ದೀಪಾವಳಿಯ ಗಿನ್ನೆಸ್ ದಾಖಲೆಗೆ ಉ.ಪ್ರ. ಸಿದ್ಧತೆ
Team Udayavani, Oct 17, 2017, 6:30 AM IST
ಲಕ್ನೋ: ಅಯೋಧ್ಯೆಯಲ್ಲಿ ಈ ಬಾರಿ ದೀಪಾವಳಿಯನ್ನು ವಿಜೃಂಭಣೆಯಿಂದ ಆಚರಿಸಲು ನಿರ್ಧರಿಸಲಾಗಿದ್ದು, ಈ ಹಿನ್ನೆಲೆಯಲ್ಲಿ ಅಯೋಧ್ಯೆ ಬಳಿಯ ಸರಯೂ ನದಿಯಲ್ಲಿ 2 ಲಕ್ಷ ಹಣತೆ ಬೆಳಗಿಸಿ ಗಿನ್ನೆಸ್ ದಾಖಲೆ ನಿರ್ಮಿಸಲು ತೀರ್ಮಾನಿಸಲಾಗಿದೆ. ಇಷ್ಟು ಪ್ರಮಾಣದ ಹಣತೆ ತಯಾರಿಕೆಯ ಜವಾಬ್ದಾರಿಯನ್ನು “ಕುಂಬಾರರ ಗ್ರಾಮ’ವಾದ ಜೈಸಿಂಗ್ಪುರ್ ಕುಮ್ಹಾರಿಯಾಗೆ ವಹಿಸ ಲಾಗಿದೆ. ಅತಿ ಹೆಚ್ಚು ಹಣತೆ ಬೆಳಗಿದ ಗಿನ್ನೆಸ್ ದಾಖಲೆ, ಜೈಲುಪಾಲಾಗಿರುವ ರಾಮ್ರಹೀಂ ಬಾಬಾನ ಡೇರಾ ಸಚ್ಚಾ ಸೌದಾ ಹೆಸರಿನಲ್ಲಿದೆ. ಅದನ್ನು ಮುರಿಯಲು ಉತ್ತರಪ್ರದೇಶ ಸಜ್ಜಾಗಿದೆ.