Udayavni Special

ಕೋವಿಡ್‌ ವಿರುದ್ಧದ ಹೋರಾಟಕ್ಕೆ 630 ಕೋ. ರೂ. ಖರ್ಚು: ಬಿಎಂಸಿ

Team Udayavani, Jul 8, 2020, 5:26 PM IST

ಕೋವಿಡ್‌ ವಿರುದ್ಧದ ಹೋರಾಟಕ್ಕೆ 630 ಕೋ. ರೂ. ಖರ್ಚು: ಬಿಎಂಸಿ

ಮುಂಬಯಿ, ಜು. 7: ಕೋವಿಡ್ ವಿರುದ್ಧದ ಹೋರಾಟಕ್ಕೆ ಮುಂಬಯಿ ಮಹಾನಗರ ಪಾಲಿಕೆಯು ಈವರೆಗೆ ಸುಮಾರು 630 ಕೋ. ರೂ. ಖರ್ಚು ಮಾಡಿದ್ದು, ಪ್ರಸ್ತುತ 2020-21ರ ಬಜೆಟ್‌ ಹಂಚಿಕೆಗಾಗಿ ಪುನಃ ಕೆಲಸ ಮಾಡಬೇಕಾದ ಅನಿವಾರ್ಯತೆ ಇದೆ. ಕೋವಿಡ್‌ ಸಂಬಂಧಿತ ವೆಚ್ಚಗಳನ್ನು ಪೂರೈಸಲು ನಾಗರಿಕ ಸಂಸ್ಥೆಯು ಬಜೆಟ್‌ನಲ್ಲಿ ಕೆಲವು ಯೋಜನೆಗಳಿಗೆ ನಿಗದಿಪಡಿಸಿದ ಹಣವನ್ನು ಬೇರೆಡೆಗೆ ತಿರುಗಿಸುವ ಸಾಧ್ಯತೆಯಿದೆ. ದೇಶದ ಶ್ರೀಮಂತ ನಾಗರಿಕ ಸಂಸ್ಥೆ ಎಂದೇ ಪ್ರಸಿದ್ಧಿಯನ್ನು ಪಡೆದ ಬಿಎಂಸಿ ಅನಿರೀಕ್ಷಿತವಾಗಿ ರಚಿಸಲಾದ 50,850 ಕೋ.ರೂ. ಆಕಸ್ಮಿಕ ನಿಧಿಯಿಂದ ಹಣವನ್ನು ಬಳಸಿಕೊಳ್ಳುತ್ತಿದೆ.

ಮುಂದಿನ ದಿನಗಳಲ್ಲಿ ನಿರ್ಧಾರ : ನಮ್ಮಲ್ಲಿ ಸುಮಾರು 220 ಕೋಟಿ ರೂ. ಆಕಸ್ಮಿಕ ನಿಧಿ ಉಳಿದಿದೆ. ಹೆಚ್ಚಿನ ಹಣವನ್ನು ಆರೋಗ್ಯ ಸೌಲಭ್ಯಗಳ ಸೃಷ್ಟಿಗೆ ಬಳಸಿಕೊಳ್ಳಲಾಯಿತು. ಅಗತ್ಯವಿದ್ದಲ್ಲಿ, ನಾವು ಶೀಘ್ರದಲ್ಲೇ ಆಂತರಿಕ ಕೆಲಸವನ್ನು ಪ್ರಾರಂಭಿಸುತ್ತೇವೆ ಎಂದು ಹೆಚ್ಚುವರಿ ಪುರಸಭೆ ಆಯುಕ್ತ ಪಿ. ವೆಲ್ರಾಸು ಹೇಳಿದರು.

ಕೋವಿಡ್‌ -19 ವೆಚ್ಚಗಳನ್ನು ಪೂರೈಸಲು ಆಕಸ್ಮಿಕ ನಿಧಿಯ ಮೊತ್ತವು ಮುಗಿದಿದ್ದರೆ ಹೆಚ್ಚಿನ ಹಣವನ್ನು ಹೇಗೆ ಸಂಗ್ರಹಿಸುವುದು ಎಂದು ನಿರ್ಧರಿಸಿಲ್ಲ ಎಂದು ಬಿಎಂಸಿ ಹೇಳಿದೆ. ಕಳೆದ ಎರಡು ತಿಂಗಳುಗಳಿಂದ ಹೆಚ್ಚುತ್ತಿರುವ ಪ್ರಕರಣಗಳ ಕಾರಣದಿಂದಾಗಿ ಎಚ್ಚರಿಕೆಯಿಂದ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ. ಏಪ್ರಿಲ್‌ ವರೆಗೆ, ಬಿಎಂಸಿ ಸುಮಾರು 100 ಕೋ. ರೂ. ಗಳವರೆಗೆ ಖರ್ಚು ಮಾಡಿದೆ. ಜೂನ್‌ ಮೊದಲ ವಾರದ ವೇಳೆಗೆ ಸುಮಾರು 480 ಕೋ. ರೂ.ಗೆ ಏರಿಕೆಯಾಗಿದೆ. ಜುಲೈ ಮೊದಲ ವಾರದ ವೇಳೆಗೆ ಅದು ಒಟ್ಟು 630 ಕೋ. ರೂ. ಗಳಿಗೆ ತಲುಪಿದೆ ಎಂದು ಬಿಎಂಸಿ ತಿಳಿಸಿದೆ.

ದೇಣಿಗೆ ಬಗ್ಗೆ ನಿಖರ ಮಾಹಿತಿಯಿಲ್ಲ :  ಆರೋಗ್ಯ ಮೂಲಸೌಕರ್ಯಗಳ ಹೊರತಾಗಿ ಮುಂಚೂಣಿ ಸಿಬಂದಿಯ ವಸತಿಗಾಗಿ ಹೊಟೇಲ್‌ ಬಿಲ್‌, ಗುತ್ತಿಗೆ ಆಧಾರದ ಮೇಲೆ ಹೊಸ ಸಿಬಂದಿ ನೇಮಕ, ಆಹಾರ ವಿತರಣೆ, ವೈಯಕ್ತಿಕ ರಕ್ಷಣಾ ಸಾಧನ (ಪಿಪಿಇ) ಕಿಟ್‌ಗಳು, ಎನ್‌-95 ಮುಖವಸ್ತ್ರ, ಕೈಗವಸುಗಳು, ಹೈಡ್ರಾಕ್ಸಿಕ್ಲೋರೋಕ್ವಿನ್‌, ಥರ್ಮಲ್‌ ಮೀಟರ್‌, ಸ್ಯಾನಿಟೈಸರ್‌ ಇತ್ಯಾದಿ ಕೆಲವು ವಸ್ತುಗಳನ್ನು ಕಾರ್ಪೊರೇಟ್‌ ಸಾಮಾಜಿಕ ಜವಾಬ್ದಾರಿ ರೂಪದಲ್ಲಿ ಅಥವಾ ಸಂಸ್ಥೆಗಳಿಂದ ದೇಣಿಗೆ ರೂಪದಲ್ಲಿ ಸ್ವೀಕರಿಸಲಾಗಿದೆ. ಆದರೆ ದಾನ ಮಾಡಿದ ವಸ್ತುಗಳ ನಿಖರವಾದ ಪ್ರಮಾಣ ಇನ್ನೂ ತಿಳಿದುಬಂದಿಲ್ಲ.

ವೆಚ್ಚಗಳ ಮೇಲೆ ಪಾರದರ್ಶಕತೆ ಅಗತ್ಯ ಬಿಎಂಸಿ ವಿಪಕ್ಷ ನಾಯಕ ರವಿ ರಾಜಾ ಮಾತನಾಡಿ, ಭವಿಷ್ಯದ ಕೋವಿಡ್‌ ವೆಚ್ಚ ಗಳಿಗಾಗಿ ಬಿಎಂಸಿ ಹೇಗೆ ಹಣ ಸಂಗ್ರಹಿಸಬಹುದು ಎಂಬುದರ ಕುರಿತು ನಾವು ಪ್ರತಿಕ್ರಿಯಿಸಲು ಸಾಧ್ಯವಿಲ್ಲ, ಬಿಎಂಸಿ ಇನ್ನೂ ಚುನಾಯಿತ ಪ್ರತಿನಿಧಿಗಳಿಗೆ ವೆಚ್ಚಗಳ ಬಗ್ಗೆ ತಿಳಿಸಿಲ್ಲ. ನಾನು ವೈಯಕ್ತಿಕವಾಗಿ ಅಧಿಕಾರಿ ಗಳಿಂದ ವಿವರಗಳನ್ನು ಕೋರಿದ್ದೇನೆ. ಆದರೆ ಅವರು ಅದನ್ನು ಹಂಚಿಕೊಳ್ಳುತ್ತಿಲ್ಲ. ವೆಚ್ಚಗಳ ಮೇಲೆ ಪಾರದರ್ಶಕತೆ ಇದೆ ಎಂದು ನಾವು ನಿರೀಕ್ಷಿಸುತ್ತೇವೆ. ಅದಕ್ಕೆ ಸಂಬಂಧಿಸಿದ ಮಾಹಿತಿಯನ್ನು ಚುನಾಯಿತ ಪ್ರತಿನಿಧಿಗಳಿಗೆ ಲಭ್ಯವಾಗುವಂತೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

Ad

ಶ್ರೀ ಅಷ್ಠ ಲಕ್ಷ್ಮೀ ಜೋತಿಷ್ಯ ಮಂದಿರ,
ಉದ್ಯೋಗ, ಮದುವೆ ವಿಳಂಬ, ಸತಿ-ಪತಿ ಕಲಹ, ಶತ್ರುಪೀಡೆ, ಅತ್ತೆ-ಸೊಸೆ ಕಲಹ, ವಶೀಕರಣ, ವ್ಯವಹಾರದಲ್ಲಿ ನಷ್ಟ, ನಿಮ್ಮ ಸಮಸ್ಯೆ ಯಾವುದೇ ಇರಲಿ, ಎಷ್ಟೇ ಕಠಿಣವಾಗಿರಲಿ ಶಾಶ್ವತ ಪರಿಹಾರ ಶತಃಸಿದ್ಧ. ನಿಮ್ಮ ಯಾವುದೇ ಇಷ್ಟಾರ್ಥ ಕಾರ್ಯಗಳಿದ್ದರೂ ಕೇವಲ ೫ ದಿನಗಳಲ್ಲಿ ನೆರವೇರಿಸಿ ಕೊಡುತ್ತಾರೆ. ಇಂದೇ ಭೇಟಿ ನೀಡಿ.
ಶ್ರೀ ಶ್ರೀ ಬಿ ಹೆಚ್ ಆಚಾರ್ಯ ಗುರೂಜಿ
ಜಯನಗರ ಬೆಂಗಳೂರು, ಮೋ- 8884889444

ಟಾಪ್ ನ್ಯೂಸ್

Bell-01

ಅಯೋಧ್ಯಾ ರಾಮನಿಗೆ 2.1 ಟನ್‌ನ ಭಾವೈಕ್ಯ ಗಂಟೆ !

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

School-Children-01

ಚಿಂತನೆ: ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಇನ್ನು ಸೈಕಲ್‌ ಜತೆ ಬಸ್‌ ಪ್ರಯಾಣ ಸಾಧ್ಯ! ; ಬೆಂಗಳೂರಿನಲ್ಲೊಂದು ವಿನೂತನ ಯೋಜನೆ

ಇನ್ನು ಸೈಕಲ್‌ ಜತೆ ಬಸ್‌ ಪ್ರಯಾಣ ಸಾಧ್ಯ! ; ಬೆಂಗಳೂರಿನಲ್ಲೊಂದು ವಿನೂತನ ಯೋಜನೆ

ಮಲೆನಾಡಿನಲ್ಲಿ ಮಳೆ ಶಾಂತ; ಕರಾವಳಿಯಲ್ಲಿ ಬಿರುಸು

ಮಲೆನಾಡಿನಲ್ಲಿ ಮಳೆ ಶಾಂತ; ಕರಾವಳಿಯಲ್ಲಿ ಬಿರುಸು
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹೆಚ್ಚಿನ ಪರೀಕ್ಷೆ: ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ  ಭಾರೀ ಇಳಿಕೆ

ಹೆಚ್ಚಿನ ಪರೀಕ್ಷೆ: ಪಾಸಿಟಿವ್‌ ಪ್ರಕರಣಗಳ ಸಂಖ್ಯೆಯಲ್ಲಿ ಭಾರೀ ಇಳಿಕೆ

ಶ್ರಮಿಕ ವಿಶೇಷ ರೈಲಿನಿಂದ ರಾಜ್ಯಕ್ಕೆ 42 ಲಕ್ಷ ರೂ. ನಷ್ಟ

ಶ್ರಮಿಕ ವಿಶೇಷ ರೈಲಿನಿಂದ ರಾಜ್ಯಕ್ಕೆ 42 ಲಕ್ಷ ರೂ. ನಷ್ಟ

Mumbai-tdy-1

1.70 ಲಕ್ಷ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತ

ಯುಪಿಎಸ್‌ಸಿ ಪರೀಕ್ಷೆ: ಅಕ್ಕಲ್‌ಕೋಟೆಯ ಕನ್ನಡಿಗ 249ನೇ ಸ್ಥಾನ ಪಡೆದು ಉತ್ತೀರ್ಣ

ಯುಪಿಎಸ್‌ಸಿ ಪರೀಕ್ಷೆ: ಅಕ್ಕಲ್‌ಕೋಟೆಯ ಕನ್ನಡಿಗ 249ನೇ ಸ್ಥಾನ ಪಡೆದು ಉತ್ತೀರ್ಣ

ಪೊಲೀಸರ ನಂಬಿಕೆ ಇಲ್ಲದಿದ್ದರೆ ರಾಜ್ಯ ಬಿಡಲಿ;ಅಮೃತಾ ಫಡ್ನವೀಸ್‌ ವಿರುದ್ಧ ಅನಿಲ್‌ ಪರಬ್ ಕಿಡಿ

ಪೊಲೀಸರ ನಂಬಿಕೆ ಇಲ್ಲದಿದ್ದರೆ ರಾಜ್ಯ ಬಿಡಲಿ; ಅಮೃತಾ ಫಡ್ನವೀಸ್‌ ವಿರುದ್ಧ ಅನಿಲ್‌ ಪರಬ್ ಕಿಡಿ

MUST WATCH

udayavani youtube

ರಾಂಬೂಟಾನ್ ಬೆಳೆಯುವ ಸೂಕ್ತ ವಿಧಾನ | How To Grow Rambutan Fruit | FULL INFORMATION

udayavani youtube

ಟೇಬಲ್ ಟಾಪ್ ರನ್ ವೇ ಏಕೆ ಸವಾಲು?

udayavani youtube

ಜೇನುನೊಣಗಳ ಸಂತತಿ ಇಲ್ಲವಾದರೆ ಇಡೀ ಜೀವ ಸಂಕುಲವೇ ನಶಿಸಿಹೋಗುತ್ತದೆ | Udayavani

udayavani youtube

VP NAGARAದ 75 CENTS ಜಾಗದಲ್ಲಿ ಮಾದರಿ ಕೃಷಿ ತೋಟ| Udayavani

udayavani youtube

ಹೈನುಗಾರಿಕೆಯಿಂದ ಬದುಕು ಕಟ್ಟಿಕೊಂಡ ಕುಟುಂಬ | Interview with successful Dairy Farmerಹೊಸ ಸೇರ್ಪಡೆ

Bell-01

ಅಯೋಧ್ಯಾ ರಾಮನಿಗೆ 2.1 ಟನ್‌ನ ಭಾವೈಕ್ಯ ಗಂಟೆ !

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

ಮುಂದಿನ ಪ್ರಧಾನಿ ಮೋದಿಯೇ ಆಗಲಿ ; ಇಂಡಿಯಾ ಟುಡೇ-ಕಾರ್ವಿ ಇನ್‌ಸೈಟ್ಸ್‌ ಸಮೀಕ್ಷಾ ವರದಿ

School-Children-01

ಚಿಂತನೆ: ಹೊಸ ಶಿಕ್ಷಣ ನೀತಿ ಒಂದು ಐತಿಹಾಸಿಕ ಹೆಜ್ಜೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಮೊಬೈಲ್‌ ಆ್ಯಪ್‌ ಬಳಸಿ ರೈತರಿಂದಲೇ ಬೆಳೆ ಸಮೀಕ್ಷೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

ಕನ್ನಡ ಚಿತ್ರಗಳಿಗೆ ಪ್ರತ್ಯೇಕ OTT: ಚಿಂತನೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.