ತಾಕತ್ತಿದ್ದರೆ ನನ್ನನ್ನು ಅಪ್ಪಿ :ರಾಹುಲ್‌ಗೆ ಸಿಎಂ ಯೋಗಿ ಸವಾಲು 

Team Udayavani, Jul 25, 2018, 11:44 AM IST

ಲಕ್ನೋ: “ಧೈರ್ಯವಿದ್ದರೆ ರಾಹುಲ್‌ ಗಾಂಧಿ ನನ್ನನ್ನು ಆಲಿಂಗಿಸಲು ಯತ್ನಿಸಲಿ.’ ಹೀಗೆಂದು ಸವಾಲು ಹಾಕಿರು ವುದು ಉತ್ತರಪ್ರದೇಶ ಸಿಎಂ ಯೋಗಿ ಆದಿತ್ಯನಾಥ್‌. 

ಲೋಕಸಭೆಯಲ್ಲಿ ಪ್ರಧಾನಿ ಮೋದಿ ಅವರನ್ನು ಕಾಂಗ್ರೆಸ್‌ ಅಧ್ಯಕ್ಷ ರಾಹುಲ್‌ ಗಾಂಧಿ ಆಲಿಂಗಿಸಿದ್ದ ವಿಚಾರಕ್ಕೆ ಪ್ರತಿಕ್ರಿಯಿ ಸಿರುವ ಯೋಗಿ, ಅದೊಂದು ರಾಜಕೀಯ ನಾಟಕವಾ ಗಿದ್ದು, ರಾಹುಲ್‌ ವರ್ತನೆಯನ್ನು ನಾನು ಒಪ್ಪುವುದಿಲ್ಲ ಎಂದಿದ್ದಾರೆ. 

ಅಲ್ಲದೆ, ತಾಕತ್ತಿದ್ದರೆ ರಾಹುಲ್‌ ನನ್ನನ್ನು ಅಪ್ಪಿಕೊಳ್ಳಲಿ. ನನ್ನನ್ನು ಆಲಿಂಗಿಸಿಕೊಳ್ಳುವ ಮುನ್ನ ಅವರು 10 ಬಾರಿ ಯೋಚಿಸ ಬೇಕಾಗುತ್ತದೆ ಎಂದೂ ಹೇಳಿದ್ದಾರೆ. 


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ