ಆಪರೇಷನ್‌ ವಿಜಯ್‌ ಶೌರ್ಯದ ದಾಖಲೆ: ಸಿಎಂ ಫ‌ಡ್ನವೀಸ್‌


Team Udayavani, Jul 27, 2019, 12:44 PM IST

mumbai-tdy-4

ಮುಂಬಯಿ, ಜು. 26: ಭಾರತ ಯಾವತ್ತೂ ಯಾವುದೇ ದೇಶವನ್ನು ಆಕ್ರಮಿಸಿಲ್ಲ, ಆದರೆ ಯಾರಾದರೂ ಭಾರತವನ್ನು ಆಕ್ರಮಿಸಲು ಪ್ರಯತ್ನಿಸಿದರೆ, ನಮ್ಮ ದೇಶದ ಸೈನಿಕರು ಅವರ ದಾಳಿಗೆ ಪ್ರತಿ ಉತ್ತರ ನೀಡಿ, ಅವರನ್ನು ಹಿಮ್ಮೆಟ್ಟಿಸುವ ಶಕ್ತಿ ಹೊಂದಿದ್ದಾರೆ. ಆಪರೇಶನ್‌ ವಿಜಯದಲ್ಲಿ ಭಾರತೀಯ ಸೈನಿಕರು ಪಾಕಿಸ್ಥಾನವನ್ನು ತಲುಪಲು ಸಾಧ್ಯವಿಲ್ಲ ಎಂದು ಪಾಕಿಸ್ಥಾನ ಭಾವಿಸಿತ್ತು. ಆದರೆ ಭಾರತೀಯ ಸೈನಿಕರು ತಮ್ಮ ಪ್ರಾಣತ್ಯಾಗ ಮಾಡಿ ಆಪರೇಶನ್‌ ವಿಜಯ್‌ ಯಶಸ್ವಿಯಾದರು. ಅದಕ್ಕಾಗಿಯೇ ಆಪರೇಶನ್‌ ವಿಜಯ ಶೌರ್ಯದ ದಾಖಲೆಯಾಗಿದೆ ಎಂದು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್‌ ಅವರು ಹೇಳಿದರು.

ಕಾರ್ಗಿಲ್ ವಿಜಯ ದಿನದ ನಿಮಿತ್ತ ಅಥರ್ವಾ ಫೌಂಡೇಶನ್‌ ವತಿಯಿಂದ ಶಣ್ಮುಖಾನಂದನ ಹಾಲ್ನಲ್ಲಿ ವಿಶೇಷ ಕಾರ್ಯಕ್ರಮವನ್ನು ಆಯೋಜಿಸಲಾಯಿತು. ಈ ಕಾರ್ಯಕ್ರಮದಲ್ಲಿ ಶಾಲಾ ಶಿಕ್ಷಣ ಸಚಿವ ಆಶಿಶ್‌ ಶೇಲಾರ್‌, ಶಾಸಕ ಮಂಗಲ್ ಪ್ರಭಾತ್‌ ಲೋಧಾ, ಶಾಸಕ ರಾಜ್‌ ಪುರೋಹಿತ್‌, ಲೆಫ್ಟಿನೆಂಟ್ ಜನರಲ್ ಎಸ್‌. ಕೆ. ಪರಾಶರ್‌, ವಿಂಗ್‌ ಕಮಾಂಡರ್‌ ಜಗಮೋಹನ್‌ನಾಥ್‌, ಚಾರಿಟಿ ಅಧಿಕಾರಿ ಸಂಜಯ್‌ ಭಾಟಿಯಾ, ಆಪರೇಶನ್‌ ವಿಜಯದಲ್ಲಿ ಹುತಾತ್ಮರಾದ ಯೋಧರ ಕುಟುಂಬ ಸದಸ್ಯರು ಉಪಸ್ಥಿತರಿದ್ದರು.

ಕಾರ್ಗಿಲ್ ವಿಜಯೋತ್ಸವ ದಿನದ ಶುಭಾಶಯಗಳನ್ನು ಉಪಸ್ಥಿತ ಗಣ್ಯರಿಗೆ ಪ್ರಸ್ತುತಪಡಿಸಿದ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್‌ ಅವರು, ಜುಲೈ 26ರಂದು ದೇಶಾದ್ಯಂತ ಕಾರ್ಗಿಲ್ ವಿಜಯ್‌ ದಿನ ಎಂದು ಆಚರಿಸಲಾಗುತ್ತಿದೆ. ಕಾರ್ಗಿಲ್ ವಿಜಯವು 20 ವರ್ಷಗಳನ್ನು ಪೂರೈಸಿದ್ದು, ನಮ್ಮ ಭಾರತಕ್ಕೆ ಗೌರವದ ದಿನವಾಗಿದೆ. ಇಂದು ಆಪರೇಶನ್‌ ವಿಜಯದಲ್ಲಿ ಹುತಾತ್ಮರಾದ ಸೈನಿಕರ ತ್ಯಾಗವನ್ನು ನಾವು ನೆನಪಿನಲ್ಲಿಡಬೇಕು. ತಮ್ಮ ಭವಿಷ್ಯವನ್ನು ಭದ್ರಪಡಿಸಿಕೊಳ್ಳಲು ಅವರು ತಮ್ಮ ಪ್ರಾಣವನ್ನು ತ್ಯಾಗ ಮಾಡಿದರು. ಭಾರತಕ್ಕೆ ಸಂಪನ್ಮೂಲಗಳ ಅವಶ್ಯಕತೆಯಿದೆಯೋ, ಹಾಗೆ ನಮ್ಮ ರಾಷ್ಟ್ರದ ಸೈನ್ಯವು ದೊಡ್ಡದಾಗಿರಬೇಕು. ಇಂದು ಭಾರತ ಪ್ರಧಾನಿ ನರೇಂದ್ರ ಮೋದಿಯವರ ನೇತೃತ್ವದಲ್ಲಿ ಅಭಿವೃದ್ಧಿಯತ್ತ ಸಾಗುತ್ತಿದೆ. ಆದರೆ ನಮ್ಮ ದೇಶ ಸುರಕ್ಷಿತ ಮತ್ತು ಪ್ರಬಲ ವಾಗಿರುವುದರಿಂದ ಈ ಅಭಿವೃದ್ಧಿಯನ್ನು ಮಾಡಲು ನಮಗೆ ಸಾಧ್ಯವಾಗಿದೆ.

ರಾಜ್ಯದ ಸೈನಿಕರ ಸಹಾಯದಲ್ಲಿ ಹೆಚ್ಚಳ:

ಭಾರತವು ಯಾವಾಗಲೂ ತ್ಯಾಗ ಮತ್ತು ಶೌರ್ಯವನ್ನು ತೋರಿಸಿದೆ. ಭಾರತೀಯ ಸೈನಿಕರು ಸಹ ತ್ಯಾಗ ಮತ್ತು ಶೌರ್ಯವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ, ಆದ್ದರಿಂದ ಮಹಾರಾಷ್ಟ್ರ ಸರಕಾರ ಈ ಸೈನಿಕರ ಹಿಂದೆ ಬೆಂಬಲವಾಗಿ ನಿಂತಿದೆ. ನಮ್ಮ ಸೈನಿಕರ ಬಗ್ಗೆ ನಾವೆಲ್ಲರೂ ಕರ್ತವ್ಯಭಾವನೆಯನ್ನು ಹೊಂದಿರುವುದು ಅವಶ್ಯವಾಗಿದೆ.

ಮಹಾರಾಷ್ಟ್ರದ ಹುತಾತ್ಮರ ಕುಟುಂಬ ಗಳಿಗೆ ನೀಡುವ ಪರಿಹಾರ ನಿಧಿಯನ್ನು ಹೆಚ್ಚಿಸಲಾಗಿದೆ. ಈಗ ನೆರವು ಸುಮಾರು 5 ಲಕ್ಷ ರೂ. ದಿಂದ ಹೆಚ್ಚಿಸಿ ಒಂದು ಕೋಟಿ ರೂ.ಗಳಷ್ಟು ಮಾಡಲಾಗಿದೆ. ನಾವೆಲ್ಲರೂ ಒಂದು ವಿಷಯವನ್ನು ಗಮನದಲ್ಲಿಟ್ಟುಕೊಳ್ಳಬೇಕು ಏನೆಂದರೆ, ಸುಮಾರು 125 ಕೋಟಿ ಜನರು ಸೈನಿಕರ ಕುಟುಂಬದೊಂದಿಗೆ ಇದ್ದಾರೆ ಎಂದು ನಾವು ಭರವಸೆ ನೀಡಬೇಕು.

5 ಎಕರೆ ಭೂಮಿ:

ಹುತಾತ್ಮರ ಕುಟುಂಬಗಳಿಗೆ 5 ಎಕರೆ ಭೂಮಿಯನ್ನು ನೀಡಲು ಮಹಾರಾಷ್ಟ್ರ ಸರಕಾರ ನಿರ್ಧರಿಸಿದೆ. ಈ ಭೂ ಖರೀದಿಯಲ್ಲಿ ಸ್ಟಾಂಪ್‌ ಡ್ಯೂಟಿ ಮನ್ನಾ ಮಾಡಲಾಗುತ್ತದೆ. ಈ ನಿರ್ಧಾರವನ್ನು ಎರಡು ವರ್ಷಗಳ ಹಿಂದೆ ತೆಗೆದುಕೊಳ್ಳಲಾಗಿದೆ. ರಾಜ್ಯ ಸರಕಾರವು ಆಗಸ್ಟ್‌ 15 ಹಾಗೂ ಜನವರಿ 26ರಂದು ಹುತಾತ್ಮರ ಕುಟುಂಬದವರನ್ನು ಸಮ್ಮಾನಪೂರ್ವಕ ಸರಕಾರಿ ಕಾರ್ಯಕ್ರಮಕ್ಕೆ ಕರೆಯುವ ಪದ್ಧತಿ ಆರಂಭಿಸಿದೆ ಎಂದು ಮುಖ್ಯಮಂತ್ರಿ ಫಡ್ನವೀಸ್‌ ಹೇಳಿದರು.

ಅಥರ್ವಾ ಫೌಂಡೇಶನ್‌ ವತಿಯಿಂದ ಕಾರ್ಗಿಲ್ ವಿಜಯ ದಿನವನ್ನು ಆಚರಿ ಸಲು ವಿಶೇಷ ಕಾರ್ಯಕ್ರಮವನ್ನು ನಡೆಯಿತು. ಆಪರೇಶನ್‌ ವಿಜಯ್‌ದ ಬಗ್ಗೆ ಕಿರುಚಿತ್ರವನ್ನು ಕಾರ್ಯಕ್ರಮದ ವೇಳೆ ಪ್ರದರ್ಶಿಸಲಾಯಿತು.

ಹುತಾತ್ಮರ ಕುಟುಂಬಗಳಿಗಾಗಿ ಅಥರ್ವಾ ಫೌಂಡೇಶನ್‌ ಮಾಡಿದ ಕಾರ್ಯಗಳ ಬಗ್ಗೆ ಸುನಿಲ್ ರಾಣೆ ಮಾಹಿತಿ ನೀಡಿದರು. ಫೌಂಡೇಶನ್‌ ವತಿಯಿಂದ ವರ್ಷಾ ರಾಣೆ ಅವರು ಹುತಾತ್ಮರಾದ ಕುಟುಂಬಗಳನ್ನು ಗೌರವಿಸಿದರು.

ಟಾಪ್ ನ್ಯೂಸ್

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

1-weqwewq

Belthangady: ಸ್ಕೂಟರ್ ಢಿಕ್ಕಿಯಾಗಿ ರಸ್ತೆ ದಾಟುತ್ತಿದ್ದ ವ್ಯಕ್ತಿ ಸಾವು

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Pramod Madhwaraj: ಸಂಸದರಿಗೆ ಭಾಷೆಯಲ್ಲ,ಕೆಲಸ ಮುಖ್ಯ: ಪ್ರಮೋದ್‌ ಮಧ್ವರಾಜ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

Lok sabha polls: ಸುರೇಶ್‌ ಗೆಲ್ಲುವುದಿರಲಿ, ಠೇವಣಿ ಕೂಡ ಸಿಗದು; ರಾಧಾಮೋಹನ್‌ ದಾಸ್‌

1-wwqeqw

Kejriwal; ಏಪ್ರಿಲ್ 1 ರವರೆಗೆ ಇಡಿ ಕಸ್ಟಡಿಗೆ: ಸಾರ್ವಜನಿಕರು ತಕ್ಕ ಉತ್ತರ ನೀಡುತ್ತಾರೆ

kejriwal-2

Kejriwal ಕುರಿತು ಅಮೆರಿಕದ ಹೇಳಿಕೆ ಸ್ವೀಕಾರಾರ್ಹವಲ್ಲ ಎಂದ ಭಾರತದ ವಿದೇಶಾಂಗ ಇಲಾಖೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ವಿಷಯ ಚಿಕ್ಕದಾದರೂ ಅದರೊಳಗಿನ ವಿಚಾರ ದೊಡ್ಡದು : ಅರಿವಿನ ಬೇಕು-ಬೇಡಗಳ ನಡುವೆ

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಟ್ರೆಂಟ್‌ ತೀರದಲ್ಲಿ ಲಾಸ್ಯ ಮತ್ತು ಕಿಂಕಿಣಿ ಮೇಳೈಸಿದಾಗ …

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಬಸ್‌ ಪ್ರವಾಸ ಮತ್ತು ಮಹಿಳಾ ದಿನಾಚರಣೆ: ಹೆಮ್ಮೆಯ ದುಬೈ ಕನ್ನಡಿಗ ಸಂಘ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಕನ್ನಡಿಗಾಸ್‌ ಸ್ಟಾರ್‌ ಅವಾರ್ಡ್‌ 2024 ಪ್ರದಾನ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

Desi Swara: ಪ್ಯಾಸೇಜು ಟು ಇಂಡಿಯಾ: ಭಾರತ ಪರಂಪರೆಯ ಅನಾವರಣ, ಸಾಂಸ್ಕೃತಿಕ ವೈಭವ

MUST WATCH

udayavani youtube

ಟೌನಶಿಪ್’ನ ಬಾಡಿಗೆ ಮನೆಯೊಂದರಲ್ಲಿ ಕಳ್ಳತನ ರೂ: 47 ಸಾವಿರ ಕಳವು

udayavani youtube

ವಿಶ್ವ ಗುಬ್ಬಚ್ಚಿಗಳ ದಿನ | ಈ ಮನೆ ನೂರಾರು ಗುಬ್ಬಚ್ಚಿಗಳ ತವರು

udayavani youtube

ಬಡವರ ಸೇವೆಯೇ ಶ್ರೀರಾಮ ದೇವರ ಸೇವೆ : ಪೇಜಾವರಶ್ರೀ

udayavani youtube

ಕೆಂಪು ಹರಿವೆ ಸೊಪ್ಪು ಬೆಳೆಯುವ ಸೂಕ್ತ ವಿಧಾನ

udayavani youtube

ರಾಜಕೀಯದತ್ತ ಒಲವು ತೋರಿದ್ರಾ ಚಕ್ರವರ್ತಿ ಸೂಲಿಬೆಲೆ ?

ಹೊಸ ಸೇರ್ಪಡೆ

1-eewqeeeqwewqewq

Australia; ಕೇಂದ್ರೀಯ ಗುತ್ತಿಗೆ ಪಟ್ಟಿ: ವಾರ್ನರ್‌, ಸ್ಟೋಯಿನಿಸ್‌, ಅಗರ್‌ ಹೊರಕ್ಕೆ

1-hanuma

ACA ವಿರುದ್ಧ ಹೇಳಿಕೆ: ಕ್ರಿಕೆಟಿಗ ಹನುಮ ವಿಹಾರಿಗೆ ನೋಟಿಸ್‌

1-wewqqewqe

Rajasthan Royals; ಪ್ರಸಿದ್ಧ್ ಕೃಷ್ಣ ಬದಲಿಗೆ ಕೇಶವ ಮಹಾರಾಜ್‌

1-dsad

Uttara Kannada ಸಮುದ್ರದಲ್ಲಿ ಮತ್ತೆ ಜೆಲ್ಲಿಫಿಶ್‌ಗಳು: ಪ್ರವಾಸಿಗರಿಗೆ ಭಯ

1-dsadasd

IPL ;ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ರಾಜಸ್ಥಾನ್ ರಾಯಲ್ಸ್ ಗೆ 12 ರನ್‌ಗಳ ಜಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.