ಯಂಗ್ ಇಂಡಿಯನ್: ಕಾಂಗ್ರೆಸ್ಗೆ ಸೋಲು
Team Udayavani, Nov 17, 2019, 5:37 AM IST
ಹೊಸದಿಲ್ಲಿ: ಕಾಂಗ್ರೆಸ್ ನಾಯಕರಾದ ಸೋನಿಯಾ ಗಾಂಧಿ, ರಾಹುಲ್ ಗಾಂಧಿ, ಆಸ್ಕರ್ ಫರ್ನಾಂಡಿಸ್ ಹಾಗೂ ಇನ್ನಿತರರು ಷೇರುದಾರರಾಗಿರುವ ಯಂಗ್ ಇಂಡಿಯನ್ ಟ್ರಸ್ಟ್ಗೆ ವಿಧಿಸಲಾಗಿರುವ 145 ಕೋಟಿ ರೂ.ಗಳ ಆದಾಯ ತೆರಿಗೆ ಆದೇಶವನ್ನು “ಆದಾಯ ತೆರಿಗೆ ಮೇಲ್ಮನವಿ ನ್ಯಾಯಾಧಿಕರಣ’ (ಐಟಿಎಟಿ) ಎತ್ತಿ ಹಿಡಿದಿದೆ.
2011-12ನೇ ವರ್ಷದ ತೆರಿಗೆ ಪಾವತಿ ಸುವಂತೆ ಐಟಿ ಇಲಾಖೆಯ ಆದೇಶವನ್ನು ಮೊದಲು ರದ್ದು ಪಡಿಸಲಾಗಿತ್ತು. ಆದರೆ, ತೆರಿಗೆ ವಿನಾಯ್ತಿ ಆಯುಕ್ತರು ಆದೇಶವನ್ನು ಮರು ಜಾರಿಗೊಳಿಸಿದ್ದರು. ಇದರ ವಿರುದ್ಧ ಕಾಂಗ್ರೆಸ್, ಐಟಿಎಟಿ ಮೊರೆ ಹೋಗಿತ್ತು.
ತೀರ್ಪಿನ ಬಗ್ಗೆ ಪ್ರತಿಕ್ರಿಯಿಸಿರುವ ಕಾಂಗ್ರೆಸ್, ಪ್ರಧಾನಿ ಮೋದಿ ಏನೇ ಕಸರತ್ತು ಮಾಡಿದರೂ, ನಿಜವಾದ ಸತ್ಯವನ್ನು ತಿರುಚಲು ಸಾಧ್ಯವಿಲ್ಲ ಎಂದಿದೆ. ಕಾಂಗ್ರೆಸ್ಗೆ ತಿರುಗೇಟು ನೀಡಿರುವ ಬಿಜೆಪಿ ನಾಯಕ, ಕೇಂದ್ರ ಸಚಿವ ರವಿಶಂಕರ್ ಪ್ರಸಾದ್, “”ಯಂಗ್ ಇಂಡಿಯನ್ ಟ್ರಸ್ಟ್ನ ಹಗರಣ ಕುಟುಂಬ ಅಭಿವೃದ್ಧಿಯ ಒಂದು ಸಿದ್ಧರೂಪ” ಎಂದು ಟೀಕಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Delhi: ಬ್ಯಾಂಕ್ ಮ್ಯಾನೇಜರ್ ಅಪಹರಣ…ಮಾಜಿ ಬಾಡಿಗೆದಾರರನಿಂದ ಸಂಚು!
ಹೆದ್ದಾರಿ ಬದಿ ನಿಂತಿದ್ದ ಟ್ರಕ್ ಗೆ ಕಾರು ಡಿಕ್ಕಿ… ಮಗು ಸೇರಿ 6 ಮಂದಿ ಸ್ಥಳದಲ್ಲೇ ಮೃತ್ಯು
Usman Ghani: ಮೋದಿ ಹೇಳಿಕೆ ಟೀಕೆ ಮಾಡಿದ ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾ ಅಧ್ಯಕ್ಷ ಉಚ್ಛಾಟನೆ
ಪ್ರತಿಷ್ಠಿತ ಲತಾ ದೀನನಾಥ್ ಮಂಗೇಶ್ಕರ್ ಪ್ರಶಸ್ತಿ ಸ್ವೀಕರಿಸಿದ ಬಾಲಿವುಡ್ ನಟ ಅಮಿತಾಬ್ ಬಚ್ಚನ್
Patna: ಪಾಟ್ನಾದಲ್ಲಿ ನಿತೀಶ್ ಕುಮಾರ್ ಪಕ್ಷದ ನಾಯಕನ ಗುಂಡಿಕ್ಕಿ ಹತ್ಯೆ… ಆರೋಪಿಗಳು ಪರಾರಿ