ಉಗ್ರ ಝಾಕೀರ್‌ ಮೂಸಾ ಹತ್ಯೆ ; ಕಾಶ್ಮೀರದಲ್ಲಿ ಮೊಬೈಲ್‌ ಇಂಟರ್ನೆಟ್‌ ಬಂದ್‌

ಹತ್ಯೆ ಖಂಡಿಸಿ ಹಲವೆಡೆ ಪ್ರತಿಭಟನೆ, ಕರ್ಫ್ಯೂ

Team Udayavani, May 24, 2019, 11:59 AM IST

ಶ್ರೀನಗರ : ಅನ್ಸರ್ ಘಝ್ವಾತ್ ಉಲ್ ಹಿಂದ್ ಉಗ್ರ ಸಂಘಟನೆಯ ಮುಖಂಡ ಝಾಕೀರ್‌ ಮೂಸಾನನ್ನು ಗುರುವಾರ ರಾತ್ರಿ ಭದ್ರತಾ ಪಡೆಗಳು ಕಾರ್ಯಾಚರಣೆ ನಡೆಸಿ ಹತ್ಯೆಗೈದಿವೆ. ಘಟನೆ ಬಳಿಕ ಕಾಶ್ಮೀರದಲ್ಲಿ ಮೊಬೈಲ್‌ ಇಂಟರ್ನೆಟ್‌ ಸೇವೆಯನ್ನು ತಾತ್ಕಾಲಿಕವಾಗಿ ಬಂದ್‌ ಮಾಡಲಾಗಿದೆ.

ಹಿಂಸಾಚಾರ ನಡೆಯುವ ಸಾಧ್ಯತೆಗಳಿರುವ ಹಿನ್ನಲೆಯಲ್ಲಿ ಶಾಲಾ , ಕಾಲೇಜುಗಳಿಗೂ ರಜೆ ಸಾರಲಾಗಿದೆ.

ದಕ್ಷಿಣ ಕಾಶ್ಮೀರದ ಪುಲ್ವಾ ಮಾದ ತ್ರಾಲ್‌ನಲ್ಲಿ ಕಾರ್ಯಾಚರಣೆ ನಡೆಸಿದ ಸೇನಾ ಪಡೆಗಳು ಮೂಸಾನನ್ನು ಹತ್ಯೆಗೈದಿವೆ.

ಮೂಸಾ ಹತ್ಯೆಯ ಬಳಿಕ ಕಾಶ್ಮೀರದ ಹಲವು ಕಡೆಗಳಲ್ಲಿ ಪ್ರತಿಭಟನೆಗಳನ್ನು ನಡೆಸಿ ಮೂಸಾ ಪರ ಘೋಷಣೆಗಳನ್ನು ಕೂಗಲಾಗಿದೆ. ಕೆಲವೆಡೆ ಕರ್ಫ್ಯೂ ಹೇರಲಾಗಿದೆ.


ಈ ವಿಭಾಗದಿಂದ ಇನ್ನಷ್ಟು

ಹೊಸ ಸೇರ್ಪಡೆ