳನ್ನು ಕೇಂದ್ರ ಸರಕಾರ ಆಯ್ಕೆ ಮಾಡಿದ್ದು, ಮೈಸೂರು ಸೇರಿದೆ. ಉಳಿದಂತೆ, ದಿಲ್ಲಿ, ಶಿಮ್ಲಾ, ಅಹ್ಮದಾಬಾದ್ ಮತ್ತು ರಾಂಚಿಯಲ್ಲಿ ಆಯೋಜಿಸುವ ಕುರಿತು ಪಿಎಂಒಗೆ ಆಯುಷ್ ಸಚಿವಾಲಯವು ಶಿಫಾರಸು ಮಾಡಿದೆ. ಈ 5 ನಗರಗಳ ಪೈಕಿ ಒಂದರಲ್ಲಿ ಜೂ. 21ರಂದು ಪ್ರಮುಖ ಕಾರ್ಯಕ್ರಮ ನಡೆಯಲಿದೆ. ಪ್ರಧಾನಿ ಕಾರ್ಯಾಲಯವೇ ಈ ಪೈಕಿ ಒಂದು ನಗರವನ್ನು ಅಂತಿಮಗೊಳಿಸಲಿದೆ.
ಮೋದಿ- 2 ಸರಕಾರ ರಚನೆಯಾದ ಅನಂತರದ ಮೊದಲ ರಾಷ್ಟ್ರೀಯ ಕಾರ್ಯಕ್ರಮ ಇದು. ಕಳೆದ ವರ್ಷವೂ 5 ನಗರಗಳ ಪಟ್ಟಿಯಲ್ಲಿ ಮೈಸೂರು ಸ್ಥಾನ ಪಡೆದಿತ್ತು. ಆದರೆ ಅಂತಿಮವಾಗಿ ಕಾರ್ಯಕ್ರಮ ಡೆಹ್ರಾಡೂನ್ನಲ್ಲಿ ನಡೆದಿತ್ತು.