Udayavni Special

ಮುಂಬಯಿಯಲ್ಲಿ ಶೇ. 49 ರಷ್ಟು ಮಂದಿ ಚೇತರಿಕೆ


Team Udayavani, Aug 4, 2020, 5:39 PM IST

ಮುಂಬಯಿಯಲ್ಲಿ ಶೇ. 49 ರಷ್ಟು  ಮಂದಿ ಚೇತರಿಕೆ

ಸಾಂದರ್ಭಿಕ ಚಿತ್ರ

ಮುಂಬಯಿ, ಆ. 3: ಕೋವಿಡ್‌-19 ರಾಜಧಾನಿಯಾಗಿ ಮಾರ್ಪಟ್ಟಿರುವ ಮುಂಬಯಿಯಲ್ಲಿ ಕೋವಿಡ್ ನ ವೇಗ ಜುಲೈ ತಿಂಗಳಲ್ಲಿ ಸ್ಥಗಿತಗೊಂಡಂತೆ ಕಾಣುತ್ತಿದ್ದು, ಕೊರೊನಾದಿಂದ ಒಟ್ಟು ರೋಗಿಗಳಲ್ಲಿ ಶೇ. 49 ರಷ್ಟು ಜುಲೈನಲ್ಲಿ ಚೇತರಿಸಿಕೊಂಡಿರುವುದು ಬೆಳಕಿಗೆ ಬಂದಿದೆ.

ಜುಲೈ 1 ರಂದು ಮುಂಬಯಿಯಲ್ಲಿ ಒಟ್ಟು ಕೋವಿಡ್ ರೋಗಿಗಳ ಸಂಖ್ಯೆ 78,708 ರಷ್ಟಿದ್ದು, ಈ ಪೈಕಿ 44,791 ರೋಗಿಗಳು ಚೇತರಿಸಿಕೊಂಡಿದ್ದಾರೆ. 29,288 ರೋಗಿಗಳು ಸಕ್ರಿಯ ಪ್ರಕರಣಗಳನ್ನು ಹೊಂದಿ ಚೇತರಿಕೆ ಪ್ರಮಾಣ ಶೇ 57 ರಷ್ಟಿತ್ತು. ನಿಖರವಾಗಿ ಒಂದು ತಿಂಗಳ ನಂತರ ಜುಲೈ 31 ರಂದು ಮುಂಬಯಿಯಲ್ಲಿ ಕೋವಿಡ್‌ ರೋಗಿಗಳ ಸಂಖ್ಯೆ 1,14,278 ಕ್ಕೆ ಏರಿದರೆ, ಚೇತರಿಸಿಕೊಂಡವರ ಸಂಖ್ಯೆ 87,074 ತಲುಪಿದೆ. ಹೀಗಾಗಿ ಜುಲೈನಲ್ಲಿ ವೈರಸ್‌ನಿಂದ 42,283 ರೋಗಿಗಳನ್ನು ಗುಣಪಡಿಸಲಾಗಿದೆ. ಇದು ಗುಣಪಡಿಸಿದ ಒಟ್ಟು ರೋಗಿಗಳಲ್ಲಿ ಶೇ. 48.56 ಆಗಿದೆ. ಈ ಸಮಯದಲ್ಲಿ ಚೇತರಿಕೆ ದರವು 57 ರಿಂದ 77 ಕ್ಕೆ ಏರಿತು. ದೈನಂದಿನ ಸರಾಸರಿ ಬೆಳವಣಿಗೆಯ ದರವು 1.68 ರಿಂದ 0.91 ಕ್ಕೆ ಇಳಿದಿದೆ. ದ್ವಿಗುಣಗೊಳಿಸುವ ದರ 42 ದಿನಗಳಿಂದ 77 ದಿನಗಳಿಗೆ ಏರಿದೆ. ಜುಲೈನಲ್ಲಿ, 35,570 ಹೊಸ ಕೊರೊನಾ ರೋಗಿಗಳು ಕಂಡುಬಂದಿದ್ದಾರೆ.

ಧಾರಾವಿಯಲ್ಲಿ 72 ಪ್ರಕರಣ :  ಕೋವಿಡ್ ಹಾಟ್‌ಸ್ಪಾಟ್‌ ಆಗಿದ್ದ ಧಾರಾವಿ ಈಗ ಕೇವಲ 72 ಸಕ್ರಿಯ ಪ್ರಕರಣಗಳನ್ನು ಹೊಂದಿದೆ. ಧಾರಾವಿಯಲ್ಲಿ ರವಿವಾರ ಬೆರಳೆಣಿಕೆಯ ಪ್ರಕರಣಗಳು ಬೆಳಕಿಗೆ ಬಂದಿದೆ ಎಂದು ವಾರ್ಡ್‌ ನ ಸಹಾಯಕ ಆಯುಕ್ತ ಕಿರಣ್‌ ದಿಘಾವಕರ್‌ ಹೇಳಿದ್ದಾರೆ. ಧಾರಾವಿಯಲ್ಲಿ ಈವರೆಗೆ 2560 ಕೋವಿಡ್ ಪ್ರಕರಣಗಳು ಬೆಳಕಿಗೆ ಬಂದಿವೆ. ಈ ಪೈಕಿ 2235 ಮಂದಿ ಚೇತರಿಸಿಕೊಂಡು ಮನೆಗೆ ಹೋಗಿದ್ದಾರೆ. ಈ ವಾರ್ಡ್‌ನ ದಾದರ್‌ ಪ್ರದೇಶದಲ್ಲಿ ಒಟ್ಟು 1807 ಪ್ರಕರಣಗಳು ಪತ್ತೆಯಾಗಿದ್ದು, 1250 ಡಿಸ್ಚಾರ್ಜ್‌ ಆಗಿದ್ದಾರೆ. 482 ಸಕ್ರಿಯ ಪ್ರಕರಣಗಳಿವೆ. ಮಹೀಂನಲ್ಲಿ 1718 ಪ್ರಕರಣಗಳು ಬೆಳಕಿಗೆ ಬಂದಿದ್ದು, ಅವುಗಳಲ್ಲಿ 1422 ಚೇತರಿಸಿಕೊಂಡಿದ್ದಾರೆ. 224 ಪ್ರಕರಣಗಳು ಸಕ್ರಿಯವಾಗಿವೆ. ಧಾರಾವಿ, ಮಹೀಮ್‌ ಮತ್ತು ದಾದರ್‌ ನಲ್ಲಿ 439 ಸಾವುಗಳು ವರದಿಯಾಗಿವೆ ಎಂದು ಅವರು ತಿಳಿಸಿದ್ದಾರೆ.

8,719 ಸಕ್ರಿಯ ಪ್ರಕರಣಗಳು ಕಡಿಮೆಯಾಗಿವೆ : ಜುಲೈ ತಿಂಗಳಲ್ಲಿ ಕೋವಿಡ್‌ಗೆ ಸಂಬಂಸಿದಂತೆ ಮುಂಬಯಿಯಲ್ಲಿ ಬಹಳ ಸಕಾರಾತ್ಮಕ ಫಲಿತಾಂಶಗಳು ಬಂದಿವೆ. ಚೇತರಿಕೆ ದರವು ಸುಧಾರಿಸಿದ್ದರೂ, ಸಕ್ರಿಯ ಪ್ರಕರಣಗಳ ಸಂಖ್ಯೆಯೂ ಕಡಿಮೆಯಾಗಿದೆ. ಬಿಎಂಸಿ ಬಿಡುಗಡೆ ಮಾಡಿದ ಮಾಹಿತಿಯ ಪ್ರಕಾರ ಜುಲೈ 1 ರಂದು ಮುಂಬಯಿಯಲ್ಲಿ 29,288 ಸಕ್ರಿಯ ಪ್ರಕರಣಗಳಿತ್ತು. ಇದು ಜುಲೈ 31 ರಂದು 8719 ರಿಂದ 20,569 ಕ್ಕೆ ಇಳಿದಿದೆ. ಜುಲೈ ತಿಂಗಳಲ್ಲಿ ಸಾವಿನ ಪ್ರಮಾಣ ಹೆಚ್ಚಾಗಿದ್ದು, ಜುಲೈ 1 ರ ಹೊತ್ತಿಗೆ ಮುಂಬಯಿಯಲ್ಲಿ 4,629 ರೋಗಿಗಳು ಸಾವನ್ನಪ್ಪಿದ್ದರೆ, ಜುಲೈ 31 ರ ಹೊತ್ತಿಗೆ 1721 ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಜುಲೈ ಅಂತ್ಯದ ವೇಳೆಗೆ, ಕೋವಿಡ್ ದಿಂದ ಮುಂ¸ಯಿಯಲ್ಲಿ ಸಾವಿನ ಸಂಖ್ಯೆ 6350 ಕ್ಕೆ ತಲುಪಿದೆ. ಅಂಧೇರಿ ಪೂರ್ವ ವಾರ್ಡ್‌ನಲ್ಲಿ ಅತೀ ಹೆಚ್ಚು 455 ರೋಗಿಗಳು ಬಲಿಯಾದರೆ, ಧಾರಾವಿ ವಾರ್ಡ್‌ನಲ್ಲಿ 439 ಮತ್ತು ಸಕಿನಾಕಾ ವಾರ್ಡ್‌ನ ಕುರ್ಲಾದಲ್ಲಿ 406 ಮಂದಿ ಸಾವನ್ನಪ್ಪಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

ಬಹುದಿನಗಳ ಬಳಿಕ ಸೆಟ್‌ಗೆ ಮರಳಿದ ಅಭಿಷೇಕ್‌; ಅಭಿಮಾನಿಗಳಿಗೆ ಜಾಗೃತಿ ಸಂದೇಶ

ಬಹುದಿನಗಳ ಬಳಿಕ ಸೆಟ್‌ಗೆ ಮರಳಿದ ಅಭಿಷೇಕ್‌; ಅಭಿಮಾನಿಗಳಿಗೆ ಜಾಗೃತಿ ಸಂದೇಶ

ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಳ್ಳುವ ಭೀತಿಯಿಂದ ಮೂರೇ ದಿನಕ್ಕೆ ಸದನ ಮೊಟಕು: ಡಿಕೆಶಿ

ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಳ್ಳುವ ಭೀತಿಯಿಂದ ಮೂರೇ ದಿನಕ್ಕೆ ಸದನ ಮೊಟಕು: ಡಿಕೆಶಿ

rajuyasabe

ತೀವ್ರ ವಿರೋಧದ ನಡುವೆ ಕೃಷಿಗೆ ಸಂಬಂಧಿಸಿದ 2 ಮಸೂದೆಗಳಿಗೆ ರಾಜ್ಯಸಭೆಯಲ್ಲಿ ಅಂಗೀಕಾರ

masnglore

ವರುಣನ ಆರ್ಭಟ: ಮಂಗಳೂರು ವಿ.ವಿ ಸ್ನಾತಕ ಮತ್ತು ಸ್ನಾತಕೋತ್ತರ ಪದವಿ ಪರೀಕ್ಷೆ ಮುಂದೂಡಿಕೆ !

ಸಿಎಂ ಆಗಿದ್ದಾಗಲೇ ಕಾಂಗ್ರೆಸ್ ನಿರ್ನಾಮ ಮಾಡಿದ್ದ ಸಿದ್ದರಾಮಯ್ಯ: ಕಿಡಿಕಾರಿದ ಎಚ್ ಡಿಕೆ

ಸಿಎಂ ಆಗಿದ್ದಾಗಲೇ ಕಾಂಗ್ರೆಸ್ ನಿರ್ನಾಮ ಮಾಡಿದ್ದ ಸಿದ್ದರಾಮಯ್ಯ: ಕಿಡಿಕಾರಿದ ಎಚ್ ಡಿಕೆ

ನಗರದಲ್ಲಿ ಜಲಪ್ರಳಯ

ನಗರದಲ್ಲಿ ಜಲಪ್ರಳಯ: ಪ್ರಕೃತಿ ವಿಕೋಪ ಎದುರಿಸಲು ಉಡುಪಿ ಜಿಲ್ಲಾಡಳಿತ ಎಷ್ಟು ಸನ್ನದ್ಧ?

lokasabe

ಕೃಷಿ ಮಸೂದೆ ರಾಜ್ಯಸಭೆಯಲ್ಲಿ ಮಂಡನೆ: ರೈತರ ಡೆತ್ ವಾರೆಂಟ್ ಗೆ ಸಹಿ ಮಾಡಲ್ಲವೆಂದ ಕಾಂಗ್ರೆಸ್ !


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್

ಕೋವಿಡ್‌ ಹಾಟ್‌ಸ್ಪಾಟ್‌ ಆಗುತ್ತಿರುವ ಬಾಂದ್ರಾ-ಕುರ್ಲಾ ಕಾಂಪ್ಲೆಕ್ಸ್

mumbai-tdy-1

10 ಸಾವಿರ ಪ್ರಕರಣ ಪಟ್ಟಿಗೆ ಅಂಧೇರಿ, ಮಲಾಡ್‌ ಸೇರ್ಪಡೆ

ಆರನೇ ಶತಮಾನದ ಪಾರಂಪರಿಕ ತಾಣ ಧರಾಶಿವ್‌ ಗುಹೆ ಜೀರ್ಣೋದ್ಧಾರ

ಆರನೇ ಶತಮಾನದ ಪಾರಂಪರಿಕ ತಾಣ ಧರಾಶಿವ್‌ ಗುಹೆ ಜೀರ್ಣೋದ್ಧಾರ

MUMBAI-TDY-1

ಬೊರಿವಲಿ ಉಪನಗರ: 10 ಸಾವಿರ ದಾಟಿದ ಪ್ರಕರಣ

ಥಾಣೆ: 1.46 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

ಥಾಣೆ: 1.46 ಲಕ್ಷ ದಾಟಿದ ಸೋಂಕಿತರ ಸಂಖ್ಯೆ

MUST WATCH

udayavani youtube

Dr.Harsha Kamath : ಕಾರ್ಕಳದ ಈ Doctor ಕಲಾ ಕುಸುರಿಯ Master | Udayavani

udayavani youtube

ಮುಂಬೈಯಿಂದ ಡ್ರಗ್ಸ್‌ ತಂದು ಮಂಗಳೂರಿನಲ್ಲಿ ಮಾರಾಟ ಮಾಡುತ್ತಿದ್ದರು: ನಗರ ಪೊಲೀಸ್ ಆಯುಕ್ತ

udayavani youtube

ಕುತಂತ್ರಿ ಚೀನಾವನ್ನು ಕಟ್ಟಿ ಹಾಕುವುದು ಹೇಗೆ?

udayavani youtube

ಭಾಗಶಃ ಕುಸಿದ ಉಡುಪಿಯ ಹಳೆಯ ಕಟ್ಟಡ: ಓರ್ವ ಮಹಿಳೆಗೆ ಗಾಯ | Udayavani

udayavani youtube

ಹಂಪನಕಟ್ಟೆಯಲ್ಲಿ ಪತ್ತೆಯಾದ ಶತಮಾನದ ಹಿಂದಿನ ಬಾವಿ!ಹೊಸ ಸೇರ್ಪಡೆ

ಬಹುದಿನಗಳ ಬಳಿಕ ಸೆಟ್‌ಗೆ ಮರಳಿದ ಅಭಿಷೇಕ್‌; ಅಭಿಮಾನಿಗಳಿಗೆ ಜಾಗೃತಿ ಸಂದೇಶ

ಬಹುದಿನಗಳ ಬಳಿಕ ಸೆಟ್‌ಗೆ ಮರಳಿದ ಅಭಿಷೇಕ್‌; ಅಭಿಮಾನಿಗಳಿಗೆ ಜಾಗೃತಿ ಸಂದೇಶ

ನಾಲ್ಕು ಗಂಟೆ ನಿಂತು ಶಾಸಕಿ ಪ್ರತಿಭಟನೆ

ನಾಲ್ಕು ಗಂಟೆ ನಿಂತು ಶಾಸಕಿ ಪ್ರತಿಭಟನೆ

bil hast

ಹೀಗೊಂದು ಹಾವು ಪ್ರೇಮಿ

cb-tdy-2

ವರ್ಷಾಂತ್ಯಕ್ಕೆ ನಿವೇಶನ ಹಂಚುವ ಗುರಿ

ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಳ್ಳುವ ಭೀತಿಯಿಂದ ಮೂರೇ ದಿನಕ್ಕೆ ಸದನ ಮೊಟಕು: ಡಿಕೆಶಿ

ಭ್ರಷ್ಟಾಚಾರದಲ್ಲಿ ಸಿಕ್ಕಿಹಾಕಿಕೊಳ್ಳುವ ಭೀತಿಯಿಂದ ಮೂರೇ ದಿನಕ್ಕೆ ಸದನ ಮೊಟಕು: ಡಿಕೆಶಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.